CinemaLatestMain PostTV Shows

ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

ವಾರದ ಕ್ಯಾಪ್ಟನ್ ಆಗಬೇಕು ಎಂದು ಸ್ಪರ್ಧೆಗೆ ಇಳಿದಿದ್ದ ಸೋನು ಅಕಸ್ಮಾತ್ ಆಗಿ ನಿರೀಕ್ಷೆಯನ್ನೇ ಮಾಡದೆ ಕಳಪೆ ಬೋರ್ಡ್ ಹೊತ್ತು ಜೈಲು ಪಾಲಾಗಿದ್ದಾಳೆ. ಯಾರು ಏನೇ ಹೇಳಲಿ ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ತಾನು ಆಡುತ್ತಿದ್ದ ಮಾತಿಗೆ ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆಗಲೂ ತನಗೆ ಏನು ಅನ್ನಿಸುತ್ತೆ ಅದನ್ನ ಮಾತನಾಡಿ, ಅಲ್ಲಿಗೆ ಅದನ್ನೆಲ್ಲ ಮರೆತು ಮತ್ತೆ ನೆಕ್ಸ್ಟ್ ಮೂಮೆಂಟೇ ಅವಳದ್ದೆ ಲೋಕದಲ್ಲಿ ಆಕ್ಟೀವ್ ಆಗಿದ್ದಂತಹ ಹುಡುಗಿ ಎಂದರೆ ಸೋನು. ಆದರೆ ಈ ಬಾರಿ ಸೋನು ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಯಾಕೆಂದರೆ ಕಳಪೆ ಬೋರ್ಡ್ ಹೊತ್ತ ಕೂಡಲೇ ತುಂಬಾ ವೀಕ್ ಆದವಳಂತೆ ಭಾಸವಾಗುತ್ತಿದ್ದಾಳೆ.

ತನಗೆ ಯಾರಾದರೂ ಕೆಲಸ ಮಾಡು ಎಂದಾಗ, ನಾನೇನು ಕೆಲಸ ಮಾಡಲು ಬಂದಿದ್ದೀನಾ ಅಂತ ಪ್ರತಿ ಬಾರಿಯೂ ಪ್ರಶ್ನಿಸುತ್ತಿದ್ದಳು. ಇದಕ್ಕೆ ಮನೆಮಂದಿಯೆಲ್ಲಾ ಸೇರಿ ಬೆಸ್ಟ್ ಅಂಡ್ ವರ್ಸ್ಟ್ ಪರ್ಫಾಮರ್ ಅನ್ನು ಆಯ್ಕೆ ಮಾಡಬೇಕಾದ ಸಂದರ್ಭ ತಕ್ಕ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಒಂದಷ್ಟು ಮಂದಿ ಜಯಶ್ರೀಗೆ ಬೆಸ್ಟ್ ಎಂದು ಹೇಳಿದರು, ಇನ್ನೊಂದಷ್ಟು ಮಂದಿ ಜಯಶ್ರೀಯನ್ನೇ ವರ್ಸ್ಟ್ ಎಂದರು. ಆದರೂ ಜಯಶ್ರೀ ಜೈಲಿನಿಂದ ಬಂದ ಮೇಲಿಂದ ಹೇಗಾದರೂ ಗೆಲ್ಲಲೇಬೇಕು ಎಂಬ ಹಠ ಹೊತ್ತು ಇವತ್ತು ಬೆಸ್ಟ್ ಎಂಬ ಅವಾರ್ಡ್ ತೆಗೆದುಕೊಂಡಿದ್ದಾಳೆ. ಅದರಂತೆ ಸೋನುಳನ್ನು ಹಲವು ಜನ ಕಳಪೆಗೆ ಆಯ್ಕೆ ಮಾಡಿದರು. ಕೊನೆಗೆ ಸೋನು ಜೈಲು ಸೇರಬೇಕಾಗಿ ಬಂತು.

ಸೋನುಗೆ ಯಾರೇ ಕಳಪೆ ಅಂತ ಹೇಳಿದ್ದರೂ, ಜೈಲಿಗೆ ಹಾಕಿದ್ದರೂ ಇಷ್ಟು ನೋವು ಆಗುತ್ತಿರಲಿಲ್ಲ ಎಂದು ಕಾಣುತ್ತದೆ. ಆದರೆ ರಾಕೇಶ್ ಅವಳ ಹೆಸರನ್ನು ತೆಗೆದುಕೊಂಡಾಗಲೇ ಆಕೆಯ ಮನಸ್ಸು ಭಾರವಾದಂತೆ ಕಾಣುತ್ತಿತ್ತು. ಜೈಲಿಗೆ ಹೋಗುವ ಸಂದರ್ಭ ದಯವಿಟ್ಟು ಎಲ್ಲರೂ ಇಲ್ಲಿಂದ ಹೋಗಿ ಬಿಡಿ ಎಂದು ರಿಕ್ವೆಸ್ಟ್ ಮಾಡಿದ್ದಳು. ಸ್ವಲ್ಪ ಸಮಯದ ಬಳಿಕ ರಾಕೇಶ್ ಬಂದು ಸಮಾಧಾನ ಮಾಡಲು ಯತ್ನಿಸಿದ. ಆಯ್ತು ಬೈಯ್ಯಬೇಕು ಎನಿಸಿದರೆ ನನ್ನನ್ನು ಬೈದು ಬಿಡು ಎಂದ. ಆದರೆ ಸೋನುಗೆ ರಾಕೇಶ್ ಮುಖವನ್ನು ನೋಡುವುದಕ್ಕೆ ಇಷ್ಟವಿರಲಿಲ್ಲ. ಸುಮ್ಮನೆ ಹೋಗಿಬಿಡು. ನಾನು ಕಿರುಚಿಕೊಳ್ಳುವಂತೆ ಮಾಡಬೇಡ ಎಂದಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

ರಾಕೇಶ್ ಅಲ್ಲಿಂದ ವಾಪಾಸ್ ಆದವ ಗುರೂಜಿ ಬಳಿ ಕುಳಿತು ಆ ಬಗ್ಗೆ ಬೇಸರ ಹೊರಹಾಕಿದ. ತುಂಬಾ ಒಳ್ಳೆ ಫ್ರೆಂಡು ಅಂದುಕೊಂಡಿದ್ದವನೇ ಕಳಪೆ ಕೊಟ್ಟರೆ ಯಾರಿಗೆ ತಾನೇ ಹರ್ಟ್ ಆಗಲ್ಲ ಹೇಳಿ ಎಂದಿದ್ದ. ಎಲ್ಲವೂ ಒಂದು ತಹಬದಿಗೆ ಬಂದ ಮೇಲೆ ಚೈತ್ರಾ ಸಮಾಧಾನ ಮಾಡಲು ಹೋದಳು. ಅಷ್ಟರಲ್ಲಾಗಲೇ ಸೋನು ಕಣ್ಣಲ್ಲಿ ಕಣ್ಣೀರ ಕೋಡಿ ತುಂಬಿತ್ತು. ಚೈತ್ರಾ ಸಮಾಧಾನದ ಮಾತುಗಳನ್ನು ಆಡುತ್ತಿದ್ದಂತೆ ಜೋರು ಸುರಿಯಿತು. ಅಲ್ಲ ಮನೆ ಕೆಲಸ ಮಾಡಲಿಲ್ಲ ಅಂತ ಕಳಪೆ ಕೊಡುತ್ತಾರಲ್ಲ. ಅದು ನಂಬಿದ್ದವರೆ ಇಂತಹ ದ್ರೋಹ ಮಾಡುತ್ತಾರಲ್ಲ. ನಾವೇನು ಮನೆ ಕೆಲಸಕ್ಕೆ ಬಂದಿದ್ದೀವಾ? ಯಾವನ್ ಹೇಳಿದ್ದು ಹಾಗೇ. ಇವತ್ತು ಯಾರೆಲ್ಲಾ ಕಳಪೆ ಎಂದರೋ, ಯಾರೂ ಸರಿ ಇಲ್ಲ. ಎಲ್ಲಾ ನಕಲಿ ಜನರೇ ಎಂದಿದ್ದಾಳೆ.

ಈಗಾಗಲೇ ಸೋನುಗೆ ರಾಕೇಶ್ ಮೇಲೆ ಕೆಂಡದಷ್ಟು ಕೋಪ ಬಂದಿದೆ. ಮತ್ತೆ ಕಳಪೆ ಎಂದಿದ್ದಾರೆ. ನೆಕ್ಸ್ಟ್ ಪ್ರೂವ್ ಮಾಡೋಣಾ ಎಂಬ ಹಠ ಅವಳಲ್ಲಿ ಹುಟ್ಟಿಕೊಂಡಂತೆ ಇಲ್ಲ. ಕಳಪೆ ಎಂದುಬಿಟ್ಟರಲ್ಲ ಎಂಬ ನೋವೇ ಎದ್ದು ಕಾಣುತ್ತಿದೆ. ಇಷ್ಟು ದಿನ ರಾಕೇಶ್‌ಗೆ ಹರ್ಟ್ ಆಗುವಂತೆ ಮಾತನಾಡಿದರು. ರಾಕಿ ಅದ್ಯಾವುದನ್ನು ಮನಸ್ಸಲ್ಲಿ ಇಟ್ಟುಕೊಂಡಿರಲಿಲ್ಲ. ಮತ್ತೆ ಮತ್ತೆ ಸರಿ ಮಾಡಿಕೊಂಡು ಮಾತನಾಡುತ್ತಿದ್ದ. ಆದರೆ ಸೋನು ಆ ರೀತಿ ಅಲ್ಲ. ಇದನ್ನೇ ಸ್ಟ್ರಾಂಗ್ ಆಗಿ ಹಿಡಿದುಕೊಳ್ಳುತ್ತಾಳೆ ಅನ್ನಿಸುತ್ತೆ. ನನ್ನನ್ನೇ ಕಳಪೆ ಎಂದವನು ನನಗೆ ಯಾವ ಸೀಮೆ ಫ್ರೆಂಡ್ ಅಂತ ಈಗಾಗಲೇ ಹೇಳಿದ್ದಾಳೆ. ಹೀಗಾಗಿ ಜೈಲಿನಿಂದ ಬಂದ ಮೇಲೆ ರಾಕಿನ ಕ್ಷಮಿಸೋದು ಸುಳ್ಳು ಎನಿಸುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

Live Tv

Leave a Reply

Your email address will not be published.

Back to top button