ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

Public TV
2 Min Read
BBK 11 GRAND FINALE HANUMATHA WINNER

ಹಾವೇರಿ: ಭಜನೆ ಮತ್ತು ಶಿಶುನಾಳ ಶರೀಫ ತತ್ವಗಳನ್ನ ಹೇಳುತ್ತಾ, ಸರಿಗಮಪ ವೇದಿಕೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಹಳ್ಳಿಹೈದ ಹನುಮಂತ (Hanumantha Lamani) ಬಿಗ್ ಬಾಸ್ ಸೀಸನ್ 11ರಲ್ಲಿ (Bigg Boss 11) ವಿನ್ನರ್ ಆಗಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾರೆ. ಈ ಹಿನ್ನೆಲೆ ಗ್ರಾಮದ ಸ್ನೇಹಿತರು ಹಾಗೂ ಅಭಿಮಾನಿಗಳು ಹನುಮಂತ ಅವರಿಗೆ ಅದ್ಧೂರಿ ಸ್ವಾಗತ ಮಾಡುವ ಪ್ಯ್ಲಾನ್ ಮಾಡುತ್ತಿದ್ದಾರೆ. ಹನುಮಂತ ಅವರ ತಂದೆ ತಾಯಿ ಕೂಡಾ ಇಂದು ಬೆಂಗಳೂರಿನಿಂದ ಆಗಮಿಸಲಿದ್ದಾರೆ.

Haveri BBK 11 Winner Hanumantha Welcome

ಬಿಗ್ ಬಾಸ್ 11ರಲ್ಲಿ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲೂಕಿನ ಚಿಲ್ಲೂರುಬಡ್ನಿಯ (Chillur Badni) ಹನುಮಂತ ಲಮಾಣಿ ವಿನ್ನರ್ ಆಗಿ ಕರುನಾಡ ಜನರ ಮನಗೆದ್ದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇಂದು ಸ್ವಗ್ರಾಮಕ್ಕೆ ಹನುಮಂತ ಆಗಮಿಸಲಿದ್ದು, ಗ್ರಾಮದ ಜನರು ಅದ್ಧೂರಿ ಸ್ವಾಗತ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಅಲ್ಲದೆ ಕೆಲವು ಅಭಿಮಾನಿಗಳು ಈಗಾಗಲೇ ಹನುಮಂತ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: My Dear Friend – ಟ್ರಂಪ್‌ ಜೊತೆಗೆ ಮೋದಿ ದೂರವಾಣಿ ಸಂಭಾಷಣೆ

ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಕುರಿಗಾಹಿ ಹನುಮಂತ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಹನುಮಂತ ಅವರು ಬಹಳ ಏನೂ ಕಲಿತಿಲ್ಲ. ಕಡುಬಡತನದ ಕುಟುಂಬದಲ್ಲಿ ಬೆಳೆದ ಹನುಮಂತ, ಕುರಿ ಕಾಯುವ ಕೆಲಸ ಮಾಡುತ್ತಿದ್ದರು. ಕುರಿ ಕಾಯುತ್ತಾ ಕಾಯುತ್ತಾ ಶಿಶುನಾಳ ಶರೀಫರ ನಿನ್ನೊಳಗ ನೀನು ತಿಳದ ನೋಡಣ್ಣ ಹಾಗೂ ಕೇಳ ಜಾಣ ಶಿವ ಧ್ಯಾನ ಮಾಡಣ್ಣ ಎಂಬ ಹಾಡುಗಳನ್ನು ಹಾಡುತ್ತಿದ್ದರು. ಕೋಗಿಲೆ ಕಂಠದ ಹನುಮಂತ ಅವರ ಹಾಡುಗಳು ಖಾಸಗಿ ವಾಹಿನಿಯ ಸರಿಗಮಪ ವೇದಿಕೆಗೆ ಪ್ರವೇಶಿಸಿದವು. ಕುರಿಗಾಹಿ ಹನುಮಂತ ಅವರ ಹಾಡು ಹೇಳಿದ ತೀರ್ಪುಗಾರರು ಅವರ ಕೋಗಿಲೆ ಕಂಠಕ್ಕೆ ಫುಲ್‌ಫಿದಾ ಆಗಿಬಿಟ್ಟರು. ಸರಿಗಮಪ ವೇದಿಕೆಯಲ್ಲೂ ಹನುಮಂತ ಅವರು ಭರ್ಜರಿಯಾಗಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಇದೀಗ ಬಿಗ್ ಬಾಸ್‌ನಲ್ಲಿ ಸರಳ ವ್ಯಕ್ತಿತ್ವ, ತನ್ನ ಜಾನಪದ ಶೈಲಿಯ ಹಾಡುಗಳ ಮೂಲಕ ಹನುಮಂತ ಜನರ ಮನಸ್ಸು ಗೆದ್ದು, ಬಿಗ್ ಬಾಸ್‌ನಲ್ಲಿ ಜಯಶಾಲಿಯಾಗಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ವೇಳೆ ಬಂಡೆ ಸ್ಫೋಟ – ಓರ್ವ ಕಾರ್ಮಿಕ ಸಾವು

Share This Article