ಕನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ (Roopesh Rajanna)n ಬಿಗ್ ಬಾಸ್ ಮನೆಗೆ(Bigg Boss) ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತೆ ಇದೆ. ದೊಡ್ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಮನೆಮಂದಿ ಕಳಪೆ ಹಣೆಪಟ್ಟಿ ಕೊಟ್ಟಿದ್ದಕ್ಕೆ ರೂಪೇಶ್ ರಾಜಣ್ಣ ಬಿಗ್ ಬಾಸ್‌ನಿಂದ ಹೊರನಡೆದಿದ್ದಾರೆ.
ಬಿಗ್ ಬಾಸ್(Bigg Boss) ಮನೆಯಲ್ಲಿ ಕನ್ನಡದ ವಿಚಾರ ಮತ್ತು ನೀರನ್ನ ಶೇಖರಿಸಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ರೂಪೇಶ್ ರಾಜಣ್ಣ ಕೆಲ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರೂಪೇಶ್, ಹೇಳುವ ವಿಚಾರ ಸರಿಯಿದೆ ಆದರೆ ಹೇಳುವ ರೀತಿ ಮನೆಮಂದಿಗೆ ಇಷ್ಟವಾಗಿಲ್ಲ ಈ ಕುರಿತು ಸಾಕಷ್ಟು ಚರ್ಚೆ ಕೂಡ ನಡೆದಿದೆ. ಇದೀಗ ಮೊದಲ ವಾರದ ಕಳಪೆ ಸಾಲಿನಲ್ಲಿ ರೂಪೇಶ್ ರಾಜಣ್ಣ ಕೂಡ ಒಬ್ಬರಾಗಿದ್ದು, ಮನೆಯವರ ನಿರ್ಧಾರಕ್ಕೆ ರೂಪೇಶ್ ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಕ್ಟೋಬರ್ 5ಕ್ಕೆ ಗುಡ್ ನ್ಯೂಸ್ ಕೊಡಲಿದ್ದಾರೆ ನಟಿ ರಮ್ಯಾ
ತಮ್ಮ ನೇರವಾದ ಮಾತಿನ ಮೂಲಕ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ರೂಪೇಶ್ ರಾಜಣ್ಣಗೆ ವಾರದ ಕಳಪೆ ಹಣೆಪಟ್ಟಿಯನ್ನ ಕೆಲ ಸ್ಪರ್ಧಿಗಳು ನೀಡಿದ್ದಾರೆ. ನೇಹಾ, ಅನುಪಮಾ, ಕಾವ್ಯಶ್ರೀ ಗೌಡ ಕಳಪೆ ಲಿಸ್ಟ್‌ಗೆ ರೂಪೇಶ್ ರಾಜಣ್ಣ ಅವರನ್ನ ಸೇರಿಸಿದ್ದಾರೆ. ನೀವು ತುಂಬಾ ನಕಲಿ ಎನಿಸುತ್ತೀರಿ ಎಂದು ನೇಹಾ ಗೌಡ ನೇರವಾಗಿ ತಿಳಿಸಿದ್ದಾರೆ. ಮನೆ ಮಂದಿಯ ನಿರ್ಧಾರಕ್ಕೆ ಕೋಪಗೊಂಡು ಗರಂ ಆಗಿರುವ ರೂಪೇಶ್ ಮೈಕ್ ತೆಗೆದು ಹೊರಬಂದಿದ್ದಾರೆ.
View this post on Instagram
ಮನೆಯವರ ನಿರ್ಧಾರಕ್ಕೆ ಮಣಿದು ರೂಪೇಶ್ ರಾಜಣ್ಣ ಬಿಗ್ ಬಾಸ್‌ನಲ್ಲಿಯೇ ಇರುತ್ತಾರಾ ಅಥವಾ ಮನೆಯಿಂದಲೇ ಹೊರನಡೆಯುತ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಇನ್ನೂ ವಾರದ ಕಿಚ್ಚನ ಪಂಚಾಯ್ತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.