ಬಿಗ್ ಬಾಸ್ (Bigg Boss) ಸೀಸನ್ 9 ಕಾರ್ಯಕ್ರಮ ಇದೀಗ ಏಳನೇ ವಾರದಲ್ಲಿ ಮುನ್ನುಗ್ಗುತ್ತಿದೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರದಲ್ಲಿ ನಾನಾ ರೀತಿಯ ವಾಗ್ವಾದಗಳೇ ನಡೆದಿದ್ದರೂ, ಕೊನೆಗೂ ಕ್ಯಾಪ್ಟನ್ ಆಗಿ ಕಾವ್ಯಶ್ರೀ ಗೌಡ (Kavyashree Gowda) ಆಯ್ಕೆಯಾಗಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಕ್ಯಾಪ್ಟನ್ ಆಗಲು ನಾನಾ ಕಸರತ್ತುಗಳನ್ನು ಮಾಡಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna), ಕಳಪೆ ಹಣೆಪಟ್ಟಿ ಪಡೆದಿದ್ದಾರೆ.
Advertisement
ರೂಪೇಶ್ ರಾಜಣ್ಣಗೆ ಕಳಪೆ ಹಣೆಪಟ್ಟಿ ಕಟ್ಟಲು ಕಾರಣ, ಅವರು ಈ ವಾರ ಮನೆಯಲ್ಲಿ ಆಡಿದ ಮಾತು. ತೀರಾ ಒರಟು ಒರಟಾಗಿ ಎಲ್ಲರೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಸ್ಥಾನ ಅವರಿಗೆ ಸಿಕ್ಕಿದೆ. ಕಳಪೆ ಸಿಕ್ಕ ಕಾರಣಕ್ಕಾಗಿ ಜೈಲಿಗೂ ಕಳುಹಿಸಲಾಗಿದೆ. ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ಅನುಪಮಾ ಗೌಡ, ಕಾವ್ಯಶ್ರೀ ಗೌಡ, ದಿವ್ಯಾ, ದೀಪಿಕಾ ದಾಸ್, ರಾಕೇಶ್ ಅಡಿಗ ಸೇರಿದಂತೆ ಬಹುತೇಕರು ರೂಪೇಶ್ ರಾಜಣ್ಣನ ಕುರಿತಾದ ಮಾತಿನಲ್ಲೇ ಇದನ್ನೇ ವಿವರಿಸಿದರು. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ
Advertisement
Advertisement
ದಿವ್ಯಾ ಉರುಡುಗ ಅಂತೂ ರೂಪೇಶ್ ರಾಜಣ್ಣನ ಮೇಲೆ ಆರೋಪಗಳ ಸುರಿಮಳೆಯನ್ನೂ ಸುರಿಸಿದರು. ನನ್ನೊಂದಿಗೆ ರೂಪೇಶ್ ರಾಜಣ್ಣ ಫೇಕ್ ರೀತಿಯಲ್ಲಿ ನಡೆದುಕೊಂಡರು. ಹಾಗಾಗಿ ನಾನು ಕಳಪೆ ಕೊಡುತ್ತಿದ್ದೇನೆ ಎಂದು ನೇರವಾಗಿಯೇ ತಿಳಿಸಿದರು. ಈ ಎಲ್ಲರ ಮಾತಿಗೆ ಪ್ರತಿಕ್ರಿಯೆ ನೀಡಿರುವ ರೂಪೇಶ್ ರಾಜಣ್ಣ, ‘ಈ ಮನೆಯಲ್ಲಿ ಯಾವ ರೀತಿ ಮಾತನಾಡಬೇಕು, ಎಷ್ಟು ಟೋನ್ ನಲ್ಲಿ ಮಾತನಾಡಬೇಕು ಎಂದು ಯಾವ ರೂಲ್ಸೂ ಇಲ್ಲ. ನನ್ನ ಸ್ಟೈಲ್ ನಲ್ಲೇ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಸಿ ನೀಡಿದರು.