ಬಿಗ್ ಬಾಸ್ (Bigg Boss Kannada) ಬೆಡಗಿ ಸಾನ್ಯ ಅಯ್ಯರ್ (Saanya Iyer) ಅವರು ಕಾಶ್ಮೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಟ್ರೆಕ್ಕಿಂಗ್, ಶಾಪಿಂಗ್ ಅಂತಾ ಕಾಶ್ಮೀರದ ಸುಂದರ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಕಾಶ್ಮೀರದ ಬೀದಿಯಲ್ಲಿ ಸಾನ್ಯ ಸ್ಟೈಲ್ ಆಗಿ ಪೋಸ್ ನೀಡಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
‘ಪುಟ್ಟಗೌರಿ ಮದುವೆ’ (Putta Gowri Maduve) ಸೀರಿಯಲ್ ನಟಿ ಸಾನ್ಯ ಅವರು ಈಗ ವೆಕೇಷನ್ ಎಂಜಾಯ್ ಮಾಡುವ ಮೂಡ್‌ನಲ್ಲಿದ್ದಾರೆ. ಅಮ್ಮ ದೀಪಾ ಅಯ್ಯರ್ ಜೊತೆ ಕಾಶ್ಮೀರಕ್ಕೆ ಹಾರಿದ್ದಾರೆ. ಕಳೆದ ಒಂದು ವಾರದಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ.
ಕಪ್ಪು ಬಣ್ಣದ ಟೀ ಶರ್ಟ್, ಪಿಂಕ್ ಕಲರ್ ಸ್ಕರ್ಟ್ ಧರಿಸಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಸ್ತ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸಾನ್ಯ ಹೊಸ ಸ್ಟೈಲ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್
ಕಳೆದ ವಾರ ಅಮ್ಮನ ಜೊತೆ ಸಾನ್ಯ ಅಯ್ಯರ್ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ ಎಂದು ಅವರು ಬರೆದುಕೊಂಡಿದ್ದರು. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅಭಿಮಾನಿಗಳು ಕೋರಿದ್ದರು.
ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಅವರಿಗೆ ಯಾವುದೇ ಸಿನಿಮಾ ಚಾನ್ಸ್ ಸಿಕ್ಕಿಲ್ಲ. ಸೂಕ್ತ ಪಾತ್ರಕ್ಕಾಗಿ ಅವರು ಎದುರು ನೋಡ್ತಿದ್ದಾರೆ. ಅದಕ್ಕಾಗಿ ಸಕಲ ತಯಾರಿ ಕೂಡ ಮಾಡ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]