‘ಬಿಗ್ ಬಾಸ್’ ಪ್ರಥಮ್‌ಗೆ (Pratham) ದರ್ಶನ್ ಅಭಿಮಾನಿಗಳಿಂದ (Darshan Fans) ಬೆದರಿಕೆ ಕರೆ ಬರುತ್ತಿದೆ. ಈ ವಿಚಾರವಾಗಿ ಪ್ರಥಮ್, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಘಟನೆ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಪ್ರಥಮ್‌ಗೆ ಬೆದರಿಕೆ ಕರೆ- ದೂರು ದಾಖಲಿಸಿದ ನಟ
Advertisement
ದರ್ಶನ್ ಪ್ರಕರಣದ ವಿಚಾರವಾಗಿ ಇತ್ತೀಚೆಗೆ ಪ್ರಥಮ್ ಧ್ವನಿಯೆತ್ತಿದ್ದರು. ಇದು ದರ್ಶನ್ ಫ್ಯಾನ್ಸ್‌ಗೆ ಕೆರಳಿಸಿತ್ತು. ಬಳಿಕ ಪ್ರಥಮ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಪ್ರಥಮ್ ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾ ಶೂಟಿಂಗ್ ಮಾಡೋಕೆ ಆಗುತ್ತಿಲ್ಲ ಎಂದು ಮಾತನಾಡಿದ್ದಾರೆ.
Advertisement
Advertisement
ಇಲ್ಲಿ ಯಾರಿಗೂ ಯಾರು ಬಾಸ್ ಅಲ್ಲ. ಬಾಸ್ ಎನ್ನಬೇಡಿ ತಲೆಗೆ ಹತ್ತುತ್ತದೆ. ನಿಮಗೆ ನಿಮ್ಮ ತಂದೆ ತಾಯಿಗಳು ಬಾಸ್ ದುಡಿದು ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಅಲ್ಲಿ ನಿಂತು ಟೈಮ್ ವೇಸ್ಟ್ ಮಾಡಿಕೊಳ್ತಿರಾ ಅದೇ ಟೈಮ್ ಬೇರೆ ಕಡೆ ಹಾಕಿ ಉಪಯೋಗಿಸಿಕೊಳ್ಳಿ ಎಂದಿದ್ದಾರೆ. ಯಾರು ಯಾರಿಗೋಸ್ಕರನೋ ಜೈಲಿಗೆ ಹೋಗಬೇಡಿ. ಸ್ಟೇಷನ್ ಹತ್ತಿರ ಅಲ್ಲ ಕೂಗೋದು. ಥಿಯೇಟರ್ ಹತ್ತಿರ ಹೋಗಿ ಕೂಗಿ ಸಿನಿಮಾಗಾದರೂ ಒಳ್ಳೆಯದಾಗುತ್ತದೆ. ಕಾವೇರಿಗಾಗಿ ಕೂಗಿ ಇಲ್ಲ, ಕನ್ನಡಕ್ಕಾಗಿ ಹೋರಾಡಿ ಎಂದು ಪ್ರಥಮ್ ಈ ವೇಳೆ ಮಾತನಾಡಿದ್ದಾರೆ.
Advertisement
ಯಾರನ್ನೋ ತೇಜೋವಧೆ ಮಾಡಿ ನಾನು ಅನ್ನ ತಿನ್ನಬೇಕಿಲ್ಲ. ಈಗಾಗಲೇ 8-10 ಕುಟುಂಬ ಜೈಲಿಗೆ ಹೋಗಿರೋದ್ರಿಂದ ಅವರ ಗೋಳಾಟ ನೋಡೋಕೆ ಆಗ್ತಿಲ್ಲ. ಈಗ ಆದ್ರೂ ತಪ್ಪು ತಿದ್ದಿಕೊಳ್ಳಿ ಎಂದು ಡಿಬಾಸ್ ಫ್ಯಾನ್ಸ್‌ಗೆ ಪ್ರಥಮ್ ಕಿವಿಹಿಂಡಿದ್ದಾರೆ.