ತಮಿಳು ಬಿಗ್ ಬಾಸ್: ಇತಿಹಾಸ ಬರೆದ ವಿನ್ನರ್ ಅರ್ಚನಾ

Public TV
1 Min Read
Archana Ravichandran 2

ಮೊನ್ನೆಯಷ್ಟೇ ತೆಲುಗು ಬಿಗ್ ಬಾಸ್ (Bigg Boss Tamil) ಫಿನಾಲೆ ಮುಗಿಸಿ ಬೀಗಿತ್ತು. ಇದೀಗ ತಮಿಳಿನ ಬಿಗ್ ಬಾಸ್ ಕೂಡ ಮುಗಿದಿದೆ. ಈ ಬಾರಿ ಬಿಗ್ ಬಾಸ್ ಟೈಟಲ್ (Winner) ಗೆದ್ದಿರುವ ಅರ್ಚನಾ ರವಿಚಂದ್ರನ್ (Archana Ravichandran) ಹೊಸ ಇತಿಹಾಸವನ್ನು ಬರೆದಿದ್ದಾರೆ.  ಅರ್ಚನಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಿಗ್ ಬಾಸ್ ಮನೆ ಪ್ರವೇಶ ಮಾಡಿದವರು, ತಮಿಳು ಬಿಗ್ ಬಾಸ್ ಇತಿಹಾಸದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಟೈಟಲ್ ವಿನ್ ಆಗಿದ್ದಾರೆ.

Archana Ravichandran 3

ಅರ್ಚನಾ ತಮಿಳು ಬಿಗ್ ಬಾಸ್ ಗೆದ್ದಿದ್ದರೆ, ಮೊದಲ ರನ್ನರ್ ಅಪ್ ಆಗಿ ಮಣಿಚಂದ್ರನ್ ಹೊರ ಹೊಮ್ಮಿದ್ದಾರೆ. ಅರ್ಚನಾ ಗೆಲುವು ಸಾಧಿಸುತ್ತಿದ್ದಂತೆಯೇ ಭಾರೀ ಮೊತ್ತದ ಹಣವೇ ಅವರ ಗೆಲುವಿಗೆ ಸಾಕ್ಷಿಯಾಗಿದೆ. ವಾರಕ್ಕೆ ಅವರು ಎರಡೂವರೆ ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

Archana Ravichandran 1

77 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅರ್ಚನಾ, ಟಫ್ ಕಂಟೆಸ್ಟೆಂಟ್ ಆಗಿದ್ದರು. ಕೊನೆಗೂ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಬಿಗ್ ಬಾಸ್ ಟ್ರೋಫಿಯ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಬಂದಿದೆ. ಅಲ್ಲದೇ, ಹಲವು ಉಡುಗೊರೆಯನ್ನೂ ಅವರಿಗೆ ನೀಡಲಾಗಿದೆ.

ಕನ್ನಡದ ಬಿಗ್ ಬಾಸ್ ಕೂಡ ಫಿನಾಲೆ ಹಂತದಲ್ಲಿದೆ. ಇನ್ನೆರಡು ವಾರ ಕಳೆದರೆ, ಕನ್ನಡದ ಬಿಗ್ ಬಾಸ್ ಕೂಡ ಮುಗಿಯಲಿದೆ. ಈ ಬಾರಿ ಟ್ರೋಫಿ ಯಾರ ಪಾಲಾಗಲಿದೆ ಎನ್ನುವುದೇ ಸದ್ಯದ ಕುತೂಹಲ.

Share This Article