ಬಿಗ್ ಬಾಸ್ (Bigg Boss) ಮನೆಯಲ್ಲಿ ಮುಗ್ಧರು ಯಾರು ಅಂತ ಯಾರಾದರೂ ಕೇಳಿದರೆ ಅದು ಆರ್ಯವರ್ಧನ್ ಗುರೂಜಿ (Aryavardhan Guruji) ಎಂದೇ ಮನೆ ಮಂದಿಯೆಲ್ಲಾ ವೋಟ್ ಹಾಕತ್ತಾ ಇದ್ದರು. ಸುದೀಪ್ (Kichcha Sudeepa) ಕೂಡ ಆರ್ಯವರ್ಧನ್ ಅವರಿಗೆ ಏನು ಅರ್ಥವಾಗುವುದಿಲ್ಲ ಅಂತ ಹೇಳಿದ್ದರು. ವೀಕೆಂಡ್ ವೇದಿಕೆಯಲ್ಲಂತೂ ಗುರೂಜಿ ನಡವಳಿಕೆ ಸಖತ್ ಕಾಮಿಡಿ ಕೊಡುತ್ತಿದೆ. ಆದರೆ ಗುರೂಜಿ ನಿಜವಾಗಿಯೂ ಅಷ್ಟು ಮುಗ್ಧರಾ ಎಂಬುದು ಇದೀಗ ಬಯಲಾಗಿದೆ.
ಆರ್ಯವರ್ಧನ್‍ಗೆ ಬಿಗ್ ಬಾಸ್ ಸ್ಪೆಷಲ್ ಅವಕಾಶವೊಂದನ್ನು ನೀಡಿದೆ. ಅದು 9 ಟಾಸ್ಕ್ ಇರುತ್ತದೆ. ಆ ಟಾಸ್ಕ್ ನ ಮುಂದಾಳತ್ವವನ್ನು ಆರ್ಯವರ್ಧನ್ ವಹಿಸಿಕೊಳ್ಳಬೇಕು. ಆ 9 ಟಾಸ್ಕ್ ಗಳು ಕೂಡ ಈ ಹಿಂದೆ ಆಡಿರುವಂತದ್ದೇ ಆಗಿದೆ. ಮೊದಲ ಆಟದಲ್ಲಿ ಕಲ್ಲಾಟ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಟದಲ್ಲಿ ಸ್ವಿಮ್ಮಿಂಗ್ ಪೂಲ್ (Swimming Pool) ನಲ್ಲಿ ಕಲ್ಲುಗಳನ್ನು ಹುಡುಕುವುದಾಗಿದೆ. ಈ ಆಟಕ್ಕೆ ಆರ್ಯವರ್ಧನ್, ಸೋಮಣ್ಣ (Somanna) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಯ ತನಕ ಯಾರಿಗೆ ಏನೂ ಅನ್ನಿಸಿರಲಿಲ್ಲ.
ಈವೆನ್ ಸೋಮಣ್ಣನಿಗೆ ಕೂಡ ಅದು ನೆಗೆಟಿವ್ ಪಾಯಿಂಟ್ ಎಂದು ಅನ್ನಿಸಿ ಇರಲಿಲ್ಲ. ಬದಲಿಗೆ ನಾನು ಗೆಲ್ಲಲಿ ಎಂಬುದು ಅವರಿಗೆ ಇದೆ ಎಂದುಕೊಂಡಿದ್ದರು. ಇತ್ತ ಸ್ವಿಮ್ಮಿಂಗ್ ಪೂಲ್‍ನಲ್ಲಿ ಆಟ ಶುರುವಾದಾಗ ಗುರೂಜಿ ಒಂದಷ್ಟು ಕಲ್ಲುಗಳನ್ನು ಸೋಮಣ್ಣನ ಕಡೆಗೆ ಎಸೆದರು. ಇದನ್ನು ಜಯಶ್ರೀ (Jayashree) ಗಮನಿಸಿದ್ದು, ಗುರೂಜಿ ಅಂದುಕೊಂಡಂತೆಯೇ ಸೋಮಣ್ಣ ಸೋತರು. ಆಗ ಜಯಶ್ರೀಯು ಗುರೂಜಿ ಸ್ಟಾಟರ್ಜಿ ಬಗ್ಗೆ ಮಾತನಾಡಿದ್ದಳು. ಇದನ್ನೂ ಓದಿ: ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು
ಅವರು ತಾವೂ ಗೆಲ್ಲಬೇಕು ಅಂತ ನೋಡುತ್ತಿದ್ದಾರೆಯೇ ವಿನಃ, ನೀವೂ ಗೆಲ್ಲಲಿ ಎಂಬುದು ಅವರ ಮನಸ್ಸಲ್ಲಿ ಇರಲಿಲ್ಲ. ಈಗ ನೆಕ್ಸ್ಟ್ ನನ್ನ ಆಯ್ಕೆ ಮಾಡಿಕೊಳ್ಳುತ್ತೀನಿ ಎಂದಿದ್ದಾರಲ್ಲ ಆಗ ಬಾಲ್ ಆಟ ಆಕೆ ಮಾಡಿಕೊಳ್ಳುತ್ತಾರೆ. ಯಾಕೆಂದ್ರೆ ಅದರಲ್ಲಿ ಅವರು ಗೆದ್ದಿದ್ದರು, ನಾನು ಸೋತಿದ್ದೆ ಎಂದಿದ್ದಾಳೆ. ಬಿಗ್ ಬಾಸ್ ನೆಕ್ಸ್ಟ್ ಗೇಮ್ ಆಡುವ ಸಮಯ ನೀಡಿದಾಗ ಜಯಶ್ರೀ ಹೇಳಿದ್ದೇ ಪ್ರೂವ್ ಆಯ್ತು. ಆ ಆಟದಲ್ಲಿ ಜಯಶ್ರೀ ಸೋತು, ಗುರೂಜಿ ಮತ್ತೊಂದು ಅವಕಾಶ ನೀಡಿದರು. ಆದರೆ ಅಷ್ಟರಲ್ಲಾಗಲೇ ಓವರ್ ಕಾನ್ಫಿಡೆನ್ಸ್ ಗುರೂಜಿಗೆ ಬಂದಿತ್ತು.
ಆಗ ಮುಂದಿನ ಆಟ ಕ್ಯಾನ್ ನಿಂದ ಬಾಲ್ ಶಿಫ್ಟ್ ಮಾಡುವುನ್ನು ಆಯ್ಕೆ ಮಾಡಿಕೊಂಡರು. ಅದಕ್ಕೂ ಮತ್ತೆ ಜಯಶ್ರೀಯನ್ನೇ ಆಯ್ಕೆ ಮಾಡಿದರು. ನಿರೀಕ್ಷೆಯಂತೆ ಅವರೇ ಗೆದ್ದರು. ಆದರೆ ಮಾಡಿದ ಸಣ್ಣ ಮಿಸ್ಟೇಕ್ ಆಟದಿಂದ ಔಟ್ ಆದರೂ, ಅಧಿಕಾರ ಮನೆಮಂದಿಗೆ ವೋಟ್ (Vote) ಮಾಡಿ ಅಥವಾ ಒಮ್ಮತದಿಂದ ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಇದರಿಂದ ಇಡೀ ಮನೆ ಮಂದಿಗೆ ಗುರೂಜಿ ಏನು, ಅವರ ಟ್ರಿಕ್ಸ್ ಏನು ಎಂಬುದು ಪ್ರೂವ್ ಆಯ್ತು.
ಜಯಶ್ರೀ ತನ್ನನ್ನು ಮೊದಲ ಬಾರಿ ಆಯ್ಕೆ ಮಾಡಿಕೊಂಡಾಗ ಖುಷಿಯಾದಳು. ನಾನು ಸೋಲುತ್ತೀನಿ ಅಂತ ಗೊತ್ತಿದ್ದರೂ ಬೇಕಂತಲೇ ಮಾಡಿದ್ದಾರೆ ಎಂದುಕೊಂಡಳು. ಆದರೆ ಮತ್ತೊಂದು ಸಲ ಆಯ್ಕೆ ಮಾಡಿದಾಗ ತಮಾಷೆಯಾಗಿ ನೀವೂ ನನ್ನನ್ನ ಆಯ್ಕೆ ಮಾಡಿ, ನಾನು ಗೆದ್ದರೆ ಮತ್ತೆ ನಿಮ್ಮನ್ನೆ ಆಯ್ಕೆ ಮಾಡುತ್ತೀನಿ ಎಂದಿದ್ದಳು. ಅದಾದ ಬಳಿಕ ಮುಂದಿನ ಆಟಕ್ಕೆ ನನ್ನನ್ನು ಆಯ್ಕೆ ಮಾಡಬೇಡಿ ಎಲ್ಲರೂ ಬೇಜಾರು ಮಾಡಿಕೊಳ್ಳುತ್ತಾರೆ. ಇದು ಕೊನೆ ವಾರ ಎಲ್ಲರಿಗೂ ಅವಕಾಶ ಸಿಗಲಿ ಎಂದೇ ಹೇಳಿದ್ದಳು. ಇದನ್ನೂ ಓದಿ: ಸೋನು ಗೌಡ ಪ್ರಕಾರ ಆರ್ಯವರ್ಧನ್ ಗುರೂಜಿ ಕಳ್ಳ ಸ್ವಾಮಿ ಅಂತೆ