ಬೆಂಗಳೂರು: ಎಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗಿ 100 ದಿನ ಪೂರೈಸಿದ್ದು, ಅವರ ಬಗ್ಗೆ ಇನ್ನು ಹೆಚ್ಚಿನ ನಿರೀಕ್ಷೆಗಳಿವೆ ಈಗ ಸಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ಪ್ರತಿ ದಿನ ರಾಜಕೀಯ ಬೆಳವಣಿಗೆಗಳನ್ನು ಬಹಳ ಕುತೂಹಲದಿಂದ ನೋಡುವಂತವರಲ್ಲಿ ನಾನು ಮೊದಲಿಗ ಎಂದು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೇಳಿದರು.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಯುವ ಸೇನೆ ವತಿಯಿಂದ ಆಯೋಜಿಸಿದ್ದ ಬೃಹತ್ ಕಣ್ಣಿನ ತಪಾಸಣಾ ಶಿಬಿರಕ್ಕೆ ಆಗಮಿಸಿ ಚಾಲನೆ ನೀಡಿದರು. ಬಳಿಕ ಪ್ರಥಮ್ ಮಾಧ್ಯಮಗಳೊಂದಿಗೆ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.
ಕುಮಾರಸ್ವಾಮಿ ಅವರು ಸಿ.ಎಂ ಆಗಿ 100 ದಿನ ಪೂರೈಸಿದ್ದಾರೆ ಅವರ ಬಗ್ಗೆ ನನಗೆ ಇನ್ನು ಹೆಚ್ಚಿನ ನಿರೀಕ್ಷೆಗಳಿವೆ. ಈಗ ಸಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ನಾನು ಸಹ ಪ್ರತಿ ದಿನ ರಾಜಕೀಯ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಕುತೂಹಲದಿಂದ ನೋಡುವಂತವರಲ್ಲಿ ನಾನು ಮೊದಲಿಗ. ಈಗಿನ ಸರ್ಕಾರ ಬಿದ್ದರು ಸರಿ ಬೀಳದೆ ಇದ್ದರು ಸರಿ ಯಾವ ಸರ್ಕಾರವಾಗಲಿ ಆಡಳಿತವಾಗಲಿ ಅದು ಜನಕ್ಕೆ ಉಪಯೋಗವಾಗುವಂತ ಉತ್ತಮವಾದ ಆಡಳಿತ ಕೊಡಲಿ ಎಂದು ಹೇಳಿದರು.
ಅಲ್ಲದೇ ನನ್ನ ಮುಂದಿನ ಚಿತ್ರವು ಸಹ ರಾಜಕೀಯ ಸಂಬಂಧಿತ ಎಂಎಲ್‍ಎ ಚಿತ್ರವು ಈಗಾಗಲೇ ಬಿಡುಗಡೆಗೆ ಸಿದ್ದವಾಗಿದೆ. ಎಲ್ಲರೂ ಚಿತ್ರವನ್ನು ನೋಡಿ ನಮಗೆ ಆಶೀರ್ವದಿಸಿ ಮತ್ತು ಈ ಚಿತ್ರವು ಈಗಿನ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧ ಪಟ್ಟ ಚಿತ್ರ ನಾನು ಎಂಎಲ್‍ಎ ಆಗಿ ನಟನೆ ಮಾಡಿದ್ದೇನೆ ಎಲ್ಲರೂ ಚಿತ್ರವನ್ನು ನೋಡಿ ಎಂದು ಬಿಗ್ ಬಾಸ್ ವಿನ್ನರ್ ಪ್ರಥಮ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv