ನೆಗೆಟಿವ್ಸ್ ಹೇಗೆ ಅವಾಯ್ಡ್ ಮಾಡಬೇಕು ಎಂದು ರಶ್ಮಿಕಾ ನೋಡಿ ಕಲಿತಿದ್ದೇನೆ- ಸೋನು

Public TV
1 Min Read
sonu gowda 2 1

ಸೌತ್ ಮತ್ತು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿರುವ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಸೋನು ಗೌಡ (Sonu Gowda) ಮಾತನಾಡಿದ್ದಾರೆ. ರಶ್ಮಿಕಾ ಅವರ ಬಿಂಬ ನಾನು ಎಂದು ನಟಿಯ ಮೇಲಿನ ಅಭಿಮಾನದ ಬಗ್ಗೆ ಮುಕ್ತವಾಗಿ ಸೋನು ರಿಯಾಕ್ಟ್ ಮಾಡಿದ್ದಾರೆ.

sonu gowda

‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಎಂದರೆ ತನಗಿಷ್ಟ ಎಂದು ಸಂದರ್ಶನದಲ್ಲಿ ಸೋನು ನೆಚ್ಚಿನ ಬಗ್ಗೆ ಹೇಳಿದ್ದಾರೆ. ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ. ರಶ್ಮಿಕಾ ನನ್ನ ಇನ್ಸ್ಪಿರೇಷನ್. ಹೇಗೆಲ್ಲಾ ನೆಗೆಟಿವಿಯನ್ನ ದೂರ ಇಡಬೇಕು ಎಂದು ಅವರಿಂದ ಕಲಿತಿದ್ದೇನೆ.

ನೀನು ಸಿಕ್ಕಾಪಟ್ಟೆ ಟ್ರೋಲ್ (Troll) ಆಗ್ತಿದ್ಯಾ ಅಂದರೆ ಮಾತು ಬೇಡ. ಸಾಧನೆಯಿಂದ ಉತ್ತರ ಕೊಡು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಅಂದರೆ ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ಸೇಮ್ ನನಗೆ ರಶ್ಮಿಕಾ ಥರನೇ ಬೆಳೆಯಬೇಕು ಎಂದು ಆಸೆ ಇದೆ. ಅಮಿತಾಬ್ ಬಚ್ಚನ್ (Amitabh Bachchan) ಜೊತೆ ಎಲ್ಲ ಆಕ್ಟ್ ಮಾಡಿದ್ದಾರೆ. ಅದೆಲ್ಲಾ ಈಸಿ ಅಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಮಾತನಾಡಿದ್ದಾರೆ.‌ ಇದನ್ನೂ ಓದಿ:ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

ಕಳೆದ ವರ್ಷ ‘ಬಿಗ್ ಬಾಸ್ ಒಟಿಟಿ’ ಮೂಲಕ ಸೋನು ಗೌಡ ಪರಿಚಿತರಾದರು. ಸೋಷಿಯಲ್ ಮೀಡಿಯಾ ಸ್ಟಾರ್ ಈಗ ‘ಕ್ಯಾಡ್ಬರೀಸ್’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

Share This Article