ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್ ಕಾರ್ಯಕ್ರಮ. ಸಿನಿಮಾಗಿಂತಲೂ ಬಿಗ್ ಬಾಸ್ ಶೋ (Bigg Boss Hindi Ott 3) ನೋಡೋದಕ್ಕೆ ಎಂದೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಇದೀಗ ಬಿಗ್ ಬಾಸ್ ಹಿಂದಿ ಒಟಿಟಿ 3 ಪ್ರಸಾರಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ.
ಡಿಜಿಟಲ್ ವರ್ಷನ್ ಬಿಗ್ ಬಾಸ್ ಒಟಿಟಿಗೆ ಸಕಲ ತಯಾರಿ ನಡೆಯುತ್ತಿದೆ. ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ (Salman Khan) ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಯುಗಾದಿಯಂದು ಸಿಹಿಸುದ್ದಿ- ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ

ಜಾಸ್ಮಿನ್ ಕೌರ್ (Jasmeen Kaur) ಸೇರಿದಂತೆ ಅನೇಕ ರೀಲ್ಸ್ ಸ್ಟಾರ್‌ಗಳ ಹೆಸರು ಸದ್ದು ಮಾಡುತ್ತಿದೆ. ಆದರೆ ಬಿಗ್ ಬಾಸ್ ಒಟಿಟಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಸ್ಮಿನ್ ಒಟಿಟಿಗೆ ಶೋ ಬರುತ್ತಾರಾ? ಕಾದುನೋಡಬೇಕಿದೆ.


