ಬಿಗ್ ಬಾಸ್ ಓಟಿಟಿ, ಅಭಿಮಾನಿಗಳ ವಲಯದಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡಿತ್ತು. ಓಟಿಟಿಯ 42 ದಿನಗಳ ಆಟಕ್ಕೆ ಕೊನೆಗೂ ಇದೀಗ ತೆರೆಬಿದ್ದಿದೆ. ಓಟಿಟಿ ಟಾಪರ್ ಆಗಿ ರೂಪೇಶ್ ಶೆಟ್ಟಿ(Roopesh Shetty) ಹೊರಹೊಮ್ಮಿದ್ದಾರೆ. ಅದಷ್ಟೇ ಅಲ್ಲ, ಟಿವಿ ಬಿಗ್ ಬಾಸ್‌ಗೆ ಎಂಟ್ರಿ ಪಡೆದಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗೆ ಓಟಿಟಿಯ ಇನ್ನೂ ಮೂರು ಸ್ಪರ್ಧಿಗಳು ಟಿವಿ ಬಿಗ್ ಬಾಸ್‌ಗೆ(Bigg Boss9) ಆಯ್ಕೆ ಆಗಿದ್ದಾರೆ.
ಓಟಿಟಿಯ ಬಿಗ್ ಬಾಸ್ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸೀಸನ್ ಟಾಪರ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಆ ಎಲ್ಲಾ ಕೂತೂಹಲಕ್ಕೆ ಈಗ ತೆರೆ ಬಿದ್ದಿದೆ. ತುಳುನಾಡಿನ ಬಹುಮುಖ ಪ್ರತಿಭೆ ರೂಪೇಶ್ ದೊಡ್ಮನೆಯ ಓಟಿಟಿ ಸೀಸನ್ 1ರ ಟಾಪರ್ ಆಗಿದ್ದಾರೆ. ಜತೆಗೆ ಟಿವಿ ಬಿಗ್ ಬಾಸ್‌ಗೆ ಸ್ಪರ್ಧಿಸಲು ರೂಪೇಶ್ ಶೆಟ್ಟಿ ಭರ್ಜರಿ ಅವಕಾಶ ಸಿಕ್ಕಿದೆ. ಅವರ ಜೊತೆ ಆರ್ಯವರ್ಧನ್ ಗುರೂಜಿ,(Aryavardhan) ಸಾನ್ಯ ಅಯ್ಯರ್ (Sanya), ರಾಕೇಶ್ ಅಡಿಗ(Rakesh Adiga) ಬಿಗ್ ಬಾಸ್ ಸೀಸನ್ 9ರಲ್ಲಿ ರಂಜಿಸಲಿದ್ದಾರೆ. ಇದನ್ನೂ ಓದಿ:Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ
ಈ ಹಿಂದಿನ 8 ಸೀಸನ್‌ಗಳ ಕೆಲವು ಪ್ರವೀಣರ ಜೊತೆ ಹೊಸಬರು ಕೂಡ ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸೀಸನ್ ಬಿಗ್ ಬಾಸ್ ಈ ಹಿಂದಿನ ಸೀಸನ್‌ಗಿಂತ ವಿಭಿನ್ನವಾಗಿರಲಿದೆ. ಸೆ.25ರಿಂದ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ.