ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಇನ್ನೇನು ಮುಕ್ತಾಯದ ಹಂತಕ್ಕೆ ತಲುಪಿದೆ. ಒಂದೂವರೆ ವಾರ ಕಳೆದರೆ ಓಟಿಟಿ ಮೊಲಸ ಸೀಸನ್ ಮುಕ್ತಾಯವಾಗಲಿದೆ. ಇದರ ಬೆನ್ನೆಲ್ಲೆ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ (Bigg Boss) ಸರಣಿ ಶುರುವಾಗಲಿದ್ದು, ಈಗಾಗಲೇ ವಾಹಿನಿಯು ಪ್ರೊಮೋ ಕೂಡ ರಿಲೀಸ್ ಮಾಡಿದೆ. ಹಾಗಾಗಿ ಆದಷ್ಟು ಬೇಗ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಲಿದೆ.
Advertisement
ಓಟಿಟಿಯಲ್ಲಿ ಬಿಗ್ ಬಾಸ್ ಶುರುವಾಗುತ್ತಿದೆ ಎನ್ನುವಾಗಲೇ ಕಾಫಿ ನಾಡು ಚಂದು (Coffee Nadu Chandu) ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಅಸಂಖ್ಯಾತ ಕನ್ನಡಿಗರು ಬಯಸಿದ್ದರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹದ ಬರಹಗಳನ್ನೂ ಪ್ರಕಟಿಸಿದ್ದರು. ಬಿಗ್ ಬಾಸ್ ಮನೆಗೆ ಹೋಗುವ ಎಲ್ಲ ಅರ್ಹತೆಗಳೂ ಕಾಫಿನಾಡು ಚಂದುಗೆ ಇವೆ. ಹಾಗಾಗಿ ಅವರನ್ನು ಕಳುಹಿಸಿ ಎಂದೂ ಒತ್ತಾಯಿಸಿದರು. ಆದರೆ, ಕೊನೆಗೂ ಚಂದು ಮನೆಯಾಚೆ ಉಳಿದ. ಇದನ್ನೂ ಓದಿ:ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ
Advertisement
Advertisement
ಈಗ ಬಿಗ್ ಬಾಸ್ ಸೀಸನ್ 9 ಪ್ರೊಮೊ ಪ್ರಸಾರ ಕಾಣುತ್ತಿದ್ದಂತೆಯೇ ಮತ್ತೆ ಕಾಫಿ ನಾಡು ಚಂದು ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಈ ಬಾರಿಯಾದರೂ ಚಂದು ಮನೆಗೆ ಹೋಗಬೇಕು ಎನ್ನುವುದು ಕೆಲವರು ಆಗ್ರಹ. ಈ ಬಾರಿ ಏನಾದರೂ ತಪ್ಪಿದರೆ ಬಾಯ್ಕಾಟ್ (Boycott) ಬಿಗ್ ಬಾಸ್ ಈ ರೀತಿ ಹೇಳಬೇಕಾಗುತ್ತದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಫಿನಾಡು ಚಂದು ಇರಲೇಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ಹ್ಯಾಪಿ ಬರ್ತಡೇ ಹಾಡು ಹೇಳುವ ಮೂಲಕ ಫೇಮಸ್ ಆಗಿರುವ ಚಂದು, ತನ್ನದೇ ಆದ ಸಾಹಿತ್ಯದಿಂದ ಹಲವು ಗೀತೆಗಳನ್ನು ರಚಿಸಿ, ವಿಚಿತ್ರವಾಗಿ ಹಾಡುತ್ತಾನೆ. ಅದರಲ್ಲೂ ‘ನಾನು ಪುನೀತ್ (Puneeth Rajkumar) ಅಣ್ಣ ಮತ್ತು ಶಿವಣ್ಣನ (Shivrajkumar) ಅಭಿಮಾನಿ’ ಎಂದು ಹೇಳುತ್ತಾ ಮಾತು ಆರಂಭಿಸುತ್ತಾನೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಚಂದುಗೆ ಅಕ್ಷಾಂತರ ಫಾಲೋವರ್ಸ್ ಇದ್ದಾರೆ. ಹೀಗಾಗಿ ಬಾಯ್ಕಾಟ್ ಭಯವನ್ನು ಹುಟ್ಟಿಸಿದ್ದಾರೆ.