Bengaluru CityCinemaKarnatakaLatestMain PostSandalwood

ಮದುವೆ ಆಗಿ ಎರಡೇ ದಿನಕ್ಕೆ ಅಣ್ಣ ಬದಲಾಗಿ ಬಿಟ್ಟ: ದೀಪಿಕಾ ದಾಸ್‌

ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯ ಜೊತೆ ಹೊಸ ಬಗೆಯ ಟಾಸ್ಕ್‌ಗಳ ಮೂಲಕ ಗಮನ ಸೆಳೆಯುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಸ್ಟಾರ್‌ಗಳು ಒಟ್ಟಾಗಿರುವ ಈ ಶೋನಲ್ಲಿ, ಕಲಾವಿದರ ತೆರೆ ಹಿಂದಿನ ಕಥೆಗಳು ಅಭಿಮಾನಿಗಳಿಗೆ ತಿಳಿದಿರುವುದಿಲ್ಲ. ಇದೀಗ ತಮ್ಮ ಜೀವನದ ನೋವಿನ ಕಥೆಯನ್ನ ಹೇಳಲು ಬಿಗ್ ಬಾಸ್ ಹೇಳಿದ್ರು. ಅದರಂತೆ ದೀಪಿಕಾ ದಾಸ್, ತಮ್ಮ ಜೀವನದ ಕಥೆಯನ್ನ ಬಿಚ್ಚಿಟ್ಟಿದ್ದಾರೆ.

ದೀಪಿಕಾ ದಾಸ್ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಂದಿದ್ದಾರೆ. ತಮ್ಮ ಭಿನ್ನ ಶೈಲಿಯಲ್ಲಿ ಆಡುವ ಮೂಲಕ ನಟಿ ಗಮನ ಸೆಳೆದಿದ್ದಾರೆ. ಈಗ ದೀಪಿಕಾ ದಾಸ್ ಅಣ್ಣ ಮಾಡಿರುವ ತಪ್ಪಿನ ಬಗ್ಗೆ ಮೌನ ಮುರಿದಿದ್ದಾರೆ. ನಾನು ತುಂಬಾ ಪ್ರೀತಿಸುವ ನನ್ನ ತಂದೆ ಲಿವರ್ ಜಾಂಡೀಸ್ ನಿಂದ ತೀರಿ ಹೋಗ್ತಾರೆ. ಆಗಾ ನಮ್ಮ ಕುಟುಂಬ ಕುಗ್ಗಿ ಹೋಗುತ್ತೆ. ಇದರ ನಡುವೆ ನಮ್ಮ ತಂದೆ ಸತ್ತು ಹೋದ ಒಂದು ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕು. ಮದುವೆ ಮಾಡಬೇಕು ಎನ್ನುತ್ತಾರೆ. ನಾನು ಚಿಕ್ಕವಳಾದ ಕಾರಣ ಮದುವೆ ಬೇಡ ಎಂದು ಹೇಳುತ್ತೇನೆ.

ನನ್ನ ಅಣ್ಣನ ಮದುವೆ ಮಾಡಲು ನಿರ್ಧಾರ ಮಾಡ್ತೇವೆ. ಆಗ ಅಷ್ಟೊಂದು ದುಡ್ಡು ಇರಲ್ಲ. ಮಗನ ಮದುವೆ ಗ್ರ‍್ಯಾಂಡ್ ಆಗಿ ಮಾಡಬೇಕು ಎಂದುಕೊಳ್ತೇವೆ. ಅದಕ್ಕಾಗಿ ಮನೆಯಲ್ಲಿದ್ದ ದುಡ್ಡು, ಬೇರೆ ಕಡೆಯಿಂದ ಸಾಲ ತಂದು ಮದುವೆ ಮಾಡುತ್ತೇವೆ. ಮದುವೆ ಆಗಿ ಎರಡೇ ದಿನಕ್ಕೆ ನಮ್ಮ ಅಣ್ಣ ಬದಲಾಗಿ ಬಿಟ್ಟ, ನಮ್ಮ ಅತ್ತಿಗೆ ಮುಂದೆಯೇ ತಟ್ಟೆಯನ್ನು ಬಿಸಾಕಿ ಬಿಟ್ಟ. ಅವರ ಮುಂದೆ ನಮ್ಮನ್ನು ಬಿಟ್ಟು ಕೊಟ್ಟು. 2 ದಿನಕ್ಕೆ ಮನೆ ಬಿಟ್ಟು ಹೊರಟು ಹೋದ. ಇದನ್ನೂ ಓದಿ: ಹೆಂಡ್ತಿ ನೆನಪು ಮಾಡಿಸಿದ್ದಕ್ಕೆ ರಾಜಣ್ಣ, ರೂಪೇಶ್‌ನನ್ನು ಅಟ್ಟಾಡಿಸಿದ ಗುರೂಜಿ

 

View this post on Instagram

 

A post shared by Deepika Das (@deepika__das)

ನಮಗೆ ಆಗ ತುಂಬಾ ಕಷ್ಟ ಆಯ್ತು. ಅಪ್ಪ ಇಲ್ಲ. ಅಣ್ಣ ಮನೆ ಬಿಟ್ಟು ಹೋದ. ಅದೇ ವೇಳೆಯಲ್ಲಿ ನಮ್ಮ ನಾಯಿ ಮರಿ ತೀರಿ ಹೋಯ್ತು. ಸಂಬಂಧಿಕರೆಲ್ಲಾ ದೂರ ಆದ್ರು. ಆ ನೋವು ಯಾರಿಗೂ ಬರಬಾರದು. ಅದೇ ವೇಳೆ ನನಗೆ ನಾಗಿಣಿ ಧಾರಾವಾಹಿ ಸಿಕ್ತು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಆದಾದ ನಂತರ ಬಿಗ್ ಬಾಸ್, ಮತ್ತೆ ಬಿಗ್ ಬಾಸ್. ಖುಷಿಯಾಗಿದೆ. ಈಗ ನಮ್ಮ ಅಣ್ಣ ಬಂದಿದ್ದಾನೆ. ಖುಷಿಯಾಗಿದ್ದೇವೆ. ಆದ್ರೂ ಆ ದಿನ ಮರೆಯೋಕೆ ಸಾಧ್ಯವಿಲ್ಲ ಎಂದು ದೀಪಿಕಾ ಹೇಳಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button