ಬಿಗ್‌ಬಾಸ್ ಈಸ್ ಬ್ಯಾಕ್… ಹೌದು ಕನ್ನಡದ ಬಿಗ್‌ಬಾಸ್ (Bigg Boss Kannada) ಮತ್ತೆ ಬರುತ್ತಿದೆ. ಈ ಬಾರಿ ಪ್ರಸಾರವಾಗ್ತಿರುವ ಎಪಿಸೋಡ್ ಸೀಸನ್ 12 ಆಗಿರಲಿದೆ.
 
View this post on Instagram 
ಅದರಲ್ಲೂ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲೇ ಈ ಬಾರಿಯೂ ಬಿಬಿಕೆ ಮೂಡಿಬರ್ತಿರೋದು ವಿಶೇಷ. ವಿದಾಯ ಹೇಳಿದ್ದ ಕಿಚ್ಚ ಸುದೀಪ್ ತಾವೇ ಒಪ್ಪಿ ಮತ್ತೆ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸ್ಕೊಳ್ಳಲು ತಯಾರಿ ಮಾಡ್ಕೊಂಡಿದ್ದಾರೆ. ಯಾವಾಗ ಶುರುವಾಗುತ್ತೆ? ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

ಈ ಬಾರಿ ಯಾವ ಬದಲಾವಣೆಯೊಂದಿಗೆ ಬರುತ್ತಿದೆ? ಎಲ್ಲಾ ಪ್ರಶ್ನೆಗಳಿಗೂ ಕೆಲವೇ ದಿನಗಳಲ್ಲಿ ಉತ್ತರ ಸಿಗೋದಂತೂ ಗ್ಯಾರಂಟಿ. ಏಕೆಂದರೆ ಇದೀಗ ಅಧಿಕೃತ ಫಸ್ಟ್ ಲುಕ್ ಪ್ರೋಮೋ (Bigg Boss Promo) ರಿಲೀಸ್ ಆಗಿದೆ. ಈ ಬಾರಿಯ ಲೋಗೋ ಕೂಡ ತುಂಬಾ ಸ್ಪೆಷಲ್ ಆಗಿದೆ. ಇದನ್ನೂ ಓದಿ: ದುನಿಯಾ ವಿಜಯ್ ಜೊತೆಯಾದ ಡೇರ್ ಡೆವಿಲ್ ಹೀರೋ
ರಿಯಾಲಿಟಿ ಶೋಗಳ ರಾಜಾ ಎಂದು ಕರೆಸಿಕೊಳ್ಳುವ ಬಿಗ್‌ಬಾಸ್ ಶೋ ಈ ಸಪ್ಟೆಂಬರ್ ಕೊನೆಯ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಸೀಸನ್ 12ರ ಫಸ್ಟ್ ಲುಕ್ ಪ್ರೋಮೋ ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಆದರೆ ಗಮನ ಸೆಳೆದಿದ್ದು ಅಡಿಬರಹ, ಈ ಸಲ ಕಿಚ್ಚು ಹೆಚ್ಚು ಎಂದು ಹೇಳುವ ಮೂಲಕ ಜಬರ್ದಸ್ತ್ ಕಂಟೆಸ್ಟಂಟ್‌ಗಳನ್ನ ಮನೆಯೊಳಗೆ ಕಳಿಸುವ ಸುಳಿವು ನೀಡಿದೆ ಬಿಗ್‌ಬಾಸ್ ಟೀಮ್. ಇದೇ ಕಿಚ್ಚು ಹೆಚ್ಚು ಅನ್ನೋದ್ರ ಸೂಚನೆ ಆಗಿರಬಹುದು.

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇದೀಗ ಕಂಟೆಸ್ಟಂಟ್‌ಗಳ ಆಯ್ಕೆಯ ಫಸ್ಟ್ ಲಿಸ್ಟ್ ಸಿದ್ಧವಾಗಿದ್ದು, ಕಿಚ್ಚ ಸುದೀಪ್ ಪ್ರೋಮೋ ಶೂಟ್‌ನಲ್ಲಿ ಶೀಘ್ರದಲ್ಲೇ ಭಾಗಿಯಾಗ್ತಾರೆ. ಬಿಗ್ ಹೌಸ್ ಕೂಡ ವಿನೂತನವಾಗಿ ಆಲ್ಟ್ರೇಷನ್ ಆಗ್ತಿದೆ. ಬಿಗ್ ಮನೆಯಲ್ಲಿ ಕಿಚ್ಚು ಹಚ್ಚಲು ಯಾರೆಲ್ಲಾ ಬರ್ತಾರೆ ಅನ್ನೋದ್ರ ಸುಳಿವು ಹಂತ ಹಂತವಾಗಿ ಸಿಗಲಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್
 


 
		 
		 
		 
		 
		
 
		 
		 
		 
		