ಬಾಕ್ಸಾಫೀಸ್‌ನಲ್ಲಿ `ಕಾಂತಾರ’ (Kantara) ಕೋಟಿ ಕೋಟಿ ಲೂಟಿ ಮಾಡಿ ದಾಖಲೆ ಬರೆದ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ರಿಷಬ್ ಶೆಟ್ಟಿ (Rishab Shetty) ಮಿಂಚ್ತಿದ್ದಾರೆ. `ಕಾಂತಾರ’ ಸಿನಿಮಾ ಕಥೆಗೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಹೀಗಿರುವಾಗ `ಕಾಂತಾರ’ ಚಿತ್ರ ನೋಡಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ (Sonu Srinivas Gowda) ಜ್ವರ ಬಂದಿತ್ತಂತೆ. ಈ ಹಿಂದಿನ ವಿಚಾರವನ್ನು ಸೋನು ಇದೀಗ ರಿವೀಲ್ ಮಾಡಿದ್ದಾರೆ.


`ಕಾಂತಾರಾ’ ಸಿನಿಮಾ ನೋಡಿ ಕೊಂಡು ಮನೆಗೆ ಬಂದು ಮಲಗಿದ್ದಾಗ ರಾತ್ರಿ ನನಗೆ ಚಳಿ ಜ್ವರ ಬಂದಿತ್ತು. ಸ್ವಲ್ಪ ಆರೋಗ್ಯ ಕೆಟ್ಟಿತ್ತು, ಜೊತೆಗೆ ಈ ಚಳಿ ಜ್ವರ ಇದ್ದ ಕಾರಣ ಆಸ್ಪತ್ರೆಗೆ ಹೋದೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಬೆಂಗಳೂರಿನಲ್ಲಿ ಒಂದು ವಾರ ಮಂಡ್ಯದಲ್ಲಿ ಒಂದು ವಾರ ಆಸ್ಪತ್ರೆಯಲ್ಲಿದ್ದೆ. ಈ ಚಿತ್ರದ ಕೊನೆ 20 ನಿಮಿಷ ನೋಡಿ ನನಗೆ ಹೇಗೆ ಅನಿಸಿತ್ತು ಅಂದ್ರೆ ಈ ರೀತಿಯ ಸಿನಿಮಾಗಳನ್ನು ಮಾಡಲು ಹೇಗೆ ಸಾಧ್ಯ. ಕೆಲವೊಂದು ಸಿನಿಮಾಗಳಲ್ಲಿ ತುಂಬಾ ಗ್ರಾಫಿಕ್ಸ್ ಮಾಡಿರುತ್ತಾರೆ ಆದರೆ `ಕಾಂತಾರ’ ತುಂಬಾ ಸಿಂಪಲ್ ಮತ್ತು ವಿಭಿನ್ನವಾಗಿ ಮಾಡಿದ್ದಾರೆ ಎಂದು ಚಿತ್ರದ ಬಗ್ಗೆ ಸೋನು ಹಾಡಿ ಹೊಗಳಿದ್ದಾರೆ.
ಬಿಗ್ ಬಾಸ್ ಒಟಿಟಿ ನಂತರ ಈಗ ಸಿನಿಮಾಗಾಗಿ ಸೋನು ಎದುರು ನೋಡ್ತಿದ್ದಾರೆ. ಸೋನು ಅವರದ್ದೇ ಯೂಟ್ಯೂಬ್, ಸೋಷಿಯಲ್ ಮೀಡಿಯಾ ಪ್ರಮೋಷನ್ ಅಂತಾ ಬ್ಯುಸಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k



