`ಬಿಗ್ ಬಾಸ್’ ಒಟಿಟಿ (Bigg Boss) ಮೂಲಕ ಕಮಾಲ್ ಮಾಡಿದ್ದ ನಟಿ ಜಯಶ್ರೀ ಕನಸಿನ ಮನೆಯ ಗೃಹಪ್ರವೇಶ (House Warming) ನೆರವೇರಿದೆ. ಮಾರಿಮುತ್ತು (Actress Marimuttu) ಮೊಮ್ಮಗಳು ಜಯಶ್ರೀ ಹೊಸ ಮನೆಗೆ ಕುಟುಂಬ ಸಮೇತ ಪಾದಾರ್ಪಣೆ ಮಾಡಿದ್ದಾರೆ.
ನಟಿ, ಉದ್ಯಮಿಯಾಗಿ ಸೈ ಎನಿಸಿಕೊಂಡಿರುವ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಾರಿ ಮುತ್ತು ಮೊಮ್ಮಗಳು ಸಾಕಷ್ಟು ಸಂಕಷ್ಟಗಳ ನಡುವೆ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ನಾಯಂಡಳ್ಳಿಯಲ್ಲಿ ಮನೆ ಖರೀದಿಸಿದ್ದು, ಇತ್ತೀಚೆಗೆ ನೂತನ ನಿವಾಸದ ಗೃಹಪ್ರವೇಶ ನಡೆದಿದೆ. ಇದನ್ನೂ ಓದಿ: ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ
ಜಯಶ್ರೀ ಮತ್ತು ಭಾವಿಪತಿ ಸ್ಟೀವನ್ ಕನಸಿನ ಮನೆಯ ಸಂಭ್ರಮದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಲೋಕೇಶ್, ಸ್ಪೂರ್ತಿ, ಸೋನು ಗೌಡ, ಉದಯ್ ಸೂರ್ಯ, ಚೈತ್ರಾ ಕೂಡ ಈ ವೇಳೆ ಸಾಕ್ಷಿಯಾಗಿದ್ದಾರೆ.
ಸಾಕಷ್ಟು ಏಳು ಬೀಳಿನ ನಂತರ ಹೊಸ ಹೆಜ್ಜೆ ಇಡ್ತಿರುವ ನಟಿ ಜಯಶ್ರೀಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.