ಕನ್ನಡದ ಸೀಸನ್ 11ರ ‘ಬಿಗ್ ಬಾಸ್’ (Bigg Boss Kannada 11) ಮನೆಯ ಆಟ ರಂಗೇರಿದೆ. ಶೋ ಶುರುವಾದ ಮೊದಲ ದಿನದಿಂದಲೇ ಜಗಳ ಕಿರಿಕ್‌ನಿಂದಲೇ ಬಿಗ್ ಬಾಸ್ ಶೋ ಹೈಲೆಟ್ ಆಗಿದೆ. ಇನ್ನೂ ನಟಿ ಯಮುನಾ ಔಟ್ ಆದ್ಮೇಲೆ 2ನೇ ವಾರ ದೊಡ್ಮನೆಯಲ್ಲಿ ಎಲಿಮಿನೇಷನ್ ಪ್ರತಿಕ್ರಿಯೆ ನಡೆದಿಲ್ಲ. ಹೀಗೆ ಆದಾಗ ‘ಬಿಗ್ ಬಾಸ್’ ಟ್ವಿಸ್ಟ್ ಕೊಡೋದು ವಾಡಿಕೆ. ಈ ವಾರ ಯಾರು ಯಾವಾಗ ಬೇಕಿದ್ದರೂ ಮನೆಯಿಂದ ಹೊರಕ್ಕೆ ಹೋಗಬಹುದು ಎಂದು ಬಿಗ್ ಬಾಸ್ ಹೇಳಿದ್ದು, ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಇದರ ನಡುವೆ ವರಸೆ ಬದಲಿಸಿದ ಕ್ಯಾಪ್ಟನ್ ಶಿಶಿರ್‌ಗೆ ಬಿಗ್ ಬಾಸ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಯೊಳಗೂ ಹೊರಗೂ ಧರ್ಮ, ಉಗ್ರಂ ಮಂಜುದ್ದೇ ಹವಾ- ಏನದು ಅಪ್‌ಡೇಟ್?
ನವರಾತ್ರಿಯ ಸಮಯದಲ್ಲಿ ಬಿಗ್ ಬಾಸ್‌ನಲ್ಲಿ ಕಳೆದ ವರ್ಷ ಯಾರನ್ನೂ ಹೊರಕ್ಕೆ ಕಳುಹಿಸಿರಲಿಲ್ಲ. ಈ ವರ್ಷವೂ ಹಾಗೆಯೇ ಆಗಬಹುದು ಎಂದು ಅನೇಕರು ಊಹಿಸಿದ್ದರು. ಹಾಗೆಯೇ ಆಗಿದೆ. ಈ ಬಾರಿಯೂ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಇನ್ನೂ ದೊಡ್ಮನೆಯ 2ನೇ ಕ್ಯಾಪ್ಟನ್ ಆಗಿ ಶಿಶಿರ್ ಆಯ್ಕೆಗೊಂಡಿದ್ದಾರೆ. ಅವರು ಪ್ರತಿ ನಿರ್ಧಾರವನ್ನು ಸಾಕಷ್ಟು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಿದೆ. ಅದೇ ರೀತಿ ನೇರ ನಾಮಿನೇಷನ್‌ಗೆ ಅವರಿಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಅವರು ಬಳಕೆ ಮಾಡಿಕೊಂಡು ಮೊದಲು ಅನುಷಾ ಅವರನ್ನು ನಾಮಿನೇಟ್ ಮಾಡಿದರು. ಆ ಬಳಿಕ ಧನರಾಜ್, ಹಂಸ, ಧರ್ಮ, ಗೌತಮಿ ಅವರನ್ನು ನಾಮಿನೇಟ್ ಮಾಡಿದರು.
ಬಳಿಕ ಇದು ನೇರ ನಾಮಿನೇಷನ್ ಅಲ್ಲ. ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ ಎಂದು ಬಿಗ್ ಬಾಸ್ ಹೇಳಿರೋದಾಗಿ ಶಿಶಿರ್ ಎಲ್ಲರ ಎದುರು ವಿವರಣೆ ನೀಡಿದರು. ಈ ವಿವರಣೆಯ ಬಳಿಕ ಬಿಗ್ ಬಾಸ್, ಶಿಶಿರ್ ಅವರನ್ನು ಕರೆಸಿ, ನಾನೆಲ್ಲಿ ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ ಎಂದು ಹೇಳಿದೆ ಎಂದು ಪ್ರಶ್ನೆ ಮಾಡಿದರು. ಬಿಗ್ ಬಾಸ್ ವಾರ್ನಿಂಗ್ ಕೊಟ್ಟ ಬಳಿಕ ಮನೆಮಂದಿಗೆ ಶಿಶಿರ್ (Shishir) ನಾಮಿನೇಷನ್ ಕುರಿತು ಸ್ಪಷ್ಟನೆ ನೀಡಿದರು. ನಾಮಿನೇಟ್ ಆದವರಿಗೆ ಗೇಮ್ ಆಡಿ ಗೆಲ್ಲೋಕೆ ಅವಕಾಶ ಇರಲ್ಲ ಎಂದು ಸ್ಪಷ್ಟಪಡಿಸಿದರು ಶಿಶಿರ್.
ಅಂದಹಾಗೆ, ಶಿಶಿರ್ ಈ ಹಿಂದೆ ಸೊಸೆ ತಂದ ಸೌಭಾಗ್ಯ, ಕುಲವಧು, ಸೇರಿದಂತೆ ತೆಲುಗಿನ ಸೀರಿಯಲ್‌ನಲ್ಲೂ ಲೀಡ್ ಹೀರೋ ಆಗಿ ನಟಿಸಿದ್ದಾರೆ. 2018ರಲ್ಲಿ ‘ಮಿಸ್ಟರ್ ಎಲ್‌ಎಲ್‌ಬಿ’ ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದರು. ಆದರೆ ಸಿನಿಮಾಗಳಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ.