ಸ್ವಿಮ್ಮಿಂಗ್ ಫೂಲ್‌ನಲ್ಲಿರುವ ಚೆಂಡುಗಳನ್ನು ಸಂಗ್ರಹಿಸುವ ಟಾಸ್ಕ್‌ನಲ್ಲಿ ಧ್ರುವಂತ್ (Dhruvanth) ಸರಿಯಾಗಿ ಉಸ್ತುವಾರಿ ಮಾಡಿಲ್ಲ ಎಂದು ಬಿಗ್‌ಬಾಸ್ (Bigg Boss) ಅಭಿಮಾನಿಗಳು ಸಿಟ್ಟು ಹೊರಹಾಕುತ್ತಿದ್ದಾರೆ.
ಗಿಲ್ಲಿ- ಕಾವ್ಯ, ಅಭಿ-ಚೈತ್ರಾ, ಅಶ್ವಿನಿ-ರಘು ಅವರು ಕೈಯಲ್ಲಿ ಚೆಂಡು ಹಿಡಿದು ಕೋಲಿನ ಹತ್ತಿರ ತಂದಾಗ ಏನು ಹೇಳದ ಧ್ರುವಂತ್ ಅವರು ರಕ್ಷಿತಾ ಮತ್ತು ಮಾಳು (Rakshita-Malu) ಅವರ ಆಟವನ್ನು ನಿಲ್ಲಿಸಿದ್ದು ಯಾಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
#BBK12 #BBKLive pic.twitter.com/kofPb0eh4z
— KuchBhi🤷🏻 (@Kuch_Bhi_4) December 4, 2025
ಗುರುವಾರ ರಿಲೀಸ್ ಮಾಡಿದ ಪ್ರೋಮೋದಲ್ಲಿ ರಕ್ಷಿತಾ ತಪ್ಪು ಮಾಡಿರಬಹುದು ಎಂದು ಊಹಿಸಲಾಗಿತ್ತು. ಆದರೆ ವಾಹಿನಿಯಲ್ಲಿ ಟಾಸ್ಕ್ ನೋಡುವಾಗ ಧ್ರುವಂತ್ ಅವರು ಪಕ್ಷಪಾತ ಮಾಡಿರುವುದು ಸ್ಪಷ್ಟವಾಗಿದೆ.
ಅದರಲ್ಲೂ ಗಿಲ್ಲಿ ಮತ್ತು ಕಾವ್ಯ ಹಲವು ಬಾರಿ ಚೆಂಡನ್ನು ಕೋಲಿನ ಹತ್ತಿರ ತಂದಾಗ ಧ್ರುವಂತ್ ಅಲ್ಲೇ ಇದ್ದರು. ಆದರೆ ಅವರ ಆಟವನ್ನು ನಿಲ್ಲಿಸಿರಲಿಲ್ಲ. ಆದರೆ ರಕ್ಷಿತಾ ಮತ್ತು ಮಾಳು ಎರಡು ಕೋಲುಗಳನ್ನು ಹತ್ತಿರ ತಂದಿದ್ದಕ್ಕೆ ಜೋರು ಧ್ವನಿಯಲ್ಲಿ ಧ್ರುವಂತ್ ಗದರಿಸಿ 10 ಸೆಕೆಂಡ್ ಆಟವನ್ನು ನಿಲ್ಲಿಸಿದ್ದರು. ಇದಕ್ಕೆ ಸಿಟ್ಟಾದ ರಕ್ಷಿತಾ ನೀರಿಗೆ ಕೋಲಿನಲ್ಲಿ ಬಾರಿಸಿ ಸಿಟ್ಟು ಹೊರಹಾಕಿದ್ದರು. ಇದನ್ನೂ ಓದಿ: ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ – ರಿಷಬ್‌ಗೆ ಪಂಜುರ್ಲಿ ಅಭಯ
referee or umpire , they eyes 🧐wanted they favorite team to win. they eyes never watched when gilli played foul game. rakshita soul character is 💖good rather than gilli its clearly shown. mallu is the one who lost patience not rakshita #BBK12 #Rakshita #Gilli #KicchaSudeep pic.twitter.com/fcNHFoZrye
— Agira Nitesh தமிழன் (@NiteshThoughts) December 5, 2025
ಎಕ್ಸ್‌ನಲ್ಲಿ ಹಲವು ವಿಡಿಯೋಗಳನ್ನು ನೆಟ್ಟಿಗರು ಪೋಸ್ಟ್ ಮಾಡಿ ಧ್ರುವಂತ್ ಈ ರೀತಿಯಾಗಿ ರಕ್ಷಿತಾ ಮತ್ತು ಮಾಳು ಅವರನ್ನೇ ಟಾರ್ಗೆಟ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಟಾಸ್ಕ್ ಮುಗಿದ ನಂತರ ಸೂರಜ್ ಜೊತೆ ಮಾತನಾಡಿದ ರಕ್ಷಿತಾ, ಬೇರೆಯವರು ತಪ್ಪು ಮಾಡಿದಾಗ ಏನು ಹೇಳಿಲ್ಲ. ಆದರೆ ನಾವು ತಪ್ಪು ಮಾಡಿದಾಗ ಆಟ ನಿಲ್ಲಿಸಿದ್ದು ಅಲ್ಲದೇ ಜೋರಾಗಿ ಗದರಿಸಿದ್ದರು ಎಂದು ದೂರಿದ್ದರು. ಈ ವಾರದ ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಸುದೀಪ್ ಅವರು ಉಳಿದವರ ರೂಲ್ಸ್ ಬ್ರೇಕ್ ವಿಡಿಯೋಗಳನ್ನು ಪ್ರಸಾರ ಮಾಡಿ ಧ್ರುವಂತ್ ಅವರಿಗೆ ಕ್ಲಾಸ್ ಮಾಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: ʻದಾಸʼನಿಗೆ 82 ಲಕ್ಷ ಹಣದ ತಲೆಬಿಸಿ – ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು ಎಂದ ದರ್ಶನ್

