ಕಿರುತೆರೆ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಶೋ ಅಂದರೆ ಈ ವರ್ಷದ ಬಿಗ್ ಬಾಸ್ ಸೀಸನ್ 10. 112 ದಿನಗಳ ಆಟಕ್ಕೆ ಅಂತಿಮ ಪರದೆ ಬೀಳುವ ಸಮಯ ಬಂದಿದೆ. ವಿನ್ನರ್ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗ ಸ್ಟ್ರಾಂಗ್ ಸ್ಪರ್ಧಿ ವಿನಯ್ ಗೌಡ (Vinay Gowda) ಅವರು 4ನೇ ರನ್ನರ್ ಅಪ್ ಆಗಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಮನೆಯ (Bigg Boss Kannada 10) ವಿನಯ್ ಅಭಿಮಾನಿಗಳಿಗೆ ಇದೀಗ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ ಅವರು 5ನೇ ರನ್ನರ್ ಅಪ್ ಆಗಿ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಈಗ ವಿನಯ್ ಕೂಡ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ವರ್ತೂರು ಮದುವೆ ಬಗ್ಗೆ ಮಾತನಾಡುತ್ತಿದ್ದಂತೆ ನಾಚಿ ನೀರಾದ ಬೆಂಕಿ
ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಟಫ್ ಸ್ಪರ್ಧಿಯಾಗಿಯೇ ಗುರುತಿಸಿಕೊಂಡವರು ವಿನಯ್. ಸಂಗೀತಾ, ಕಾರ್ತಿಕ್ ಅಂತಹ ಸ್ಟ್ರಾಂಗ್ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟಿದ್ದಾರೆ ವಿನಯ್. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಮಾಹಿತಿ ಪ್ರಕಾರ, ವಿನಯ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ.
ತುಕಾಲಿ ಸಂತು ಎಲಿಮಿನೇಟ್ ನಂತರ ವರ್ತೂರು ಸಂತೋಷ್, ವಿನಯ್ ಔಟ್ ಆಗಿದ್ದಾರೆ. ಟಾಪ್ 3ನೇ ಸ್ಥಾನದಲ್ಲಿ ಕಾರ್ತಿಕ್, ಡ್ರೋನ್ ಪ್ರತಾಪ್, ಸಂಗೀತಾ (Sangeetha Sringeri) ಇದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.