ಬಿಗ್ ಬಾಸ್ (Bigg boss ott) ಮನೆಯಲ್ಲಿ ಸೋಮಣ್ಣ (Somanna) ನೋಡಲು ಅಷ್ಟೇ ಖಡಕ್ ಆದರೆ ಮನಸ್ಸಲ್ಲಿ ಸಾಕಷ್ಟು ನೋವಿದೆ. ಅವರಿಗೆ ಅವರ ಸಂಗಾತಿ ಆಗಾಗ ತುಂಬಾ ನೆನಪಾಗುತ್ತಾರೆ. ಮೊದಲಿಗೇನೆ ಅವರ ಬಗ್ಗೆ ಹೇಳಿಕೊಂಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಅವರ ನೆನಪುಗಳು ಆಗಾಗ ಸೋಮಣ್ಣ ಅವರಿಗೆ ಕಾಡುತ್ತಿವೆ ಎಂಬುದು ಮಾತ್ರ ಸತ್ಯ. ಇವತ್ತು ಮತ್ತೆ ಅವರ ಮನದ ದುಃಖದ ಕಟ್ಟೆ ಒಡೆದಿತ್ತು. ನೋಡುಗರಿಗೂ ಒಂದು ಕ್ಷಣ ಮತ್ತೆ ಅವರ ಸಾಂಸಾರಿಕ ಜೀವನ ಸರಿಯಾಗಬಾರದಾ ಎಂಬ ಭಾವನೆ ಬಂದಿದೆ.
Advertisement
ದೊಡ್ಮನೆಯಲ್ಲಿ 50 ಸಾವಿರಕ್ಕೆ ಒಂದು ಗೇಮ್ ನೀಡಿತ್ತು ಬಿಗ್ ಬಾಸ್. ದೊಡ್ಡ ಗಾತ್ರದ ಬಾಲುಗಳಿಗೆ ಟ್ಯಾಗ್ ಕಟ್ಟಿರುತ್ತಾರೆ. ಅದನ್ನು ಎಳೆದು ಬಾಲನ್ನು ತಬ್ಬಿ ನಿಲ್ಲಬೇಕು. ಬಾಲು ಹೆಂಗಿತ್ತು ಎಂದರೆ ಮನೆಯ ಸದಸ್ಯರಿಗಿಂದ ಡಬ್ಬಲ್ ಗಾತ್ರದಲ್ಲಿ ಇತ್ತು. ಬ್ಯಾಲೆನ್ಸ್ ಮಾಡುವುದಾದರೂ ಹೇಗೆ. ಅದು ಅರ್ಧ ಗಂಟೆ ಇಟ್ಟುಕೊಂಡು ನಿಂತರೆ ಎರಡು ಸಾವಿರ ರೂಪಾಯಿ. ಹೆಣ್ಣು ಮಕ್ಕಳೆಲ್ಲಾ ಕೆಲವೇ ನಿಮಿಷಕ್ಕೆ ಬಾಲನ್ನ ಬಿಟ್ಟು ಬಿಟ್ಟರು. ಗಂಡು ಮಕ್ಕಳಲ್ಲಿ ರಾಕೇಶ್, ಜಶ್ವಂತ್, ರೂಪೇಶ್ ಹಾಗೋ ಹೀಗೋ ಎರಡು ಗಂಟೆಗಳ ಕಾಲ ಅದನ್ನು ಸರಿದೂಗಿಸಿಕೊಂಡು ಬಂದಿದ್ದರು. ಸೋಮಣ್ಣ ಮತ್ತು ಗುರೂಜಿಗೆ ಅದೆಲ್ಲಿತ್ತೋ ಶಕ್ತಿ. ಮೂರು ಗಂಟೆಗಳ ಕಾಲ ನಿಂತಿದ್ದರು. ಇದನ್ನೂ ಓದಿ:ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ
Advertisement
Advertisement
ಇನ್ನು ಈ ಆಟದಲ್ಲಿ ಮನೆ ಮಂದಿಯೆಲ್ಲರ ಶ್ರಮಕ್ಕೆ ಸಿಕ್ಕಿದ್ದು 44 ಸಾವಿರ. ಆದ್ರೆ ಸೋಮಣ್ಣ ಹಾಗೂ ಗುರೂಜಿಯ ಶ್ರಮಕ್ಕೆ ಬೋನಸ್ ಆಗಿ ಬಿಗ್ ಬಾಸ್ 6 ಸಾವಿರ ಕೊಟ್ಟು ರೌಂಡ್ ಫಿಗರ್ 50 ಸಾವಿರ ನೀಡಿದೆ. 5 ಲಕ್ಷ ಹಣದ ಗೇಮ್‌ನಲ್ಲಿ ಇದೇ ಫಸ್ಟ್ 50 ಸಾವಿರ ಒಂದು ಗೇಮ್‌ನಲ್ಲಿ ಸದಸ್ಯರು ಪಡೆದಿರುವುದು ಮನೆಯವರ ಖುಷಿಗೆ ಪಾತ್ರವಾಗಿದೆ. ಸಾನ್ಯಾ ಅಯ್ಯರ್, ಕೂಡ ಸೋಮಣ್ಣ ವಿಚಾರದಲ್ಲಿ ಸಖತ್ ಎಮೋಷನಲ್ ಆಗಿದ್ದಾಳೆ. ದಿಢೀರನೆ ಬಂದು ಕಾಲಿಗೆ ಬಿದ್ದು ಕಣ್ಣೀರು ಹಾಕಿದ್ದಾಳೆ. ಈ ಸಮಯದಲ್ಲಿ ಸೋಮಣ್ಣ ಅವರಿಗೆ ಏನಾಯ್ತೋ ಏನೋ ಅಳುವುದಕ್ಕೆ ಸ್ಟಾರ್ಟ್ ಮಾಡಿದ್ದಾರೆ. ತುಂಬಾ ಸೋತು ಬಿಟ್ಟಿದ್ದೀನಿ ಸಾನ್ಯಾ (Sanya iyer) ಅವರೇ. ಎಷ್ಟು ಕಷ್ಟಪಡಲಿ, ಎಷ್ಟೇ ಹಾರ್ಡ್ ವರ್ಕ್ ಮಾಡಲಿ, ಫೇಮ್ ಇದೆ, ನೇಮ್ ಇದೆ. ಫ್ಯಾಮಿಲಿ ಲೈಫ್ ನಲ್ಲಿ ಸೋತೆ. ಮನೆಯಲ್ಲಿ ಎಲ್ಲಾ ಇದ್ರು ಎಲ್ಲಾ ಕಳೆದುಕೊಂಡಿದ್ದೀನಿ. ಈಗ ಅನಾಥನ ಥರ ಬದುಕುತ್ತಾ ಇದ್ದೀನಿ ಎಂದು ಎಮೋಷನಲ್ ಆಗಿದ್ದಾರೆ.
Advertisement
ಅಲ್ಲಿಗೆ ಬಂದ ರಾಕೇಶ್ (Rakesh adiga) ಇದು ಖುಷಿಗೆ ತಾನೇ ಕಣ್ಣೀರು ಎಂದಾಗ ಹೌದು ಎಂದಿದ್ದಾರೆ. ಬಳಿಕ ಸೋಮಣ್ಣ ಕಣ್ಣೀರು ಹಾಕಿದ್ದಕ್ಕೆ ಸಮಾಧಾನ ಮಾಡಿ ನಾವೆಲ್ಲಾ ಇಲ್ವಾ ಬ್ರೋ ಎಂದಿದ್ದಾನೆ. ಸೋಮಣ್ಣ ದುಃಖದ ಮಾತು ಮುಂದುವರೆಸಿ, ಗಿವಪ್ ಆಗಬೇಕು, ಇಲ್ಲ ಹೊಸ ಬದುಕು ಕಟ್ಟಬೇಕು ಅಂತ ಇಲ್ಲಿಗೆ ಬಂದಿದ್ದು. ಮನೆಗೆ ಮಗ ಅಲ್ಲ ಎಂಬಂತೆ ನಾನು ಬದುಕಿದ್ದು ಎಂದು ಸೋಮಣ್ಣ ಭಾವುಕರಾಗಿದ್ದಾರೆ.