ಬಿಗ್ ಬಾಸ್ ಮನೆಯ (Bigg Boss House) ಆಟಕ್ಕೆ ಬ್ರೇಕ್ ಬೀಳಲು ಇನ್ನೂ ಎರಡೇ ದಿನ ಬಾಕಿಯಿದೆ. ಈ ವೇಳೆ ಸ್ಪರ್ಧಿಗಳು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ. ರಾಜಣ್ಣ (Roopesh Rajanna) ಬಗ್ಗೆ ರೂಪೇಶ್ ಶೆಟ್ಟಿ (Roopesh Shetty) ಮಾತನಾಡಿದ್ದಾರೆ. ನಾನು ಫ್ಯೂಚರ್‌ನಲ್ಲಿ ಮದುವೆ (Wedding) ಆದರೆ ರಾಜಣ್ಣ ಥರ ಇರುತ್ತೀನಿ ಎಂದು ಮಾತನಾಡಿದ್ದಾರೆ.
ಈಗಾಗಲೇ ದೊಡ್ಮನೆಯ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಿರುವಾಗ ಅಂತಿಮ ಘಟ್ಟದಲ್ಲಿ ರಾಜಣ್ಣ ಬಗ್ಗೆ ತಮ್ಮ ಮನದಾಳದ ಮಾತನ್ನ ರೂಪೇಶ್ ಶೆಟ್ಟಿ ಹಂಚಿಕೊಂಡಿದ್ದಾರೆ. ಈ ಸೀಸನ್‌ನ ನನ್ನ ಜರ್ನಿಯಲ್ಲಿ ಎರಡು ಹಾಫ್ ಅಂತಾ ಮಾಡಿದರೆ, ಸೆಕೆಂಡ್ ಹಾಫ್‌ನಲ್ಲಿ ರಾಜಣ್ಣ ಅವರು ಆವರಿಸಿಕೊಂಡಿದ್ದಾರೆ. ಸಾನ್ಯ ಎಲಿಮಿನೇಷನ್ ನಂತರ ಗುರೂಜಿ ಇಲ್ಲದೇ ನನ್ನ ಮಾತು ಕಂಪ್ಲೀಟ್ ಆಗುವುದಿಲ್ಲ. ಈ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಇದ್ದಂತಹ ಫನ್‌ನಲ್ಲಿ ರಾಜಣ್ಣ ಪಾತ್ರ ದೊಡ್ಡದಿದೆ. ಇದನ್ನೂ ಓದಿ: ಜನವರಿ 8ಕ್ಕೆ ಯಶ್ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್
ನನಗೆ ಅಂದು ಕೊಟ್ಟ ಆ ಒಂದು ಲೆಟರ್ ಬಿಟ್ಟರೆ ಬೇರೇನೂ ಬೇಸರ ಇಲ್ಲ. ಬಹುಶಃ ಬೇರೆಯವರು ಆ ಲೆಟರ್ ನೀಡಿದ್ದರೆ ನಾನು ಬದಲಾಗ್ತಾ ಇರಲಿಲ್ಲ. ಇದಾದ ಬಳಿಕ ನೀವೂ ತೋರಿಸಿದ ಕೇರ್‌ನಿಂದಾಗಿ, ನಾನು ಮತ್ತೆ ಫ್ರೆಂಡ್‌ಶಿಪ್ ಮುಂದುವರೆಸಿದ್ದೀನಿ. ನೀವೂ ಮನಸ್ಸಲ್ಲಿ ಏನನ್ನು ಇಟ್ಟುಕೊಳ್ಳಬೇಡಿ. ನಾನು ಆ ಒಂದು ದಿನವನ್ನು ಈಗಾಗಲೇ ಡಿಲೀಟ್ ಮಾಡಿದ್ದೀನಿ. ಇನ್ನೊಂದು ವಿಚಾರ, ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ಸ್ ಅಂದ್ರೆ ಏನು ಅಂತ ಗೊತ್ತಾಯ್ತು. ಲವ್ ಅಂದ್ರೆ ಏನು ಅಂತ ಗೊತ್ತಿತ್ತು. ಆದರೆ, ಮದುವೆಯಾದ್ಮೇಲೆ ಒಬ್ಬ ಗಂಡ ಹೇಗಿರಬೇಕು ಎಂಬ ಉದಾಹರಣೆ ಸಿಕ್ಕಿದೆ. ಅದು ರೂಪೇಶ್ ರಾಜಣ್ಣ ಅವರಿಂದ ನಂಗೆ ತುಂಬಾ ಖುಷಿಯಾಯ್ತು. ನಾನು ಫ್ಯೂಚರ್‌ನಲ್ಲಿ ಮದುವೆ ಆದ್ರೆ ನಾನು ಅದೇ ಥರ ಇರುತ್ತೀನಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಇನ್ನೂ ಡಿಸೆಂಬರ್ 30 ಮತ್ತು 31ರಂದು ಸಂಜೆ 7.30ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಇರಲಿದೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ ಅವರಲ್ಲಿ ಯಾರಿಗೆ ಒಲಿಯಲಿದ್ದಾರೆ ಗೆಲುವಿನ ಲಕ್ಷ್ಮಿ ಎಂಬುದನ್ನ ಕಾದುನೋಡಬೇಕಿದೆ. ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.