ಕಷ್ಟಪಟ್ಟು ಮಜಾಭಾರತ, ಗಚ್ಚಿಗಿಲಿಗಿಲಿ ರಿಯಾಲಿಟಿ ಮೂಲಕ ಗುರುತಿಸಿಕೊಂಡ ಪಕ್ಕಾ ಹಳ್ಳಿ ಪ್ರತಿಭೆ ವಿನೋದ್ ಗೊಬ್ಬರಗಾಲ(Vinod Gobbaragala). ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಾಲಿಟ್ಟ ಮೇಲೆ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಗೊಬ್ಬರಗಾಲ ಎಲಿಮಿನೇಷನ್‌ನಿಂದ ಮನೆಮಂದಿ, ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡ್ತಿದ್ದಾರೆ.
Advertisement
ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಇತರೆ ಸ್ಫರ್ಧಿಗಳಿಗೆ ಟಕ್ಕರ್ ಕೊಡುತ್ತಿದ್ದವರು ವಿನೋದ್ ಗೊಬ್ಬರಗಾಲ ಎಲಿಮಿನೇಷನ್‌ನಿಂದ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಗೊಬ್ಬರಗಾಲ ಆಟ ನೋಡಿದವರು ಬಿಗ್ ಬಾಸ್ ಫೀನಾಲೆಯಲ್ಲಿ ಇವರು ಇದ್ದೇ ಇರುತ್ತಾರೆ ಎಂದು ಅಂದಾಜಿಸಿದ್ದರು. ಆದರೆ ವಿನೋದ್ ಬಿಗ್ ಬಾಸ್‌ನಿಂದ ಔಟ್ ಆಗಿ ಬಂದ ಮೇಲೆ ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ(Badavara Makkalu Belibeku Kannayya) ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ವಿನೋದ್ ನಾ ಮತ್ತೆ ಬಿಗ್ ಬಾಸ್‌ಗೆ ವಾಪಸ್ ಕರೆಸಿ ಎನ್ನುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ: ಕೊನೆಗೂ ಮದುವೆ ಡೇಟ್ ಅನೌನ್ಸ್ ಮಾಡಿದ್ರು ನಟಿ ಕಿಯಾರಾ ಅಡ್ವಾಣಿ
Advertisement
Advertisement
ಕಿರುತೆರೆಯ ಮಜಾಭಾರತ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿನೋದ್ ಗೊಬ್ಬರಗಾಲ ದೊಡ್ಮನೆಗೆ ಕಾಲಿಟ್ಟಿದ್ದರು. ಇದೀಗ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದರು. ಟಿವಿ ಲೋಕದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದ ಗೊಬ್ಬರಗಾಲ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು. ಇದೀಗ ಸಾನ್ಯ ಅಯ್ಯರ್ ಎಲಿಮಿನೇಷನ್ ನಂತರ ವಿನೋದ್ ಗೊಬ್ಬರಗಾಲ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದರು.
Advertisement
ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಗೊಬ್ಬರಗಾಲ ಎಲಿಮಿನೇಷನ್ ಇದೀಗ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ವಿನೋದ್ ಗೊಬ್ಬರಗಾಲ ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ.