ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ವಿಚಾರ ಅಂದರೆ ಸೋನು ಗೌಡ (Sonu Srinivas Gowda) ಬಿಕಿನಿ ವಿಡಿಯೋ. ಕಳೆದ ಎರಡ್ಮೂರು ದಿನಗಳಿಂದ ಬಿಕಿನಿಯಲ್ಲಿ (Bikini) ಕಾಣಿಸಿಕೊಂಡಿರುವ ಸೋನು, ಹಾಟ್ ಅವತಾರ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಹೀಗಿರುವಾಗ ಸೋನು ತನ್ನ ಸ್ನೇಹಿತೆಯ ಜೊತೆ 2 ಲಕ್ಷ ರೂಪಾಯಿ ಹನಿಮೂನ್ ಪ್ಯಾಕೇಜ್‌ನಲ್ಲಿ ಮಾಲ್ಡೀವ್ಸ್ ಟ್ರಿಪ್ ಹೋಗಿದ್ದಾರೆ. ಈ ಬಗ್ಗೆ ಸ್ವತಃ ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಾರೆ. ಇದನ್ನೂ ಓದಿ:ಸಾಗರದೂರಲ್ಲಿ ಸಪ್ತಸಾಗರ ಮೂವಿ ಟೀಂ- ಅಲಂಕಾರ್ ಥಿಯೇಟರ್‌ಗೆ ರಕ್ಷಿತ್ ಶೆಟ್ಟಿ
ಬಿಗ್ ಬಾಸ್ (Bigg Boss Kannada) ಖ್ಯಾತಿಯ ಸೋನು ಗೌಡ ಮತ್ತು ಸ್ನೇಹಿತೆ ಮಾಲ್ಡೀವ್ಸ್(Maldvies) ಟ್ರಿಪ್‌ಗೆ ಹನಿಮೂನ್ ಪ್ಯಾಕೇಜ್‌ನಲ್ಲಿ ಹೋಗಿದ್ದಾರೆ. ಹನಿಮೂನ್ ಪ್ಯಾಕೇಜ್‌ನಲ್ಲಿ ಒಂದು ಜ್ಯೂಸ್ ಕೂಡ ಕೊಡುವುದಿಲ್ಲ. ನಾವು ಕಾಫಿ ಬೇಕು ಎಂದು ಕೇಳಿದರೆ ಅವರು ಹಾಲಿನ ಪೌಡರ್ ಕೊಡ್ತಾರೆ. ನಾವು ಹನಿಮೂನ್ ಪ್ಯಾಕೇಜ್‌ನಲ್ಲಿ ಬಂದಿರುವುದಕ್ಕೆ ಕೇವಲ 2 ಲಕ್ಷ ರೂಪಾಯಿ ಆಯ್ತು. ಮಾಲ್ಡೀವ್ಸ್ ಎಂಜಾಯ್ ಮಾಡುತ್ತಿದ್ದೀನಿ ಎಂದಿದ್ದಾರೆ. ಬಳಿಕ ನಾನು ಇಲ್ಲಿ ಸ್ಮೋಕ್ (Smoke) ಮಾಡಿದೆ ಇಲ್ಲಿ ಒಂದು ಸಿಗರೇಟ್ ಪ್ಯಾಕೇಟ್ ಬೆಲೆ 1600 ರೂಪಾಯಿ ಆಯ್ತು ಎಂದು ಮಾತನಾಡಿದ್ದಾರೆ.
ಮಾಲ್ಡೀವ್ಸ್‌ಗೆ ಬಂದ ಮೇಲೆ ನಾನು ವೈರಲ್ ಆಗುತ್ತೇನೆ ಎಂದು ಗೊತ್ತಿರಲಿಲ್ಲ. ನಮ್ಮ ಖುಷಿಗೆ ನಾನು ಎಂಜಾಯ್ ಮಾಡಬೇಕು. ಅಂದ ಮೇಲೆ ಬಿಕಿನಿ ಹಾಕಬೇಕು ಅಲ್ವಾ? ನನಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವುದಕ್ಕೆ ಸಂಭ್ರಮ ಆಚರಣೆ ಮಾಡಿಕೊಳ್ಳುವುದಿಲ್ಲ. ಬೆಳಗ್ಗೆ ಎದ್ದು ತಿನ್ನೋದು ಮಲಗೋದು ಫೋಟೋಶೂಟ್ ಮಾಡೋದು- ಸ್ವಿಮ್ಮಿಂಗ್ ಮಾಡುವುದು ಅಷ್ಟೇ ಕೆಲಸ ಎಂದು ತಮ್ಮ ದಿನಚರಿಯ ಬಗ್ಗೆ ಸೋನು ಗೌಡ ಹೇಳಿದ್ದಾರೆ.
ಇನ್ನೂ ಸೋನು ಶೇರ್ ಮಾಡಿರುವ ಬಿಕಿನಿ ವಿಡಿಯೋ 19 ಮಿಲಿಯನ್‌ಗೂ ಅಧಿಕ ಅಂದರೆ 1 ಕೋಟಿ 90 ಲಕ್ಷ ವಿವ್ ಕಂಡಿದೆ. 10 ಲಕ್ಷ ಇನ್ಸಾಗ್ರಾಂ ಫಾಲೋವರ್ಸ್ ಪಡೆದಿರುವ ಸೋನು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ.




ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್ (Saanya Iyer) ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್‌ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ.




