ಹಾಸ್ಯ ನಟ ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ ಬುಲೆಟ್ (Rakshak Bullet) ಇದೀಗ ದುಬಾರಿ ಕಾರುವೊಂದನ್ನು ಖರೀದಿಸಿದ್ದಾರೆ. ರಕ್ಷಕ್ ಮನೆಗೆ ಹೊಸ ಅತಿಥಿ ಆಗಮನ ಆಗಿರೋ ಸಂತಸದಲ್ಲಿದ್ದಾರೆ. ದುಬಾರಿ ಕಾರು ಖರೀದಿ ಮಾಡಿದಕ್ಕೆ ಬುಲೆಟ್ ಪ್ರಕಾಶ್ ಪುತ್ರನಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಕೋಟಿ ಕೋಟಿ ಹಣ ಎಲ್ಲಿಂದ ಬಂತು ಅಂತ ನೆಟ್ಟಿಗರು ರಕ್ಷಕ್ ಕಾಲೆಳೆದಿದ್ದಾರೆ.
ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲಿಗರ ಬಾಯಿಗೆ ಆಹಾರವಾಗುವ ರಕ್ಷಕ್ ಈ ಬಾರಿ ಕಾಲೆಳೆಯುವವರಿಗೆ ಡೋಂಟ್ ಕೇರ್ ಎಂದಿದ್ದಾರೆ. ದುಬಾರಿ ಕಾರು ಖರೀದಿಸುವ ಮೂಲಕ ಟ್ರೋಲ್ ಮಾಡುವವರಿಗೆ ಸಖತ್ ಆಗಿ ತಿರುಗೇಟು ನೀಡಿದ್ದಾರೆ.
ರಕ್ಷಕ್ ಮನೆಗೆ ಬಿಎಂಡಬ್ಲೂ ಕಾರು ಬಂದಿರುವ ಫೋಟೋ ಶೇರ್ ಮಾಡಿ ‘ಹೊಸ ಸದಸ್ಯ ಮನೆಗೆ ಸ್ವಾಗತ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಅತಿಥಿ ಆಗಮನದ ಬೆನ್ನಲ್ಲೇ ಇಲಿಯಾನಾ ಕೊಟ್ರು ಗುಡ್ ನ್ಯೂಸ್
ದುಬಾರಿ ಕಾರಿನ ಫೋಟೋ ರಕ್ಷಕ್ ಶೇರ್ ಮಾಡ್ತಿದ್ದಂತೆ ಕಣ್ಣು ಬಿಟ್ಟಂತೆ ಕಾರಿನ ಬೆಲೆ ಬಗ್ಗೆ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ. ಬಿಎಂಡಬ್ಲೂ ಕಾರಿನ ಬೆಲೆ ಕಡಿಮೆ ಅಂದರೂ 40 ಲಕ್ಷ ರೂ.ಯಿಂದ 2.60 ಕೋಟಿ ರೂ. ಒಳಗಿದೆ. ಇಷ್ಟೊಂದು ಕಾಸು ರಕ್ಷಕ್ ಬಳಿ ಬಂದಿದ್ದಾದರೂ ಹೇಗೆ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಅಂದ್ಹಾಗೇ ಕಳೆದ ವರ್ಷ ತಮ್ಮ ಸಹೋದರಿಯ ಮದುವೆಗೆ ಮುನ್ನ, ರಕ್ಷಕ್ ಮಹಿಂದ್ರಾ ಥಾರ್ ಕಾರನ್ನ ಖರೀದಿ ಮಾಡಿದ್ದರು. ಈಗ ಬಿ.ಎಂ.ಡಬ್ಲೂ ಕಾರು ರಕ್ಷಕ್ ಮನೆಗೆ ಎಂಟ್ರಿ ಕೊಟ್ಟಿದೆ.
ತಂದೆಯಂತೆ ಉತ್ತಮ ಕಲಾವಿದನಾಗಿ ಮಿಂಚಲು ರಕ್ಷಕ್ ಪ್ರಯತ್ನಿಸುತ್ತಿದ್ದಾರೆ. ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ ಮೇಲೆ ‘ಬಿಗ್ ಬಾಸ್ ಕನ್ನಡ 10’ರಲ್ಲಿ (Bigg Boss Kannada 10) ರಕ್ಷಕ್ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ ಶೋ ರಕ್ಷಕ್‌ಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದೆ.