ಹುಲಿ ಉಗುರು ಲಾಕೆಟ್ (Tiger Claw Pendant) ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್‌ಗೆ (Varthur Santhosh) ಜಾಮೀನು ಮಂಜೂರಾಗಿತ್ತು. 2ನೇ ಎಸಿಜೆಎಂ ನ್ಯಾಯಾಲಯ 4 ಸಾವಿರ ನಗದು ಶ್ಯೂರಿಟಿ ಅಥವಾ ಒಬ್ಬ ವ್ಯಕ್ತಿಯ ಶ್ಯೂರಿಟಿ, ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಅದರಂತೆಯೇ ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ವರ್ತೂರು ಸಂತೋಷ್ ರಿಲೀಸ್ ಆಗಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಾಸ್‌ಗೆ (Bigg Boss Kannada 10) ಮತ್ತೆ ಸಂತೋಷ್ ಎಂಟ್ರಿ ಕೊಡ್ತಿದ್ದಾರೆ.
Advertisement
ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಬಿಗ್ ಬಾಸ್ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಸಂತೋಷ್ ರಿಲೀಸ್ ಸಂದರ್ಭದಲ್ಲಿ ವಕೀಲರು, ಬಿಗ್ ಬಾಸ್ ಸಿಬ್ಬಂದಿಗಳು ಮಾತನಾಡದಂತೆ ಸೂಚನೆ ನೀಡಿದ್ದಾರೆ. ಅದರಂತೆಯೇ ಯಾವುದೇ ಪ್ರತಿಕ್ರಿಯೆ ನೀಡದೇ ಸಂತೋಷ್ ತೆರಳಿದ್ದಾರೆ.
Advertisement
Advertisement
ಸಂತೋಷ್ ಪರ ವಕೀಲ ನಟರಾಜ್ ಅವರು ಸಂತೋಷ್ ರಿಲೀಸ್ ಬಗ್ಗೆ ಹೇಳಿಕೆ ನೀಡಿದ್ದು, ಈ ತೀರ್ಪು ಕರ್ನಾಟಕ ಜನರ ತೀರ್ಪು ಆಗಿದೆ. ಅವರ ಪರವಾಗಿ ರಾಜ್ಯದ ಜನರಿದ್ದಾರೆ ಎಂದಿದ್ದಾರೆ. ರಾಜಕಾರಣಿಗಳಿಗೆ ಮತ್ತು ನಟರಿಗೆ ಒಂದೊಂದು ಕಾನೂನು ಅಂತ ಏನು ಇಲ್ಲ. ವರ್ತೂರು ಸಂತೋಷ್ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಅರಣ್ಯಾಧಿಕಾರಿಗಳು ಸುಳ್ಳು ಪ್ರಕರಣವನ್ನ ದಾಖಲು ಮಾಡಿದ್ದಾರೆ. ಅವರ ವಿರುದ್ಧವೇ ಕಾನೂನು ಹೋರಾಟ ನಡೆಸುತ್ತೇವೆ ಎಂದು ಖಡಕ್ ಆಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಡ್ರೋನ್ ತಯಾರಿಕೆಗೆ ಬಂದ ಹಣವೆಷ್ಟು? ರಿವೀಲ್ ಮಾಡಿದ್ರು ಪ್ರತಾಪ್
Advertisement
ಬಳಿಕ ಸಂತೋಷ ಅವರ ಸಹೋದರ ಚಂದು ಕೂಡ ಪ್ರತಿಕ್ರಿಯಿಸಿ, ಸಂತೋಷ್ ಬಂಧನದಿಂದ ಸೆಲೆಬ್ರಿಟಿಗಳಿಗೊಂದು, ರಾಜಕಾರಕಾರಣಿಗಳಿಗೊಂದು ನ್ಯಾಯ, ರೈತನಿಗೊಂದು ನ್ಯಾಯ ಅನ್ನೋದು ಗೊತ್ತಾಗ್ತಿದೆ. ಈ ನಡೆ ನಿಜಕ್ಕೂ ಬಹಳ ನೋವಾಗ್ತಿದೆ ಎಂದಿದ್ದಾರೆ. ಸಂತೋಷರನ್ನ ಕಳ್ಳನ ರೀತಿ, ಟೆರರಿಸ್ಟ್ ಅನ್ನುವ ಹಾಗೇ ನಡೆಸಿಕೊಂಡಿದ್ದಾರೆ. ಸಂತೋಷ್ ಮತ್ತೆ ಬಿಗ್ ಬಾಸ್‌ಗೆ ಹೋಗಬೇಕು. ಮತ್ತೆ ನಾಳೆಗೆ ಅವರು ಎಲಿಮಿನೇಟ್ ಆಗಿ ಬರಲಿ ಪರ್ವಾಗಿಲ್ಲ. ನಾವು ಅವರನ್ನು ಅಲ್ಲಿಂದಲೇ ರಿಸೀವ್ ಮಾಡಿಕೊಳ್ಳಬೇಕು ಅಂತ ಆಸೆಯಿದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕುತ್ತಿಗೆಯಲ್ಲಿ ಸಂತೋಷ್ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದರು. ಈಗ ಜಾಮೀನು ಮಂಜೂರು ಆಗಿರುವ ಬೆನ್ನಲ್ಲೇ ವರ್ತೂರ್ ಸಂತೋಷ್ ರಿಲೀಸ್ ಆಗಿದ್ದಾರೆ.