ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್(Bigg Boss Kannada) ಸೀಸನ್ 7ರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ (Shine Shetty) ಮತ್ತೆ ಸುದ್ದಿಯಲ್ಲಿದ್ದಾರೆ. ಸುಕೃತ ನಾಗ್ (Sukrutha Nag) ಜೊತೆಗಿನ ಮದುವೆಯ (Wedding) ಬಗ್ಗೆ ಗಾಂಧಿನಗರದಲ್ಲಿ ಹಾಟ್ ಟಾಪಿಕ್ ಆಗಿದ್ದರು. ಇದೀಗ ಈ ಮದುವೆಯ ವದಂತಿಯ ಬಗ್ಗೆ ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
View this post on Instagram
ಜೇಮ್ಸ್, ಕಾಂತಾರ ಚಿತ್ರದ ನಂತರ ಮತ್ತೆ ಸಾಕಷ್ಟು ಸಿನಿಮಾಗಳಲ್ಲಿ ಶೈನ್ ಆಕ್ಟೀವ್ ಆಗಿದ್ದಾರೆ. ಇದರ ಮಧ್ಯೆ ಶೈನ್ ಶೆಟ್ಟಿ ಹೆಸರು ಸುಕೃತ ನಾಗ್ ಜೊತೆ ಕೇಳಿ ಬರುತ್ತಿದೆ. `ಲಕ್ಷಣ’ ನಟಿ ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ ಅಂತಾ ಸಾಕಷ್ಟು ಸಮಯದಿಂದ ಈ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ದೀಪಿಕಾ ದಾಸ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್ – ದೊಡ್ಮನೆಯಿಂದ ಔಟ್
View this post on Instagram
ಕಲಾವಿದರು ಆಗಿರುವ ಕಾರಣ ನನಗೂ ಸುಕೃತ ಅವರಿಗೂ ಪರಿಚಯವಿದೆ ಆದರೆ ಯಾವುದೇ ರೀತಿಯ ಸಂಪರ್ಕವಿಲ್ಲ. ನಾವು ಇದುವರೆಗೂ ಭೇಟಿಯಾಗಿಲ್ಲ. ಯಾವುದೇ ಮಾತುಕತೆಯಿಲ್ಲ. ಈ ಮದುವೆ ಸುದ್ದಿ ಎಲ್ಲಾ ಸುಳ್ಳು, ಆ ತರಹ ಏನು ವಿಚಾರವಿಲ್ಲ ಎಂದಿದ್ದಾರೆ. ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ಮತ್ತು ಇದನ್ನೂ ಯಾರು ನಂಬಬೇಡಿ ಎಂದು ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಾನು ನನ್ನ ಕೆರಿಯರ್‌ನತ್ತ ಗಮನ ಹರಿಸುತ್ತಿದ್ದೇನೆ. ಮದುವೆಯ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ಮಾತನಾಡಿದ್ದಾರೆ. ಈ ಮೂಲಕ ಸುಕೃತ ನಾಗ್ ಜೊತೆಗಿನ ಮದುವೆ ವದಂತಿಗೆ ಶೈನ್ ಬ್ರೇಕ್ ಹಾಕಿದ್ದಾರೆ.
ಶೈನ್ ಶೆಟ್ಟಿ ಸದ್ಯ `ಗಲ್ಲಿ ಕಿಚನ್’ ಬುಸಿನೆಸ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಿದ್ದರೆ, ಸುಕೃತ ನಾಗ್ ಪ್ರಸ್ತುತ `ಲಕ್ಷಣ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.