ಬಿಗ್ ಬಾಸ್ ಮನೆ(Bigg Boss House) ಇದೀಗ 56 ದಿನಗಳನ್ನ ಪೂರೈಸಿ, 60ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ವಾರ ಗೊಂಬೆ ಟಾಸ್ಕ್‌ಗಳ ಸ್ಪರ್ಧಿಗಳ ಜಟಾಪಟಿ ಜೋರಾಗಿತ್ತು. ಮನೆಯಲ್ಲಿ ರೇಷನ್ ಇಲ್ಲದೇ ಪರದಾಡುತ್ತಿದ್ದ ಮನೆಮಂದಿಗೆ ಕಿಚ್ಚ ಪ್ರೀತಿಯಿಂದ ತಾವೇ ಊಟ ತಯಾರಿಸಿ ಕಳುಹಿಸಿದ್ದರು. ಇದರ ಬೆನ್ನಲ್ಲೇ ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವಾರ ಗೊಂಬೆ ತಯಾರಿಸುವ ಟಾಸ್ಕ್ ತುಂಬಾನೇ ಟಫ್ ಆಗಿತ್ತು. ಕಾವ್ಯಶ್ರೀ ಕ್ಯಾಪ್ಟೆನ್ಸಿಯಲ್ಲಿ ಎರಡು ತಂಡಗಳ ಹಣಾಹಣಿ ರೋಚಕವಾಗಿತ್ತು. ಬಳಿಕ ಈ ವಾರ ಕಾವ್ಯಶ್ರೀ ಕ್ಯಾಪ್ಟೆನ್ಸಿ ಅವಧಿ ಮುಗಿದ ಕಾರಣ ಮನೆಮಂದಿಗೆ ಎರಡು ತಂಡಗಳಿಂದ ಕ್ಯಾಪ್ಟನ್ಸಿಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಜವಾಬ್ದಾರಿಯನ್ನ ಕೊಟ್ಟಿದ್ದರು. ಈ ವಿಷ್ಯವಾಗಿ ಕಿಚ್ಚನ(Kiccha Sudeep) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಬಿಗ್ ಬಾಸ್(Bigg Boss) ಮನೆಯ ಆಟ ಸಾಕಷ್ಟು ತಿರುವುಗಳನ್ನ ಪಡೆಯುತ್ತಿದೆ. ಗೊಂಬೆ ಟಾಸ್ಕ್ ಬಳಿಕ ಬೆಸತ್ತ ಸ್ಪರ್ಧಿಗಳಿಗೆ ಸುದೀಪ್ ಭರ್ಜರಿ ಭೋಜನ ಕಳುಹಿಸಿದ್ದರು. ಈ ಬೆನ್ನಲ್ಲೇ ಎಲ್ಲರಿಗೂ ಕಿಚ್ಚ ಬೆವರಿಳಿಸಿದ್ದಾರೆ. ಕ್ಯಾಪ್ಟೆನ್ಸಿ ವಿಷ್ಯವಾಗಿ ಒಮ್ಮತವಿಲ್ಲದ ಕಾರಣ ಬಿಗ್ ಬಾಸ್‌ಗೆ ಕ್ಯಾಪ್ಟನ್ ಆಯ್ಕೆ ಮಾಡಲು ಮನೆಮಂದಿ ಬಿಟ್ಟಿದ್ದರು. ಆದರೆ ಬಿಗ್ ಬಾಸ್ ಆದೇಶಕ್ಕೆ ಸ್ಪಂದಿಸದ ಕಾರಣ, ಮುಂದಿನ ವಾರ ಕ್ಯಾಪ್ಟನ್ ಇರುವುದಿಲ್ಲ ಎಂದು ಆದೇಶ ನೀಡಿದ್ದರು. ಈ ಕುರಿತು ಕಿಚ್ಚ ಮಾತನಾಡಿದ್ದಾರೆ. ಇದನ್ನೂ ಓದಿ:ದೀಪಿಕಾ ದಾಸ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್ – ದೊಡ್ಮನೆಯಿಂದ ಔಟ್
ಬಿಗ್ ಬಾಸ್ ಒಬ್ಬಬ್ಬರ ಹೆಸರು ಕೊಡಿ ಎಂದಾಗ, ಯಾವ ಹೆಸರು ಬರಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಬಿಗ್ ಬಾಸ್ ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಎಸ್ಕೇಪ್ ಆಗಿ ಓಡಿ ಹೋಗುವವರಿದ್ರೆ, ಮೇನ್ ಡೋರ್ ಬಹಳ ಹತ್ತಿರ ಇದೆ. ಎಂದು ಸುದೀಪ್ ಅವರು ವಾರ್ನಿಂಗ್ ನೀಡಿದ್ದಾರೆ.