‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸೋನು ಗೌಡ (Sonu ಬಿಕಿನಿ ಅವತಾರಾದಲ್ಲಿ ಕಾಣಿಸಿಕೊಂಡ ಮೇಲೆ ಪಡ್ಡೆಹುಡುಗರ ಪಾಲಿನ ಮನದರಸಿಯಾಗಿದ್ದಾರೆ. ಇದೀಗ ಬಿಕಿನಿ ಬಳಿಕ ಮತ್ತೆ ಹಾಟ್ & ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.
ಕಪ್ಪು ಬಣ್ಣದ ಧಿರಿಸಿನಲ್ಲಿ ಮಸ್ತ್ ಆಗಿ ಸೋನು ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ತೆರಳಿದ್ದ ಹಿಂದಿನ ಫೋಟೋಗಳನ್ನ ಮತ್ತೆ ಶೇರ್ ಮಾಡಿದ್ದಾರೆ. ಜೋಕಾಲಿ ಆಡುತ್ತಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್ನಲ್ಲಿ ‘ಗೀತಾ’ ಸೀರಿಯಲ್ ನಟಿ
ಬಿಕಿನಿ ವಿಡಿಯೋ ಶೇರ್ ಮಾಡಿದ ಮೇಲೆ ಸೋನು ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿದ್ದಾರೆ. ಸೋನು ಇನ್ಸ್ಟಾಗ್ರಾಂ ಖಾತೆ 1 ಮಿಲಿಯನ್ ರೀಚ್ ಪಡೆದಿದೆ. ಇದನ್ನೂ ಓದಿ:ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್ನಲ್ಲಿ ‘ಗೀತಾ’ ಸೀರಿಯಲ್ ನಟಿ
ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ(Sonu Srinivas Gowda), ಟ್ರೋಲ್ (Troll) ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.
ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.
ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.
ಟಿಕ್ ಟಾಕ್ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು.
ಬಿಗ್ ಬಾಸ್ ಕ್ಯಾಡ್ಬರೀಸ್ ಸಿನಿಮಾದಲ್ಲಿ ಸೋನು ಸ್ಪೆಷಲ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು ಅದ್ವಿತಿ ಶೆಟ್ಟಿ ಜೋಡಿಯಾಗಿ ನಟಿಸಿದ್ದಾರೆ.