ಕಾಂಟ್ರವರ್ಸಿ ಕ್ವೀನ್ ಉರ್ಫಿ ಜಾವೇದ್ (Urfi Javed) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಚಿತ್ರ ವಿಚಿತ್ರ ಡ್ರೆಸ್ ತೊಡುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ. ಇದೀಗ ಮತ್ತೆ ಉರ್ಫಿಯ ನಯಾ ಅವತಾರ ಪಡ್ಡೆಹುಡುಗರ ತಲೆ ಕೆಡಿಸಿದೆ. ನಟಿಯ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಉರ್ಫಿ ಜಾವೇದ್ಗೂ ಬಟ್ಟೆಗೂ ಆಗಿ ಬರಲ್ಲ. ಸದಾ ಅರೆ ಬರೆ ಬಟ್ಟೆಯಲ್ಲೇ ಎಂಟ್ರಿ ಕೊಡ್ತಾರೆ. ಈಗ ಕೆಂಪು ಬಣ್ಣದ ನೆಟ್ ಡ್ರೆಸ್ನಲ್ಲಿ ಮೈ ಕಾಣುವಂತಹ ಡ್ರೆಸ್ನಲ್ಲಿ ಬಂದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದಿರೋ ಮಾಜಿ ಬಿಗ್ ಬಾಸ್ (Bigg Boss) ತಾರೆಯನ್ನ ನೋಡಿ ರಾಜ್ ಕುಂದ್ರಾ ತಂಗಿನಾ ಎಂದು ಕಾಲೆಳೆದಿದ್ದಾರೆ.
ಬಿಗ್ ಬಾಸ್ ಒಟಿಟಿಯಿಂದ(Bigg Boss Ott) ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಹೌಸ್ ಅರೆಸ್ಟ್ ಗೇಮ್ (House Arrest Game) ರಿಯಾಲಿಟಿ ಶೋನ ಮೊದಲ ಸೀಸನ್ನಲ್ಲಿಯೂ ಅವರು ಭಾಗವಹಿಸಿದ್ದರು. ಇದನ್ನೂ ಓದಿ:ಶಾಕಿಂಗ್ ಲುಕ್ನಲ್ಲಿ ಎಂಟ್ರಿ ಕೊಟ್ರು ‘ಹುಚ್ಚ’ ನಾಯಕಿ- ಅಷ್ಟಕ್ಕೂ ರೇಖಾಗೆ ಏನಾಯ್ತು?
ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಹಾಗಾಗಿ ನಟಿ ನಿರಂತರವಾಗಿ ಟ್ರೋಲ್ (Troll) ಆಗಿದ್ದರು.
ಕೆಲವು ಜನರು ನನ್ನನ್ನು ಗೌರವಿಸುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಲು ಯಾರೂ ಬಯಸುವುದಿಲ್ಲ. ನಾನು ಎಲ್ಲರ ಗಮನ ಸೆಳೆಯುವ ಸಲುವಾಗಿಯೇ ಈ ರೀತಿಯ ಬಟ್ಟೆಗಳನ್ನು ಧರಿಸುವುದು ಎಂದು ಉರ್ಫಿ ಒಪ್ಪಿಕೊಂಡಿದ್ದರು. ಆದರೆ ಈ ಕುರಿತು ಕಾಮೆಂಟ್ ಮಾಡಿದರೆ ನನಗೆ ಇಷ್ಟ ಆಗುವುದಿಲ್ಲ ಎಂದು ನಟಿ ಹೇಳಿದ್ದರು.