ಹಿಂದಿಯ ಬಿಗ್ ಬಾಸ್ (Bigg Boss) ಶೋನ ವಿನ್ನರ್ ಮತ್ತು ಸ್ಟ್ಯಾಂಡಪ್ ಕೆಮಿಡಿಯನ್ ಮುನಾವರ್ ಫಾರೂಕಿ (Munawar Farooqui) ಮತ್ತೊಂದು ಮದುವೆಯಾಗಿದ್ದಾರೆ (Marriage) ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇದೊಂದು ಗಾಸಿಪ್ ಎನ್ನುವ ಅರ್ಥದಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಈಗ ಫಾರೂಕಿ ಮದುವೆಯಾಗಿರುವುದು ನಿಜವಾಗಿದೆ.
ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ (Mehjabeen Kotwala) ಅವರನ್ನು ಫಾರೂಕಿ ಮದುವೆಯಾಗಿರುವುದು ನಿಕ್ಕಿಯಾಗಿದೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಹಲವಾರು ಜನರು ಶೇರ್ ಮಾಡಿದ್ದಾರೆ. ಈ ದಂಪತಿಗೆ ವಿಶ್ ಕೂಡ ಮಾಡಿದ್ದಾರೆ. ಈಗಾಗಲೇ ಮೆಹಜಬೀನ್ ಅವರಿಗೆ ಮದುವೆ ಆಗಿರುವ ವಿಚಾರವನ್ನೂ ಹಲವರು ಹಂಚಿಕೊಂಡಿದ್ದಾರೆ. ಒಂದು ಮಗು ಕೂಡ ಅವರಿಗೆ ಇದೆಯಂತೆ.
ಫಾರೂಕಿ ಕೂಡ ಈಗಾಗಲೇ ಮದುವೆಯಾಗಿದ್ದಾರೆ. ಅವರಿಗೊಂದು ಮಗು ಕೂಡ ಇದೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮುಂಬೈನ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಕೆಲವು ಸ್ನೇಹಿತರಿಗೆ ಮಾತ್ರ ಮದುವೆ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.