CinemaLatestMain PostSandalwoodTV Shows

ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

ನುಷ್ಯನಿಗೆ ತಾಳ್ಮೆ ಇರುವುದು ಸಹಜ. ಆದರೆ ತುಂಬಾ ಪ್ರೆಶರ್ ಆದಾಗ ಆ ತಾಳ್ಮೆ ಎಂಬ ಕಟ್ಟೆ ಒಡೆಯುತ್ತದೆ. ಅದು ಒಡೆದಾಗ ಎದುರಿಗಿದ್ದವರು ಯಾರು ಬೇಕಾದರೂ ಅದರ ಅಪಾಯದಲ್ಲಿ ಸಿಲುಕಬಹುದು. ಇಂದು ಬಿಗ್ ಬಾಸ್ ಮನೆಯಲ್ಲಿ ಕಂಡದ್ದು ಅದೇ. ಆರ್ಯವರ್ಧನ್ ಗುರೂಜಿಗೆ ಕೋಪ ಬಂದರೆ ಏನಾಗಬಹುದು ಎಂಬ ಸುಳಿವು ಸಿಕ್ಕಿದೆ.

ಆರ್ಯವರ್ಧನ್ ಗುರೂಜಿ ಎಂದಾಕ್ಷಣ ಬಿಗ್ ಬಾಸ್ ಮನೆಯ ಯಾವ ಸದಸ್ಯರನ್ನು ಕೇಳಿದರು ಎಲ್ಲರೂ ಹೇಳುವುದು ಅವರು ಒಂಥರ ಮಗುವಿನಂಥವರು. ಅವರಿಗೆ ಮಗುವಿನಂಥ ಮನಸ್ಸಿದೆ ಎಂದು. ಅದರ ಜೊತೆಗೆ ಇನ್ನು ಒಂದು ಮಾತು ಕೂಡ ಕೇಳಿ ಬಂದಿದೆ. ಗುರೂಜಿಗೂ ಒಮ್ಮೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆದರೆ ನೋವಾದರೂ ಆ ನೋವನ್ನು ತೋರಿಸಿಕೊಳ್ಳಲ್ಲ. ಬದಲಿಗೆ ಅವರೇ ಅನುಭವಿಸಿ, ಖುಷಿಯನ್ನು ಹಂಚುತ್ತಾರೆ ಎನ್ನುತ್ತಾರೆ.

ಅದಷ್ಟೇ ಅಲ್ಲದೆ ಕೆಲವೊಮ್ಮೆ ಏನೇ ಪ್ರಶ್ನೆ ಕೇಳಿದರೂ ಅದು ಗುರೂಜಿಗೆ ಅರ್ಥವಾಗಿರುವುದಿಲ್ಲ ಎಂದೇ ಕಾಣುತ್ತದೆ. ಅಥವಾ ಅದಕ್ಕೆ ಸರಿಯಾದ ಉತ್ತರ ಕೊಡುವುದಕ್ಕೂ ಬರಲ್ಲ. ಅದು ಈಗಾಗಲೇ ಕಿಚ್ಚ ಸುದೀಪ್ ವೇದಿಕೆಯಲ್ಲೂ ಪ್ರೂವ್ ಆಗಿದೆ. ಆದರೆ ಅದನ್ನು ಕಿಚ್ಚ ಸುದೀಪ್ ತಮಾಷೆಯಂತೆಯೇ ಬಿಂಬಿಸಿ ಸುಮ್ಮನೆ ಆಗಿದ್ದಾರೆ. ಗುರೂಜಿಯ ಮುಖಭಾವವನ್ನು ಆ ಸಮಯದಲ್ಲಿ ನೋಡಿದರೆ ಅವರು ಅವರದ್ದೇ ಯೋಚನಾ ಲೋಕದಲ್ಲಿ ಇರುತ್ತಾರೆ ಎಂಬ ಭಾವನೆ ಬರುತ್ತದೆ. ಇದೆಲ್ಲಾ ಗುರೂಜಿಯ ಮೇಲೆ ಪ್ರಭಾವ ಬೀರಿದೆಯೇನೋ? ಮನೆಯಲ್ಲಿ ಯಾವಾಗಲೂ ಸೀರಿಯಸ್‌ನೆಸ್ ಇಲ್ಲದಂತೆ ಆಡುವುದು ಗುರೂಜಿಗೆ ಕಿರಿಕಿರಿಯಾಗಿತ್ತು ಎನಿಸುತ್ತದೆ. ಅದೆಲ್ಲವನ್ನು ಇವತ್ತು ಒಂದೇ ಸಲ ಹೊರಹಾಕಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

ಇಂದಿಗೆ ಸೋಮಣ್ಣ ಕ್ಯಾಪ್ಟೆನ್ಸಿ ಮುಗಿದಿದೆ. ರೂಪೇಶ್ ಕೊನೆಯ ಕ್ಯಾಪ್ಟನ್ ಆಗಿದ್ದಾರೆ. ಈ ಮಧ್ಯೆ ಕ್ಯಾಪ್ಟನ್ ಬಗ್ಗೆ ಏನು ಅನ್ನಿಸಿತು, ಎಷ್ಟು ಮಾರ್ಕ್ಸ್ ಕೊಡುತ್ತೀರಾ ಎಂಬುದು ಮನೆಯ ಸದಸ್ಯರ ಟಾಸ್ಕ್ ಆಗಿರುತ್ತೆ. ಎಲ್ಲರೂ ಸೋಮಣ್ಣ ಅವರ ಕ್ಯಾಪ್ಟೆನ್ಸಿಗೆ ಸಮಾಧಾನಗೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹೇಳುವ ಸರದಿ ಆರ್ಯವರ್ಧನ್ ಅವರಿಗೆ ಬಂತು. ಆಗ, ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಹೇಳಿಕೊಳ್ಳುತ್ತಾ ಇದ್ದರು. ಬರುವಾಗ ಬಹಳಷ್ಟು ನೋವಲ್ಲಿ ಬಂದಿದ್ರು ಎನಿಸುತ್ತೆ. ಆದರೆ ಯಾರು ಊಹೆ ಮಾಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಅವರಿಗೆ ಗೊತ್ತಿತ್ತು. ಯಾರ್ ಯಾರನ್ನು ಕ್ಯಾಪ್ಟನ್ ಮಾಡಬೇಕು ಅಂತ. ಅವರ ಟೀಂನಲ್ಲಿ ಮಾಡಿದ ಸೆಲೆಕ್ಷನ್, ನಡೆದುಕೊಂಡ ರೀತಿ ಚೆನ್ನಾಗಿದೆ. ಜಯಶ್ರೀ ಅವರು ಹಠ ಹಿಡಿದು ಗೆದ್ದರು. ಆದರೆ ಸೋಮಣ್ಣ ಸ್ವಲ್ಪ ನೊಂದುಕೊಂಡರು ಎಂದರು. ಆಗ ಸೋಫಾ ಮೇಲೆ ಕುಳಿತಿದ್ದ ಜಯಶ್ರೀ ಏನೋ ಮಾತನಾಡಿದಂತೆ ಆಯಿತು.

ಆಗ ಆರ್ಯವರ್ಧನ್ ಕೊಂಚ ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ದಯವಿಟ್ಟು ಕೇಳಿ. ನಿಮ್ಮದೆಲ್ಲಾ ಮುಚ್ಚಿಕೊಂಡು ಕೇಳಲಿಲ್ಲವಾ..? ನಾನು ರಾಶಿ ಭವಿಷ್ಯ ಹೇಳಿದಾಗ ಹರ್ಕೊಳ್ತಾ ಇದ್ರಿ. ಜೀವನ ಕೆಟ್ಟದಾದಾಗ ಇಲ್ಲ ವಿಷ ಕುಡಿತೀರಾ, ಇಲ್ಲ ಹೋಗಿ ಸಾಯ್ತೀರ. ನಿಮ್ಮ ನಾಯಿ ಬುದ್ಧಿ ಕೋತಿ ಬುದ್ಧಿ ಎಲ್ಲಾ ನಿಮ್ಮ ಊರಲ್ಲಿ ಇಟ್ಕೊಳಿ. ಇದು ಬಿಗ್ ಬಾಸ್, ಬಿಗ್ ಬಾಸ್‌ಗೆ ಮೊದಲು ಮರ್ಯಾದೆ ಕೊಡಿ. ನಾಯಿ ಥರ ಎಲ್ಲಾ ಆಡಬೇಡಿ. ಒಳ್ಳೆ ದೆವ್ವದ ಥರ ಆಡುತ್ತೀರಾ. ನನ್ನ ಮಾತುಗಳು ಪರ್ಫೆಕ್ಟ್ ಆಗಿ ಇದ್ದಾವೆ.

ಉದಾಹರಣೆಗಳನ್ನು ಕೊಟ್ಟು ಮಾತನಾಡುತ್ತೇನೆ. ನಾವೂ ದಿವಸ ನೂರು ಜನಕ್ಕೆ ಬೈಯ್ಯುವವರು. ಮೂರು ಜನಕ್ಕೆ ಬೈಯ್ಯುವುದು ದೊಡ್ಡ ಕೆಲಸವೇನಲ್ಲ. ನಾಯಿಗೆ ಉಗಿದವರಂತೆ ಉಗಿಯುತ್ತೀನಿ. ಉಗಿದರೆ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೇ ಹೇಳುತ್ತೇನೆ. ನಾಲ್ಕು ಪದ ಅರ್ಥ ಆಗಬಹುದು. ಆದರೆ ನಾಲ್ಕು ನೂರು ವರ್ಷದ ಮಾತನ್ನು ಬೇಕಾದರೂ ಮಾತನಾಡುತ್ತೇನೆ ಎಂದು ಗರಂ ಆಗಿ ಬಳಿಕ ಮಾತನಾಡಿ, ಬಿಗ್ ಬಾಸ್‌ನಲ್ಲಿ ಎಲ್ಲಾ ಗೇಮ್ ಅನ್ನು ಅಟ್ಯಾಕ್ ಮಾಡುವ ತಾಕತ್ತು ಇರುವುದು ಸೋಮಣ್ಣನಿಗೆ ಮಾತ್ರ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

Live Tv

Leave a Reply

Your email address will not be published.

Back to top button