ರಿಯಲ್ ಸ್ಟಾರ್ ಉಪೇಂದ್ರ (Upendra) ‘ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದ್ನೆಕಾಯಿ’ ಎಂದಿದ್ದಾರೆ. ಆದರೆ, ರಾಕೇಶ್ ವಿಷಯದಲ್ಲಿ ಪ್ರೀತಿ ಪ್ರೇಮವೇ ನಿತ್ಯದಾಟ ಎನ್ನುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಯಾರ ಎದುರಿಗೆ ಸಿಕ್ಕರೂ, ಬರೀ ಪ್ರೇಮ ಸಲ್ಲಾಪವೇ ನಡೆಯುತ್ತಿದೆ. ಬಿಗ್ ಬಾಸ್ ಓಟಿಟಿಯಲ್ಲಿ (Rakesh) ರಾಕೇಶ್, ಜಯಶ್ರೀ ಮತ್ತು ಸೋನು ನಡುವೆ ತ್ರಿಕೋನ ಪ್ರೇಮ ನಡೆದಿತ್ತು. ಅವಕಾಶ ಸಿಕ್ಕಾಗೆಲ್ಲ ಇಬ್ಬರಿಗೂ ಒಂದೊಂದು ಕಿಸ್ ಕೊಟ್ಟು ಮೆಂಟೇನ್ ಮಾಡ್ತಿದ್ರು. ಬಿಗ್ ಬಾಸ್ ಸೀಸನ್ 9ರಲ್ಲಿ ಅವರಿಬ್ಬರೂ ಇಲ್ಲ. ಹಾಗಾಗಿ ಹೊಸ ಪ್ರೇಮಿಯ ಹುಡುಕಾಟದಲ್ಲಿದ್ದಾರೆ ರಾಕೇಶ್.
ಎರಡ್ಮೂರು ದಿನದಿಂದ ಹೊಸ ಹಕ್ಕಿಗಾಗಿ ಕಾಳು ಹಾಕುತ್ತಿದ್ದ ರಾಕೇಶ್, ಇದೀಗ ದಿಢೀರ್ ಅಂತ ಸಾನ್ಯ ಅಯ್ಯರ್ (Sanya Iyer) ನನ್ನ ಲವರ್ ಎಂದು ಘೋಷಿಸಿ ಬಿಟ್ಟಿದ್ದಾರೆ. ಇದೇ ವಿಚಾರವಾಗಿಯೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಕೂಡ ನಡೀತಿದೆ. ಸಾನ್ಯ ಅಯ್ಯರ್ ಕುಡಿದ ಲೋಟದಲ್ಲೇ ರಾಕೇಶ್ ಟಿ ಕುಡಿದಿದ್ದಾರೆ. ಅದನ್ನು ಕಂಡ ಗುರೂಜಿ, ‘ಇದೇನಿದು ಆ ಹುಡುಗಿ ಕುಡಿದಿಟ್ಟ ಕಪ್ ನಲ್ಲಿ ಟಿ ಕುಡೀತಿದ್ದೀಯಾ’ ಎಂದು ಕೇಳುತ್ತಾರೆ. ಒಂದು ಕ್ಷಣವೂ ಯೋಚಿಸದ ರಾಕೇಶ್, ‘ಸಾನ್ಯ ನನ್ನ ಲವರ್’ ಎಂದು ಹೇಳುವ ಮೂಲಕ ಮನೆಯ ಸದಸ್ಯರ ಎದೆಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್
ಪ್ರೀತಿ ಪ್ರೇಮದ ವಿಚಾರವಾಗಿ ರಾಕೇಶ್, ಸಖತ್ ಗೇಮ್ ಆಡ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸೋನು ಗೌಡ (Sonu Gowda), ಜಯಶ್ರೀ (Jayashree) ಹಿಂದೆ ಬಿದ್ದಿದ್ದವರು, ಆನಂತರ ಅಮೂಲ್ಯ ಜೊತೆ ಸುತ್ತಿದರು. ಸಡನ್ನಾಗಿ ಈಗ ಸಾನ್ಯ ಅಯ್ಯರ್ ನನ್ನ ಲವರ್ ಎನ್ನುತ್ತಾರೆ. ಈ ನಡೆ ದೀಪಿಕಾ ದಾಸ್ಗೆ (Deepika Das) ಅಚ್ಚರಿ ಮೂಡಿಸಿದೆ. ಹಾಗಾಗಿ ರಾಕೇಶ್ ಅವರ ಪ್ರೇಮ ಪುರಾಣ ಕೇಳಲು ಮುಂದಾಗ್ತಾರೆ. ತಾನು ಅದೆಷ್ಟೋ ಜನರನ್ನು ಲವ್ ಮಾಡಿದ್ದು ನಿಜ. ಆದರೆ, ಬ್ರೇಕ್ ಅಪ್ ಆಗಿಲ್ಲ ಎಂದು ಹೊಸ ಬಾಂಬ್ ಸಿಡಿಸ್ತಾರೆ ರಾಕೇಶ್. ಲವ್ ಅಂದರೆ ಬ್ರೇಕ್ ಆಗದೇ ಇರುವ ಅನುಭವ ಎಂದು ಹೊಸ ಪಾಠ ಕೂಡ ಮಾಡ್ತಾರೆ ರಾಕೇಶ್.
ಲವ್ ವಿಚಾರವಾಗಿ ರಾಕೇಶ್ ಮತ್ತು ಗುರೂಜಿ ನಡುವೆಯೂ ಮತ್ತೆ ಚರ್ಚೆ ನಡೆದಿದೆ. ಸಾನ್ಯ ಟಿ ಕುಡಿದ ಕಪ್ ನಲ್ಲಿ ರಾಕೇಶ್ ಕುಡಿದ ಅನ್ನೋ ವಿಚಾರವನ್ನೇ ಮುಂದಿಟ್ಟುಕೊಂಡು ಸಾರಸ್ಯಕರವಾದ ಮಾತುಗಳನ್ನೂ ಆಡಿದ್ದಾರೆ ರ‍್ಯರ‍್ಧನ್ ಮತ್ತು ರಾಕೇಶ್. ‘ನನ್ನ ಬಸ್ ಈಗ ಸಾನ್ಯ ಕಡೆ ತಿರುಗಿದೆ ಎಂದು ಗುರೂಜಿ ಬಳಿ ರಾಕೇಶ್ ಹೇಳ್ತಾರೆ. ಅದಕ್ಕೆ ಗುರೂಜಿ ‘ನೋಡಿಕೊಂಡು ಹಾರ್ನ್ ಹೊಡಿ’ ಎಂದು ಕಿಚ್ಚಾಯಿಸ್ತಾರೆ. ಬಸ್ ನಿಲ್ಲಿಸಿ ಹಾರ್ನ್ ಹೊಡೆಯೋದೇ ಹತ್ತೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ರಾಕೇಶ್ ತಮಾಷೆ ಮಾಡ್ತಾರೆ. ಒಂದ್ ಕಡೆ ಅಮೂಲ್ಯ, ಮತ್ತೊಂದು ಕಡೆ ಸಾನ್ಯ ಅಯ್ಯರ್ , ಯಾರು ಒಲವು ರಾಕೇಶ್ ಕಡೆಗೆ ಎಂದು ಕಾದುನೋಡಬೇಕಿದೆ.