ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಡಿವೋರ್ಸ್ (Divorce) ವಿಚಾರ ತಿಳಿದಾಗ ನಟ ಪ್ರಥಮ್ ಬೇಸರ ಹೊರಹಾಕಿದ್ದರು. ಇಷ್ಟು ಒಳ್ಳೆಯ ಜೋಡಿ ದೂರ ಆಗಬಾರದು. ಇಬ್ಬರನ್ನು ಒಂದು ಮಾಡುವೆ ಎಂದು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿದ್ದರು. ಆದರೆ ಈಗ ದಿಢೀರ್ ಎಂದು ಕೆಂಡಾಮಂಡಲ ಆಗಿದ್ದಾರೆ. ಇದನ್ನೂ ಓದಿ:ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ‘ಅನಿಮಲ್’ ನಟಿ
Advertisement
ಚಂದನ್ ಶೆಟ್ಟಿ ಮತ್ತು ನಿವೇದಿತಾ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದೀರಾ? ಎಂದಿದ್ದ ನೆಟ್ಟಿಗರು, ಅವರಿಬ್ಬರ ವಿಚಾರವನ್ನು ತಮ್ಮ ಜನಪ್ರಿಯತೆಗೆ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ:ಚಂದನ್‌ಗೆ ನಿವೇದಿತಾ ಜೀವನಾಂಶ ಕೇಳಿದ್ರಾ? ಕೊನೆಗೂ ಹೊರಬಿತ್ತು ಅಸಲಿ ಸಂಗತಿ
Advertisement
Advertisement
ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು, ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ. ಹಾಳಾದ ಕೆಲವು ಯೂಟ್ಯೂಟ್ ವಿಡಿಯೋ ನಾನ್ ಹೇಳಿದ್ದಕ್ಕೆ ಏನೇನೋ ಶೀರ್ಷಿಕೆ ಹಾಕಿವೆ. ಇಲ್ಲಿಗೆ ನಿಲ್ಲಿಸಿ, ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ. ಥೂ ನಿಮ್ ಜನ್ಮಕ್ಕೆ. ಏನೇನೋ ಹಾಕ್ತೀರಲ್ರೋ ಹಾಳಾದವರೇ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Advertisement
ನಿನ್ನೆಯಷ್ಟೇ ಚಂದನ್-ನಿವೇದಿತಾ ಡಿವೋರ್ಸ್ ಬಗ್ಗೆ ಮಾತನಾಡಿದ್ದ ಪ್ರಥಮ್, ಇಬ್ಬರೂ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗ್ತಾರಾ? ಒಂದು ಶೋ ಮುಖ್ಯನಾ ಜೀವನ ಮುಖ್ಯನಾ ಎಂದು ಯೋಚನೆ ಮಾಡಿದರೆ ಜೀವನವೇ ಮುಖ್ಯ, ಚೆನ್ನಾಗಿ ಬದುಕಬೇಕು. ಕೆರಿಯರ್ ಬಗ್ಗೆ ಯೋಚಿಸದೆ ಇಬ್ಬರು ಮದುವೆ ಆಗಿಲ್ಲ. ಎಲ್ಲವನ್ನು ಯೋಚಿಸಿಯೇ ಅವರು ಮದುವೆ ಆಗಿದ್ದಾರೆ. ಸುಂದರವಾದ ಬದುಕು, ಇಬ್ಬರು ಚೆನ್ನಾಗಿ ಬದುಕುಬೇಕು ಎಂದಿದ್ದರು.
ಇನ್ನೂ ಧ್ರುವ ಅವರ ಮಾತನ್ನು ಚಂದನ್ ಕೇಳುತ್ತಾರೆ. ನಿವೇದಿತಾ-ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌ಗೆ ಒಳ್ಳೆಯದಾಗಲಿ ಎಂದು ಧ್ರುವ `ಪೊಗರು’ ಸಿನೆಮಾದಲ್ಲಿ ಅವಕಾಶ ಕೊಟ್ಟರು. ಪ್ರೀತಿ ಇದ್ದರೆ ಚಂದನ್, ಧ್ರುವ ಮಾತನ್ನು ಕೇಳುತ್ತಾರೆ. ಮಿಲನಾ ಸಿನಿಮಾದಲ್ಲಿ ವಿಚ್ಛೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಬೇರಾವುದು ದೊಡ್ಡದಲ್ಲ. ನಾನು ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳುಹಿಸುತ್ತೇನೆ. ಅದನ್ನು ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂದು ಮಾತನಾಡಿದ್ದರು.
ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್ ಮಾಡಿದ್ದು ನನಗೆ ಎಫೆಕ್ಟ್ ಆಗಿತ್ತು. ಆ ಘಟನೆಯಿಂದ ಯುವ ದಸರಾ ವೇದಿಕೆಯಲ್ಲಿ ನನ್ನ ಸಿನಿಮಾ ಪ್ರೊಮೋಷನ್‌ಗೆ ಅವಕಾಶ ಸಿಗಲಿಲ್ಲ. ಅದರಿಂದ ಚಂದನ್ ಮೇಲೆ ಕೆಲದಿನ ಕೋಪ ಮಾಡಿಕೊಂಡಿದ್ದೆ. ಬಳಿಕ ಪರಸ್ಪರ ಮಾತನಾಡಿದಾಗ ನಾವಿಬ್ಬರು ಒಳ್ಳೆಯ ಸ್ನೇಹಿತರಾದೆವು. ಚಂದನ್‌ಗೆ ಕೇಳುವ ವಿವೇಚನೆ ಇದೆ. ಅರೇಂಜ್ ಮ್ಯಾರೇಜ್ ಆದರೆ ಕಂಟ್ರೋಲ್ ಇರುತ್ತದೆ. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಯಲ್ಲಿರುತ್ತದೆ. ಈ ಹಿಂದೆ ಯಾವ ವಿಚ್ಛೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ವಾ ಎಂದು ಉದಾಹರಣೆ ನೀಡಿದರು.
350 ಕಿ.ಮೀ ದೂರದಲ್ಲಿ ಕಾರ್ಯಕ್ರಮ ಇದ್ದರೂ ಮದುವೆ ದಿನ ನಮ್ಮ ಮನೆಗೆ ಬಂದು ಚಂದನ್ ವಿಶ್ ಮಾಡಿದ್ದರು. ಮದುವೆ, ತಾಳಿ ಬಗ್ಗೆ ಚಂದನ್‌ಗೆ ಗೌರವ ಇದೆ. ಯಾರೋ ಮಧ್ಯದಲ್ಲಿ ತೊಂದರೆ ಮಾಡಿದ್ದಾರೆ ಅಷ್ಟೇ. ಹಾಳಾದರೆ ಖುಷಿ ಪಡುವವರು ಸಾಕಷ್ಟು ಜನ ಇದ್ದಾರೆ. ನಾನು ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರೂ ಕಷ್ಟದಲ್ಲಿ ಬರಲ್ಲ. ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್. ಅವರಿಬ್ಬರನ್ನು ಒಂದು ಮಾಡುವಂತೆ ಜನರು ನನಗೆ ಮೆಸೆಜ್ ಮಾಡುತ್ತಿದ್ದಾರೆ. ನನ್ನ ಮಾತು ಕೇಳ್ತಾರಾ ಅವರು? ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.