ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಹಿಂದೆ ಮೋಸದಾಟ ಆಡಿದ ಭವ್ಯಾಗೆ ಸುದೀಪ್ ಎಚ್ಚರಿಕೆ ನೀಡಿದ್ದರು. ಈ ಬಾರಿ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಲು ಧನರಾಜ್ (Dhanraj Achar) ಮೋಸದಾಟ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.
Advertisement
ಹನುಮಂತ ಫಿನಾಲೆ ಟಿಕೆಟ್ ಗಿಟ್ಟಿಸಿಕೊಂಡು ಸೇಫ್ ಆಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಜೊತೆಗೆ ವಾರದ ಕೊನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಚ್ಚರಿಕೆ ಕೊಟ್ಟಿದ್ದರು. ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್‌ನಿಂದ ಬಚಾವ್ ಎಂದು ಘೋಷಿಸಿದ್ದರು. ಇದನ್ನೂ ಓದಿ:ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ- ಆಸ್ಪತ್ರೆಗೆ ದಾಖಲು
Advertisement
View this post on Instagram
Advertisement
ಈ ವಾರದ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ಯ ಗೆದ್ದು ಬೀಗಿದ್ದರು. ಈ ವಾರದ ಮಿಡ್ ಎಲಿಮಿನೇಷನ್‌ನಿಂದ ಸೇಫ್ ಆಗಿದ್ದರು. ಆದರೆ ಇದೀಗ ಬಿಗ್ ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಪಜಲ್ ಗೇಮ್ ಆಡಿದ್ದು, ರಿವೀಲ್ ಆಗಿದೆ. ಹೀಗಾಗಿ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಅನ್ನು ಮುಂದೂಡಿಕೆ ಮಾಡಿದ್ದಾರೆ ಬಿಗ್ ಬಾಸ್.
Advertisement
ಈ ಬಗ್ಗೆ ಖುದ್ದು ಬಿಗ್ ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ ಬಿಗ್ ಬಾಸ್. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೇ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಬೇಡಿಕೊಂಡಿದ್ದಾರೆ. ಈ ವಿಚಾರ ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ.