ನಾಮಿನೇಟ್ ಮಾಡೋಕೆ ಪ್ಲ್ಯಾನ್ ಮಾಡಿದ ಬಿಗ್ ಬಾಸ್

Public TV
2 Min Read
Bigg Boss 2 1

ಬಿಗ್‌ಬಾಸ್ (Bigg Boss Kannada) ಕನ್ನಡ ಹತ್ತನೇ ಸೀಸನ್‌ ಫೈನಲ್‌ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಇದೆ. ಈ ಹಂತದಲ್ಲಿ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನಾಮಿನೇಷನ್‌ ಚಟುವಟಿಕೆ ನಡೆದಿದೆ. ಅದರ ಝಲಕ್ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು.

Bigg Boss 3 1

ಈ ಚಟುವಟಿಕೆಯಲ್ಲಿ ಕಾರ್ತಿಕ್‌ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ  ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ಪ್ರೇಕ್ಷಕರಲ್ಲಿ ನಿಜಕ್ಕೂ ಇದು ಸಖತ್ ಬೇಸರ ತರಿಸಿದೆ. ವರ್ತೂರು (Varthur) ಮತ್ತು ತನಿಷಾ (Tanisha) ಅವರನ್ನು ಲವ್ ಬರ್ಡ್ಸ್ ಎಂದು ಕರೆಯಲಾಗಿತ್ತು. ಅದೆಷ್ಟೋ ಬಾರಿ ತಮ್ಮ ತೊಡೆಯ ಮೇಲೆ ತನಿಷಾರನ್ನು ಮಲಗಿಸಿಕೊಂಡು ಪ್ರೀತಿ ತೋರಿದ್ದಾರೆ ವರ್ತೂರು. ತನಿಷಾ ಕೂಡ ವರ್ತೂರು ಮೇಲೆ ಅಷ್ಟೇ ಇಷ್ಟ ಪಟ್ಟಿದ್ದಾರೆ. ಆದರೆ, ನಾಮಿನೇಷನ್ ಟಾಸ್ಕ್ ನಲ್ಲಿ ಮಾತ್ರ ಇಬ್ಬರೂ ದುಷ್ಮನ್ ರೀತಿಯಲ್ಲಿ ಕಂಡಿದ್ದಾರೆ.

Bigg Boss 1

ಮತ್ತೊಂದು ಕಡೆ ತನಿಷಾ ಅವರು ತಮ್ಮ ಸರದಿ ಬಂದಾಗ, ವರ್ತೂರು ಸಂತೋಷ್ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ವರ್ತೂರು ಮೇಲಿನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ಈ ಮೂಲಕ ನಾವಿಬ್ಬರೂ ಬದ್ಧ ವೈರಿಗಳು ಎನ್ನುವುದನ್ನು ಮತ್ತೆ ಸಾರಿದ್ದಾರೆ.

 

ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು. ಆದರೆ, ಟಾಸ್ಕ್ ನಲ್ಲಿ ಮಾತ್ರ ಬೆಂಕಿ, ಬಿರುಗಾಳಿ ಎರಡೂ ಕಾಣಿಸಿಕೊಂಡಿವೆ. ಬೆಳ್ಳಂ ಬೆಳಗ್ಗೆ ಬಿಗ್ ಬಾಸ್ ಮನೆ ಬಿಸಿಯಾಗಿದೆ. ಇದರಲ್ಲಿ ಯಾರೆಲ್ಲ ಬೆಂದು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Share This Article