ಬಿಗ್ ಬಾಸ್ ಶೋ ತಮಿಳಿನಲ್ಲೂ (Bigg Boss Tamil 7) ಪ್ರಸಾರವಾಗುತ್ತಿದೆ. ಕಳೆದ ವಾರ ಸೀಸನ್ 7 ಬಿಗ್ ಬಾಸ್‌ಗೆ ಚಾಲನೆ ಸಿಕ್ಕಿದೆ. ಹೀಗಿರುವಾಗ ಎದೆ ನೋವಿನ ಸಮಸ್ಯೆಯಿಂದ ಶೋ ಅರ್ಧಕ್ಕೆ ಬಿಟ್ಟು ಬಾವಾ ಚೆಲ್ಲದುರೈ ಹೊರ ಬಂದಿದ್ದಾರೆ. ಕಮಲ್ ಹಾಸನ್ (Kamal Haasan) ನಿರೂಪಣೆಯ ಸೀಸನ್ 7ರ ಬಿಗ್ ಬಾಸ್‌ನಿಂದ ರೈಟರ್ ಬಾವಾ ಅವರು ಹೊರನಡೆದಿದ್ದಾರೆ.
ತಮಿಳು ಬಿಗ್ ಬಾಸ್ ಶೋಗೆ ಚಾಲನೆ ನೀಡಿ, ಒಂದು ವಾರ ಕಳೆದಿದೆ. ಮೊದಲ ವಾರದ ಎಲಿಮಿನೇಟ್ ಆಗಿ ಅನನ್ಯಾ ರಾವ್ ಹೊರ ಬಂದಿದ್ದರು. ಈ ಬೆನ್ನಲ್ಲೇ ಬರಹಗಾರ ಬಾವಾ ಚೆಲ್ಲದುರೈ ಶೋನಿಂದ ಹೊರನಡೆದಿದ್ದಾರೆ. ಬಾವಾ ಕಳೆದ ವಾರ ನಾಮಿನೇಟ್ ಆಗಿದ್ದರು. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ
ಮಾನಸಿಕ ಆರೋಗ್ಯ, ದೈಹಿಕ ಸಮಸ್ಯೆಯಿಂದ ನನಗೆ ಆಡಲು ಆಗುತ್ತಿಲ್ಲ. ಶೋನಿಂದ ಹೊರ ಹೋಗಲು ಅನುಮತಿ ನೀಡಿ ಎಂದು ಕನ್ಫೆಷನ್ ರೂಮ್‌ನಲ್ಲಿ ಬಾವಾ ಅವರು ಬಿಗ್ ಬಾಸ್‌ಗೆ ಮನವಿ ಮಾಡಿದ್ದರು. ಅದರಂತೆ ಅವರು ಶೋನಿಂದ ಎಕ್ಸಿಟ್ ಆಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]