ಬಿಗ್ ಬಾಸ್ ಮನೆಯ (Bigg Boss Kannada 10) ಆಟ 76 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ದೊಡ್ಮನೆಯಲ್ಲಿ ‘ಚಾರ್ಲಿ’ ಸುಂದರಿ ಸಂಗೀತಾ ಶೃಂಗೇರಿ (Sangeetha Sringeri) ಕೂಡ ಸಹ ಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಇನ್ನೂ ಕೆಲ ಕಿಡಿಗೇಡಿಗಳು ಸಂಗೀತಾ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಬೇರೇ ಸ್ಪರ್ಧಿಗಳ ಹೆಸರನ್ನ ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡುತ್ತಿರೋದು ನಟಿಯ ಕುಟುಂಬದ ಗಮನಕ್ಕೆ ಬಂದಿದೆ. ಸಂಗೀತಾ ಅತ್ತಿಗೆ ಸುಚಿತ್ರಾ ಅವರು ಈ ಬಗ್ಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಇದೀಗ ಸಂಗೀತಾ ಅತ್ತಿಗೆ ಸುಚಿತ್ರಾ, ಕೆಲವರು ಫೇಕ್ ಅಕೌಂಟ್ ಸೃಷ್ಟಿ ಮಾಡಿ, ಪ್ರತಿಸ್ಪರ್ಧಿಗಳ ಮೇಲೆ ಆರೋಪ ಮಾಡುತ್ತಿದ್ದಾರಂತೆ. ಪ್ರಸ್ತುತ ‘ಬಿಗ್ ಬಾಸ್’ ಸಂಗೀತಾ ಕುಟುಂಬದವರು ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಧ್ವನಿಯೆತ್ತಿದ್ದಾರೆ. ಇದನ್ನೂ ಓದಿ:ಮಹಿಳಾ ಪ್ರಧಾನ ಚಿತ್ರಕ್ಕೆ ಕಾಶಿಮಾ ನಾಯಕಿ
ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ ಫೇಕ್ ಅಕೌಂಟ್ಸ್ ಸೃಷ್ಟಿ ಮಾಡಿ, ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತ, ಸಂಗೀತಾತಾ ಹೆಸರನ್ನು ಎಳೆಯುತ್ತಾ ಸುಮ್ಮ ಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ ಎಂದಿದ್ದಾರೆ. ಸಂಗೀತಾಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲು ಯಾವುದೇ ಆರೋಪವನ್ನು ಅಥವಾ ಅಪಪ್ರಚಾರವನ್ನು ಮಾಡಿರುವುದಿಲ್ಲ. ಮಾಡುವುದೂ ಇಲ್ಲ. ನಾವು ಸುಮ್ಮನಿದ್ದೇವೆ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರೋದಿಲ್ಲ ಎಂದು ಸಂಗೀತಾ ಅವರ ಅತ್ತಿಗೆ ಸುಚಿತ್ರಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಕಿಡಿಗೇಡಿಗಳ ಆಟಕ್ಕೆ ಸಂಗೀತಾ ಅತ್ತಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ಆಟ ಮುಗಿಯಲು ಕೆಲವೇ ಕೆಲವು ದಿನಗಳ ಬಾಕಿಯಿದೆ. ಕಳೆದ ವಾರ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದಾರೆ. ಈ ವಾರ ಸುದೀಪ್, ವೀಕೆಂಡ್ ಎಪಿಸೋಡ್‌ನಲ್ಲಿ ಇರೋದಿಲ್ಲ. ಸ್ಪೆಷಲ್ ಗೆಸ್ಟ್ ಆಗಿ ಹಿರಿಯ ನಟಿ ಶೃತಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಾರ ಎಲಿಮಿನೇಷನ್ ಇರುತ್ತಾ? ಎಂಬುದನ್ನ ಕಾದುನೋಡಬೇಕಿದೆ.