ಈ ಬಾರಿ ಬಿಗ್‌ಬಾಸ್ ಗೆಲ್ಲುವ ಸ್ಪರ್ಧಿ ಗಿಲ್ಲಿನೇ (Gilli) ಎಂಬ ಮಾತನ್ನು ರಿಷಾ ಗೌಡ (Risha Gowda) ಹೇಳಿದ್ದಾರೆ.
ಬಿಗ್‌ಬಾಸ್ (Bigg Boss) 12 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿದ್ದ ರಿಷಾ ಗೌಡ ಐದು ವಾರದ ಬಳಿಕ ವಾಪಸ್ಸಾಗಿದ್ದಾರೆ. ಮನೆಗೆ ಹೋಗುವ ವೇಳೆಯಲ್ಲೂ ರಿಷಾ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಗಿಲ್ಲಿ ಮೇಲೆ ವಿಶೇಷ ಪ್ರೀತಿ ಇರುವ ವಿಚಾರ ಹೇಳಿಕೊಂಡಿದ್ದರು.
ಮನೆಯಿಂದ ಹೊರಗೆ ಬಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಬಾರಿ ಗಿಲ್ಲಿನೇ ಗೆಲ್ಲಬೇಕು. ನಾನು ಮನೆಗೆ ಎಂಟ್ರಿ ಕೊಟ್ಟಾಗ ಗಿಲ್ಲಿ ನನ್ನ ಚೆನ್ನಾಗಿ ವೆಲ್‌ಕಮ್ ಮಾಡ್ದ, ನಾನು ಚಟುವಟಿಕೆ ಸಮಯದಲ್ಲಿ ಹಾರ್ಟ್ ವಾಪಸ್ ಕೊಡಲಿಲ್ಲ ಎನ್ನುವುದನ್ನು ಗಿಲ್ಲಿ ಮನಸಿನಲ್ಲಿ ಇಟ್ಟುಕೊಂಡು ಇರಬಹುದು. ಆದರೆ ಬೇಕಂತನೇ ಕೊಡಲಿಲ್ಲ. ನಾನು ಈಸಿ ಗೋ ಅಂತ ಮನೆ ಜನ ಅನ್ಕೋಬಾರದು ಅಂತ ಕೊಟ್ಟಿರಲಿಲ್ಲ. ಗಿಲ್ಲಿ ಜೊತೆ ಸ್ಪೆಷಲ್ ಕನೆಕ್ಷನ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ 300 ಎಕ್ರೆ ಜಮೀನು ಖರೀದಿಸಿದ್ದ ಧರ್ಮೇಂದ್ರ
ಪ್ರತಿ ಶನಿವಾರ ಗಿಲ್ಲಿಗೆ ನಿನ್ನ ಮುಖ ತೋರಿಸು ಎನ್ನುತ್ತಿದ್ದೆ. ಗಿಲ್ಲಿ ಮುಖ ನೋಡಿದರೆ ನಾನು ಸೇವ್ ಆಗುತ್ತೇನೆ ಎಂಬ ಫೀಲ್ ನನಗೆ ಇತ್ತು ಎಂದು ತಿಳಿಸಿದರು.
ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದಕ್ಕೆ ಗಿಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಟ್ಟು ಹೊರ ಹಾಕಿದ್ದರು. ಅಷ್ಟೇ ಅಲ್ಲದೇ ಸುದೀಪ್ (Sudeep) ಅವರು ರಿಷಾಗೆ ಕ್ಲಾಸ್ ಮಾಡಿದ್ದರು.

