‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ವಿನಯ್ ಗೌಡ (Vinay Gowda) ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆ ಆಟ ಮುಗಿದ ನಂತರ ಮೊದಲ ಬಾರಿಗೆ ಟಿವಿ ಪರದೆಗೆ ವಿನಯ್ ಕಮ್‌ಬ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ:ಮೇ 1ಕ್ಕೆ ಟಗರು ಪುಟ್ಟಿ ಮಾನ್ವಿತಾ ಕಾಮತ್ ಮದುವೆ
‘ಚುಕ್ಕಿತಾರೆ’ (Chukkitaare) ಎಂಬ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ವಿನಯ್ ಮಾತ್ರವಲ್ಲ, ಅವರ ಪತ್ನಿ ಅಕ್ಷತಾ ಕೂಡ ಕಾಣಿಸಿಕೊಂಡಿದ್ದಾರೆ. ಸಿಂಗರ್ ನವೀನ್ ಸಜ್ಜು (Naveen Sajju) ಹೀರೋ ಆಗಿ ನಟಿಸುತ್ತಿದ್ದಾರೆ.
ವಿನಯ್ ಮತ್ತು ಅಕ್ಷತಾ ಗೌಡ ‘ಚುಕ್ಕಿತಾರೆ’ (Chukkitaare) ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರ ಸೀರಿಯಲ್‌ನಲ್ಲಿ ತಿರುವು ಕೊಡಲಿದೆ.
ಇದೀಗ ವಿನಯ್‌ಗೆ ಕನ್ನಡ ಪ್ರಾಜೆಕ್ಟ್‌ಗಳ ಜೊತೆ ಬೇರೇ ಭಾಷೆಗಳಲ್ಲಿಯೂ ಆಫರ್‌ಗಳು ಅರಸಿ ಬರುತ್ತಿವೆ. ಜೊತೆಗೆ ಉದ್ಯಮ ಕ್ಷೇತ್ರದಲ್ಲಿಯೂ ಯೋಜನೆ ಇದೆ.