ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

ವಾರದ ಕಥೆಯಲ್ಲಿ ಪೊಸೆಸಿವ್ ಎಂಬ ವಿಚಾರ ಬಂದ ಮೇಲೆ ನಂದಿನಿ ಕೊಂಚ ಬದಲಾದವರಂತೆ ಕಾಣುತ್ತಿದ್ದಾಳೆ. ಜೊತೆಗೆ ಜಶ್ವಂತ್ ನಡವಳಿಕೆಯಲ್ಲಿ ಮನಸ್ಸಿಗೆ ಬೇಸರವಾಗಿರುವುದು ಕಾಣಿಸುತ್ತಿದೆ. ಇಷ್ಟು ದಿನವರೆಗೂ ಬಿಗ್ ಬಾಸ್ ಮನೆಯಲ್ಲಿ ಏನೇ ನಡೆದರೂ, ಯಾರೂ ಏನೇ ಹೇಳಿದರೂ ನಂದಿನಿ ಮಾತ್ರ ಜಶ್ವಂತ್ ನನ್ನು ಬಿಟ್ಟಿರುತ್ತಿರಲಿಲ್ಲ. ಮನಸ್ಸಿಗೆ ಬೇಸರ ಆದಾಗ ಅದನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಿದ್ದಳು. ಆಮೇಲೆ ಅವಳೇ ಜಶ್ವಂತ್ ಬಳಿ ಕ್ಷಮೆ ಕೇಳಿ ಆ ರಿಲೇಷನ್ ಶಿಪ್ ಅನ್ನು ಸರಿ ಮಾಡಿಕೊಳ್ಳುತ್ತಿದ್ದಳು. ಆದರೆ ಇಂದು ನಡೆದ ಬೆಳವಣಿಗೆಯಲ್ಲಿ ನಂದಿನಿ, ಜಶ್ವಂತ್ ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಗೊತ್ತಾಗುತ್ತಿದೆ.

ನಂದಿನಿ ಬೆಳಗ್ಗೆ ಎದ್ದಾಗ ಬೆಡ್ ನಲ್ಲಿಯೇ ಮಲಗಿ, ಬಿಗ್ ಬಾಸ್ ಗೆ ಹೇಳುತ್ತಿದ್ದಳು. ಯಾರೂ ಕೂಡ ಹೆಚ್ಚು ಪೊಸೆಸಿವ್ ಆಗಬೇಡಿ. ಅದು ಸಂಬಂಧವನ್ನು ಹಾಳು ಮಾಡುತ್ತೆ. ನನ್ನ ಥರ ಕಷ್ಟಪಟ್ಟಾದರೂ ಅದನ್ನು ಕಡಿಮೆ ಮಾಡಿಕೊಳ್ಳಿ ಎಂದಿದ್ದಾಳೆ. ಎದುರಿಗಿದ್ದ ಜಶ್ವಂತ್ ಸುಮ್ಮನೆ ನೋಡುತ್ತಿದ್ದ. ಅಲ್ಲೆ ಇದ್ದ ಸೋನು ಯಾಕೆ ಅದಕ್ಕೆ ಪೊಸೆಸಿವ್ ಅನ್ನೋದು. ಅದನ್ನು ಹೆಚ್ಚು ಪ್ರೀತಿ ಅನ್ನಬೇಕು ಅಲ್ಲವಾ ಎಂದಾಗ, ಹೌದು ಅದನ್ನೇ ಪೊಸೆಸಿವ್ ಅನ್ನೋದು ಅದನ್ನೇ ಈಗ ಕಡಿಮೆ ಮಾಡಿಕೊಳ್ಳಬೇಕು. ಅಂದ್ರೆ ಅವರ ಲೈಫ್ ಅವರಿಗೆ ಎಂಬಂತೆ ಬಿಟ್ಟು ಬಿಡಬೇಕು ಅಂತ ಹೇಳಿ ಜಶ್ವಂತ್ ಗೆ ಒಂದು ಪ್ಲೈನ್ ಕಿಸ್ ಮಾಡಿ ಹೊರಟಳು. ಆ ಬಳಿಕ ನಡೆದಿದ್ದೆಲ್ಲ ಅಂತರ ಕಾಯ್ದುಕೊಳ್ಳುವುದೇ.

ನಾಮಿನೇಷನ್ ಪ್ರಕ್ರಿಯೆ ಆರಂಭವಾದಾಗಲೂ ಜಶ್ವಂತ್ ನಿಂದ ಕೊಂಚ ದೂರವೇ ಕುಳಿತಿದ್ದಳು ನಂದಿನಿ. ಆಮೇಲೆ ನಾಮಿನೇಷನ್ ಆದಾಗಲೂ ಹೆಚ್ಚು ಟೆನ್ಶನ್ ಮಾಡಿಕೊಂಡವಳಂತೆ ಕಾಣಲಿಲ್ಲ. ಸಡನ್ ಆಗಿ ದೂರ ಸರಿಯಬಾರದು ಎಂಬ ಕಾರಣಕ್ಕೆ ಆಗಾಗ ಕೇಳಿದ್ದಕ್ಕೆ ಉತ್ತರ ನೀಡುತ್ತಿದ್ದಳು. ಬಳಿಕ ರೂಪೇಶ್, ನಂದಿನಿ, ಸಾನ್ಯಾ ಎಲ್ಲಾ ಮಾತನಾಡುತ್ತ ನಿಂತಿದ್ದರು. ಅಲ್ಲಿಗೆ ಜಶ್ವಂತ್ ಬಂದ ತಕ್ಷಣ, ನಂದಿನಿ ಕೊಂಚ ಹಿಂದೆ ಸರಿಯಲು ಹೋಗಿ, ಬಿದ್ದೇ ಬಿಟ್ಟಳು. ಆಗ ಎತ್ತುವುದಕ್ಕೂ ಸಹಾಯ ಮಾಡಲಿಲ್ಲ. ಜೊತೆಗೆ ನಂದಿನಿ ಕೂಡ ಅವನ ಸಹಾಯವನ್ನು ನಿರೀಕ್ಷೆ ಮಾಡಿರಲಿಲ್ಲ. ಏನಾಯಿತು, ಹೇಗಾಯಿತು ಎಂಬ ವಿವರಣೆಯನ್ನು ಕೇಳುತ್ತಿದ್ದಕ್ಕೆ ನಂದು ಹೊರಗೆ ನಡೆದಳು. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

ಬಿದ್ದ ಫೋರ್ಸ್ ಗೆ ಕಾಲಿನ ಭಾಗದಲ್ಲಿ ಸ್ವಲ್ಪ ಊದುಕೊಂಡಿತ್ತು. ಅಡುಗೆ ಮನೆಯಲ್ಲಿ ಐಸ್ ಅನ್ನು ಬಟ್ಟೆಗೆ ಅದ್ದಿ ಇಡುತ್ತಿದ್ದಳು ಎನಿಸುತ್ತೆ. ಅಲ್ಲಿಗೆ ಬಂದ ಜಶ್ವಂತ್, ಬಟ್ಟೆ ಕಟ್ಟಿದರೆ ಸರಿಯಾಗುತ್ತೆ. ಬಾ ಕಟ್ಟುತ್ತೀನಿ ಎಂದಾಗಲೂ ನಂದಿನಿ ಬೇಡ ಎಂದಿದ್ದಾಳೆ. ಜಶು ಎನ್ನುತ್ತಿದ್ದ ನಂದು, ಬೇಡ ಹೋಗಪ್ಪ ಎನ್ನುವ ಹಂತಕ್ಕೆ ಬಂದಿದ್ದಾಳೆ ಎಂದರೆ ಜಶ್ವಂತ್ ನಡವಳಿಕೆ ನಂದಿನಿಯ ಮನಸ್ಸಿನ ಮೇಲೆ ಪರಿಣಾಮ ಬೀರಿದೆಯೋ ಅಥವಾ ಸುದೀಪ್ ಕೇಳಿದ ಪೊಸೆಸಿವ್ ಪ್ರಶ್ನೆ ಪರಿಣಾಮ ಬೀರಿದೆಯೋ ತಿಳಿಯುತ್ತಿಲ್ಲ. ಆದರೆ ನಂದಿನಿ ಅಂತು ಬದಲಾಗಿದ್ದಾಳೆ.

ಇನ್ನು ಮನೆಗೆ ಬಂದ ಇಷ್ಟು ದಿನದಲ್ಲಿ ಜಶ್ವಂತ್ ನನ್ನು ಬಿಟ್ಟು ದೂರ ಕೂತಿದ್ದನ್ನು ನೋಡಿಯೇ ಇಲ್ಲ. ನಂದು, ಜಶು ಒಟ್ಟೊಟ್ಟಿಗೆ ಕೂರುತ್ತಾ ಇದ್ದರು. ಆದರೆ ನೇರ ನಾಮಿನೇಷನ್ ಮಾಡುವ ಸರದಿ ಬಂದಾ ಜಶ್ವಂತ್ ನನ್ನು ಬಿಟ್ಟು ನಂದಿನಿ, ಸೋಮಣ್ಣ ಹಾಗೂ ರಾಕೇಶ್ ಮಧ್ಯೆ ಕುಳಿತಿದ್ದಳು. ಇದೆಲ್ಲ ಮುಗಿದ ಮೇಲೆ, ಸೋಮಣ್ಣ, ಸೋನು, ರಾಕೇಶ್ ಕೂತಿದ ಸೋಫಾದ ಬಳಿ ಹೋಗಿ ನಂದಿನಿ ಒಂದು ಸ್ವಲ್ಪ ಸಮಯ ಕಳೆದು ಬಂದಿದ್ದಾಳೆ. ಮೇ ಬಿ ಜಶು ಕಣ್ಣ ಮುಂದೆ ಇದ್ದರೆ ಮತ್ತೆ ಪೊಸೆಸಿವ್ ರೀತಿಯೇ ಆಡುತ್ತೀನಿ ಎಂಬ ಕಾರಣಕ್ಕೋ ಏನೋ ದೂರ ದೂರ ಸರಿಯುತ್ತಿದ್ದಾಳೆ.

Live Tv