ಸಿಂಹಿಣಿ ಸಂಗೀತಾ ಕ್ಯಾಮೆರಾದಲ್ಲಿ ಸೆರೆಯಾದ ಹುಲಿ

Public TV
1 Min Read
sangeetha sringeri

ಬಿಗ್ ಬಾಸ್ ಕನ್ನಡ 10ರ (Bigg Boss Kannada 10) ಸ್ಪರ್ಧಿ ಸಂಗೀತಾ ಅವರು ಬಂಡೀಪುರ ಅರಣ್ಯಕ್ಕೆ ಸಫಾರಿಗಾಗಿ ಹೋಗಿದ್ದಾರೆ. ಹುಲಿ ನಡೆದು ಬರುತ್ತಿರೋದನ್ನು ಸಂಗೀತಾ (Sangeetha Sringeri) ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.  ಸಿಂಹಿಣಿ ಹುಲಿಯನ್ನು ಭೇಟಿಯಾಗಲು ಬಂದಿದೆ ಎಂದು ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

sangeetha sringeri 1

ರಾಜ್ಯದಲ್ಲೇ ಅತಿ ಹೆಚ್ಚು ಹುಲಿಯನ್ನು ಹೊಂದಿರುವ ಕಾಡು ಎಂಬ ಹೆಗ್ಗಳಿಕೆ ಬಂಡೀಪುರಕ್ಕಿದೆ. ಹೀಗಾಗಿಯೇ ಬಂಡೀಪುರಕ್ಕೆ ಕ್ಯಾಮೆರಾ ಸಮೇತ ಹೋಗಿದ್ದ ಸಂಗೀತಾ ಶೃಂಗೇರಿ, ಹುಲಿಯನ್ನ ತೀರಾ ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಒಂದು ಗಂಟೆ ಹುಲಿಯ ದರ್ಶನವನ್ನು ಮಾಡಿರೋದಾಗಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

sangeetha

ಅಂದಹಾಗೆ, ಸಂಗೀತಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ- ಸಂಗೀತಾ ನಟನೆಯ 777 ಚಾರ್ಲಿ ಜಪಾನ್‌ನಲ್ಲಿ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ

ಇದೇ ಜೂನ್ 28ರಂದು ರಕ್ಷಿತ್‌ ಸಿನಿಮಾ ಸಿನಿಮಾ ಜಪಾನ್‌ನ ಹಲವು ನಗರಗಳಲ್ಲಿ ರಿಲೀಸ್ ಆಗುತ್ತಿದೆ. 2 ವರ್ಷಗಳ ನಂತರವೂ ಈ ಸಿನಿಮಾ ಕ್ರೇಜ್ ಉಳಿಸಿಕೊಂಡಿದೆ. ಜಪಾನ್ ಪ್ರತಿಷ್ಠಿತ ಸಂಸ್ಥೆಯಾದ ‘ಶೋಚಿಕೋ ಮೂವಿ’ ರಕ್ಷಿತ್ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ.

sangeetha sringeri

2023ರಲ್ಲಿ ‘777 ಚಾರ್ಲಿ’ ಥೈಲ್ಯಾಂಡ್‌ನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

2022ರಲ್ಲಿ ‘777 ಚಾರ್ಲಿ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ರಕ್ಷಿತ್ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ನಟಿಸಿದ್ದರು. ಚಾರ್ಲಿ ಸುತ್ತನೇ ಸುತ್ತುವ ಕಥೆಯಾಗಿದ್ರಿಂದ ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಿತ್ತು. ಇದೀಗ ಜಪಾನ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ರೆಡಿಯಾಗಿದ್ದಾರೆ.

Share This Article