ಬಿಗ್ ಬಾಸ್ ಮನೆಯ (Bigg Boss House) ಲವ್ ಬರ್ಡ್ಸ್ (Love Birds) ಆಗಿ ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ ಗೌಡ (Amulya Gowda) ಹೈಲೈಟ್ ಆಗಿದ್ದರು. ಇಬ್ಬರ ಲವ್ವಿ ಡವ್ವಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅಮೂಲ್ಯ ಎಲಿಮಿನೇಷನ್‌ಗೂ ಮುಂಚೆ ರಾಕಿ, ಅಮ್ಮುಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಆದರೆ ಈಗ ಆ ಕನಸು ಕನಸಾಗಿಯೇ ಉಳಿದಿದೆ. 13ನೇ ವಾರಕ್ಕೆ ಅಮೂಲ್ಯ ಔಟ್ ಆಗಿದ್ದಾರೆ.
ಅಮೂಲ್ಯ ಗೌಡ (Amulya Gowda) ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದವರು. ರಾಕೇಶ್ ಜೊತೆಗಿನ ಒಡನಾಟದ ವಿಷ್ಯವಾಗಿ ಹೈಲೈಟ್ ಆಗಿದ್ದರು. ರಾಕೇಶ್ ಅಡಿಗ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋದಾಗ ಅಮೂಲ್ಯಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಬೆಳದಿಂಗಳ ಕಗ್ಗತ್ತಲು, ರಾತ್ರಿಯೆಲ್ಲಾ ಹೊರಗೆ ಮಾತನಾಡುವ ಖುಷಿಯೇ ಬೇರೇ, ಇಷ್ಟು ದಿನ ಹೇಗೋ ಆಯ್ತು. ಆದರೆ ಬಿಗ್ ಬಾಸ್‌ನ ಕೊನೆಯ ಕ್ಷಣಗಳನ್ನ ಫೀಲ್ ಮಾಡಬೇಕೆಂದು ರಾಕಿ ಆಸೆಪಟ್ಟಿದ್ದರು. ಈ ಬಗ್ಗೆ ಅಮ್ಮು ಬಳಿ ಮಾತನಾಡಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್
ಹೊರಗೆ ಮಲಗುವುದು ಎಷ್ಟು ಚೆಂದ ಇರುತ್ತೆ ಗೊತ್ತಾ. ಶನಿವಾರ ರಾತ್ರಿ ಮಲಗೋಣಾ ಎಂದಾಗ ಅಮೂಲ್ಯ, “ಓಕೆ ಡನ್ ಬಟ್ ಎರಡು ಬೆಡ್ ಇಲ್ಲ ಬಾಬಾ” ಎಂದಿದ್ದಾರೆ. ಆಗ ರಾಕಿ, ಬೆಡ್ ಸೆಟಪ್ ಮಾಡಿಕೊಳ್ಳೋಣಾ. ಅದೇನು ಅಷ್ಟೊಂದು ಕಷ್ಟವೇ ಅಲ್ಲ. ಎಷ್ಟೊಂದು ಪ್ರಾಪರ್ಟಿಸ್ ಇದೆ. ಅದೇನು ದೊಡ್ಡ ವಿಷ್ಯಾನಾ ಎಂದಿದ್ದರು. ಅಷ್ಟರಲ್ಲಿ ಅಮೂಲ್ಯ ಗೌಡ ಎಲಿಮಿನೇಟ್ (Elimination) ಆಗಿ ಹೊರಬಂದರು.
ಅಮೂಲ್ಯ ಎಲಿಮಿನೇಷನ್ ರಾಕೇಶ್‌ಗೆ ಶಾಕ್ ಕೊಟ್ಟಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅಮ್ಮು ಅನುಪಸ್ಥಿತಿಯನ್ನು ರಾಕೇಶ್ ನೆನಪು ಮಾಡಿಕೊಳ್ತಿದ್ದಾರೆ. ಸದ್ಯ ಫಿನಾಲೆಗೆ ಲಗ್ಗೆ ಇಟ್ಟಿರುವ ಕಾರಣ, ಆಟದ ಕಡೆಗೂ ಗಮನ ಕೊಡ್ತಿದ್ದಾರೆ. ಅಂತಿಮ ಹಣಾಹಣಿಗೆ ಕೇವಲ ಐದು ದಿನ ಬಾಕಿಯಿದೆ.