ದೊಡ್ಮನೆಯ ಪ್ರೇಮ ಪಕ್ಷಿಗಳಾಗಿ ಸಾನ್ಯ (Sanya Iyer) ಮತ್ತು ರೂಪೇಶ್ (Roopesh Shetty) ಹೈಲೆಟ್ ಆಗಿದ್ದಾರೆ. ಓಟಿಟಿಯಿಂದ ಪರಿಚಿತರಾದ ಈ ಜೋಡಿ ಈಗ ಟಿವಿ ಬಿಗ್ ಬಾಸ್‌ನಲ್ಲೂ (Bigg Boss) ಮೋಡಿ ಮಾಡುತ್ತಿದ್ದಾರೆ. ಇದೀಗ ದೊಡ್ಮನೆಯಲ್ಲಿ ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದು ರೂಪೇಶ್‌ಗೆ ಸಾನ್ಯ ಹೇಳಿದ್ದಾರೆ.
ಓಟಿಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ ನಡುವೆ ಟಿವಿ ಬಿಗ್ ಬಾಸ್‌ನಲ್ಲಿ ಕಾವ್ಯಶ್ರೀ ಗೌಡ (Kavyashree Gowda) ಎಂಟ್ರಿ ಕೊಟ್ಟಿದ್ದರು. ಕಾವ್ಯ ಎಂಟ್ರಿಯಿಂದ ಸಾನ್ಯ ಬೇಸರಗೊಂಡಿದ್ದರು. ಇದೀಗ ಮೊದಲ ವಾರದ ಜೋಡಿ ಟಾಸ್ಕ್ ಮುಗಿದ ಬಳಿಕ ಸಾನ್ಯ ನಿರಾಳವಾಗಿದ್ದಾರೆ. ಇನ್ನೂ ರೂಪೇಶ್ ತಮ್ಮ ಸಮಯವನ್ನು ಸಾನ್ಯಗೆ ಕೊಡ್ತಿದ್ದಾರೆ. ಇದೀಗ ಸಾನ್ಯ ಮತ್ತು ರೂಪೇಶ್ ಸಂಭಾಷಣೆ ನೋಡುಗರನ್ನ ಥ್ರಿಲ್ ಮಾಡುತ್ತಿದೆ. ನನ್ನ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದು ರೂಪೇಶ್‌ಗೆ ಸಾನ್ಯ ಪ್ರಪ್ರೋಸ್ ಮಾಡಿದ್ದಾರೆ. ಇದೀಗ ದೊಡ್ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಲವ್ವಿ ಡವ್ವಿ ಶುರುವಾಗಿದೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ
ಸಾನ್ಯ ರೂಪೇಶ್‌ಗೆ ಕೆನ್ನೆ ಗಿಂಡಿ ದೃಷ್ಟಿ ತೆಗೆದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರನಡೆದ ಮೇಲೆ ನಿನಗೆ ಹುಡುಗಿ ಸಿಕ್ಕರೆ, ಮೊದಲು ನೀನು ನನಗೆ ಹೇಳಬೇಕು ಎಂದು ಸಾನ್ಯ ರೂಪೇಶ್‌ಗೆ ತಾಕೀತು ಮಾಡಿದ್ದಾರೆ. ಆಗ ಮತ್ತೆ ನಾನು ಹುಡುಗಿ ಹುಡುಕಬೇಕಾ ಎಂದು ಮಾತಿನಲ್ಲೇ ರೂಪೇಶ್ ಚಮಕ್ ಕೊಟ್ಟಿದ್ದಾರೆ. ಹೌದು ಎಂದು ಸಾನ್ಯ ಪ್ರತಿಯುತ್ತರ ನೀಡಿದ್ದಾರೆ.
ಬಳಿಕ ಸರಿ ನಾನು ಹೊರಗೆ ಹೋಗುತ್ತೇನೆ ಸರಿ ಬೈ ಮಾ ಎಂದಿದ್ದಾರೆ. ಏನದು ಬೈ ಅಮ್ಮ ಅಂದರೆ ಎಂದು ರೂಪೇಶ್ ಪ್ರಶ್ನಿಸಿದ್ದಾರೆ. ಲಾಟ್ಸ್ ಆಫ್ ಲವ್‌ಯಿಂದ (Lots Of Love) ಕರೆದೆ ಎಂದು ಹೇಳಿದ ಸಾನ್ಯಗೆ ಇದೆಲ್ಲಾ ಎಲ್ಲಿಯವರೆಗೂ ಎಂದು ರೂಪೇಶ್ ಕೇಳಿದ್ದಾರೆ. ನನ್ನ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡ್ತೀನಿ ಎಂದು ಸಾನ್ಯ ಹೇಳಿದ ಮಾತಿಗೆ ಎದೆ ಮುಟ್ಟಿ, ರೂಪೇಶ್ ಸ್ಮೈಲ್ ಮಾಡಿದ್ದಾರೆ. ಒಟ್ನಲಿ ಈ ಸೀಸನ್ ಮುಗಿದು ಹೊರ ನಡೆಯುವ ಸಮಯದಲ್ಲಿ ಸಾನ್ಯ ರೂಪು, ಜೋಡಿ ಹಕ್ಕಿಗಳಾಗಿ ಹೋಗೋದು ಗ್ಯಾರೆಂಟಿ.s