ಈ ವಾರ ಬಿಗ್‌ಬಾಸ್ ಮನೆಯಿಂದ ಸ್ಪರ್ಧಿ ಅಭಿಷೇಕ್ (Abhishek) ಹೊರಬಂದಿದ್ದಾರೆ. ಹೀಗೆ ಹೊರಬಂದ ಅಭಿಷೇಕ್ ಈ ಸೀಸನ್‌ನಲ್ಲಿ ಗಿಲ್ಲಿಯೇ ಗೆಲ್ಲೋ ಕಂಟೆಸ್ಟೆಂಟ್ ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ.
ನಾನು ಸೈಲೆಂಟಾಗಿದ್ದೆ, ಹೀಗಾಗಿ ಜನ ನನ್ನ ರಿಸೀವ್ ಮಾಡಲಿಲ್ಲ. ಮನೆಯಿಂದ ಹೊರಬರಬೇಕಾಯಿತು. ಆದರೆ ನನಗೆ ತದ್ವಿರುದ್ಧ ಇದ್ದವರು ಗಿಲ್ಲಿನಟ. ಬಿಗ್‌ಬಾಸ್‌ನಲ್ಲಿ ಇಡೀ ಮನೆಗೆ ಎನರ್ಜಿ ತುಂಬ್ತಾ ಇದ್ದಿದ್ದೇ ಗಿಲ್ಲಿ. ಅದರ ಆಧಾರದ ಮೇಲೆ ಹೇಳೋದಾದ್ರೆ ಈ ಸಲ ಗಿಲ್ಲಿಯೇ ಗೆಲ್ಲಬಹುದು” ಎಂದಿದ್ದಾರೆ.ಇದನ್ನೂ ಓದಿ:ಟಾಕ್ಸಿಕ್ ರಿಲೀಸ್‍ಗೆ 100 ದಿನ: ರಾಕಿಬಾಯ್ ಹೊಸ ಲುಕ್ ರಿವೀಲ್
ಮನೆಯಿಂದ ಹೊರಬಂದ್ಮೇಲೆ ಗಿಲ್ಲಿಗೆ ಇರೋ ಫ್ಯಾನ್ಸ್ ಫಾಲೋವಿಂಗ್ ನೋಡಿದ್ಮೇಲೆ ಅಭಿಷೇಕ್ ಅಭಿಪ್ರಾಯ ಬದಲಿಸಿಕೊಂಡ್ರಾ ಅಥವಾ ಇದು ವೈಯಕ್ತಿಕ ಅಭಿಪ್ರಾಯನಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ದಿನದ 24 ಗಂಟೆಯೂ ಮಾತನಾಡುತ್ತಲೇ ಇರುತ್ತಾರೆ. ಹೀಗಾಗಿ ಜನರಿಗೆ ಬೇಗ ಇಷ್ಟವಾಗುತ್ತಾರೆ. ಇದರಿಂದ ಗಿಲ್ಲಿಯೇ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗುತ್ತಾರೆ ಎಂದು ತಿಳಿಸಿದ್ದಾರೆ.

