ವಿಲನ್ ಕೊಟ್ಟ ಊಟಾ ಗಿಲ್ಲಿ (Gilli) ಕೊನೆಗೂ ಕಾವ್ಯ (Kavya) ಕಣ್ಣಲ್ಲಿ ಕಣ್ಣೀರು ಬರುವಂತೆ ಮಾಡಿದ್ದಾರೆ. ಇನ್ನೂ ಕಾವ್ಯ ಕೂಡ ಸ್ಪಂದನಾ ಮುಂದೆ ಗಿಲ್ಲಿ ಮಾತುಗಳನ್ನು ನೆನೆದು ಅತ್ತಿದ್ದಾರೆ. ಆದರೆ ಇತ್ತ ಗಿಲ್ಲಿ ಇಷ್ಟವಿಲ್ಲದಿದ್ದರೂ ಊಟ ಬಿಟ್ಟು, ಮನಸಲ್ಲಿ ನೋವುಂಡು ಕಾವ್ಯನನ್ನ ಅಳಿಸಿದ್ದಾರೆ.
Kavya’s love towards Gilli peaked here. She doesn’t say much but her silence and actions speak much louder than anything.
This week is a great interval for the upcoming finale.🫶🏻🫰🏻
Let’s go Gilli-Kavya. Whole Karnataka is routing for you. 🥳#BBKSeason12 | #GilliNata pic.twitter.com/uQRJJKqNj8
— Cinema Premi✍🏻 (@karansharmain) December 11, 2025
ಹೌದು, ಬಿಗ್‌ಬಾಸ್ (Bigg Boss) ಮನೆಗೆ ವಿಲನ್ ಎಂಟ್ರಿ ಕೊಟ್ಟಾಗಿನಿಂದ ಸ್ಪರ್ಧಿಗಳ ವರಸೆಯೇ ಬದಲಾಗಿದೆ. ಊಹಿಸಲಾಗದಂತಹ ಬದಲಾವಣೆಗಳು ಮನೆಯಲ್ಲಿ ಕಂಡುಬರುತ್ತಿವೆ. ಬಿಗ್‌ಬಾಸ್ ಮನೆಯ ಫೇಮಸ್ ಜೋಡಿ ಗಿಲ್ಲಿ-ಕಾವು ನಡುವೆ ಬಿರುಕು ಮೂಡಿಸಿದ್ದಾರೆ ವಿಲನ್. ಕಾವ್ಯ ಅಳುವಂತೆ ಮಾಡ್ಬೇಕು ಅಂತ ಗಿಲ್ಲಿಗೆ ವಿಲನ್ ಟಾಸ್ಕ್ ಕೊಟ್ಟಿದ್ದರು. ಅದರಂತೆ ಗಿಲ್ಲಿ ಕೂಡ ಕಾವ್ಯ ಮುಂದೆ ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ರಲ್ಲ.. ಬೆನ್ನಿಗೆ ಚೂರಿ ಹಾಕಿದ್ರಲ್ಲ. ನೀನು ಪ್ರೀ ಪ್ರಾಡಕ್ಟ್.. ಅಂತ ಮಾತಾಡಿದ್ದಾರೆ.ಇದನ್ನೂ ಓದಿ: ಕಾವ್ಯ Vs ರಕ್ಷಿತಾ| ಅಮಾಯಕಿಯಂತೆ ನಾಟಕ – ರಿಯಲ್ ಕನ್ನಿಂಗ್ ನೀವು
ಟಾಸ್ಕ್ಗೋಸ್ಕರ ಆದ್ರೂ ಕೂಡ ಕಾವ್ಯ ಜೊತೆ ಈ ರೀತಿ ಮಾತನಾಡಿದ್ದು ಗಿಲ್ಲಿಗೆ ನೋವಾಗಿದೆ. ಇದಕ್ಕೆ ಪಶ್ಚಾತಾಪ ಪಡುತ್ತಿರುವ ಗಿಲ್ಲಿ, ಊಟ ಬಿಟ್ಟಿದ್ದಾರೆ ಎನ್ನಲಾಗಿದೆ.
ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ… ಕೇವಲ ಟಾಸ್ಕಿಗೆ ಮಾತ್ರ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/UNWb1oEwmN
— Colors Kannada (@ColorsKannada) December 10, 2025
ಇನ್ನೂ ಗಿಲ್ಲಿ ಮಾತಾಡಿದ್ದನ್ನು ಕೇಳಿ ಕಾವ್ಯ ಸ್ಪಂದನಾ ಮುಂದೆ ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡಲಾರದಷ್ಟು ಹತ್ತಿರವಾಗಿದ್ದರು ಗಿಲ್ಲಿ-ಕಾವ್ಯ. ಆದರೆ ಮೊಟ್ಟಮೊದಲ ಬಾರಿಗೆ ಗಿಲ್ಲಿಯನ್ನು ನಾಮಿನೇಟ್ ಮಾಡಿ ಕಾವ್ಯ ಅಚ್ಚರಿ ಮೂಡಿಸಿದ್ದರು. ಇದರಿಂದ ಗಿಲ್ಲಿ ಹೀಗೆ ಮಾತನಾಡಿದ್ದಾನೆ ಅನ್ನೋದು ಒಂದು ಕಡೆಯಾದರೆ, ಟಾಸ್ಕ್ ಕೊಟ್ಟಿದ್ದಾರೆ ಅದಕ್ಕೆ ಮಾತಾಡಿರಬಹುದು ಅನ್ನೋದು ಕಾವ್ಯ ಗಮನಕ್ಕೆ ಬಂದಿದೆ. ಆದರೂ ಕೂಡ ಗಿಲ್ಲಿ ಮಾತಿನಿಂದ ಕಾವ್ಯಗೆ ನೋವಾಗಿದ್ದಂತೂ ನಿಜ. ಕಾರಣ ಇದ್ದರೆ ನನ್ನನ್ನು ನಾಮಿನೇಟ್ ಮಾಡಲಿ, ಆದರೆ ಈ ರೀತಿ ಮಾತನಾಡಬಾರದಿತ್ತು. ತಮಾಷೆಗೂ ಕೂಡ ಗಿಲ್ಲಿ ಮಾತನಾಡಿದ್ದು ಸರಿಯಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.ಇದನ್ನೂ ಓದಿ: ಕಣ್ಣೀರಿಟ್ಟ ‘ಕಾವು’ – ವಿಲನ್ ಕೊಟ್ಟ ಟಾಸ್ಕಲ್ಲಿ ಗೆದ್ರಾ ಗಿಲ್ಲಿ?

