Bengaluru CityCinemaKarnatakaLatestMain PostSandalwood

ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಟಾಸ್ಕ್‌ಗೆ ಆರ್ಯವರ್ಧನ್ ನಿಷೇಧ?

ಪ್ರೇಕ್ಷಕರ ಅಚ್ಚುಮೆಚ್ಚಿನ ಬಿಗ್ ಬಾಸ್ ಶೋ ಕಾರ್ಯಕ್ರಮ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಇದೀಗ ಮನೆಯ ಹೈಲೈಟ್ ಆರ್ಯವರ್ಧನ್ ಎರಡನೇ ವಾರದ ಟಾಸ್ಕ್‌ನಿಂದ ಹೊರಗುಳಿಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಟಾಸ್ಕ್‌ನಿಂದ ಗುರೂಜಿ ಅವರನ್ನ ನಿಷೇಧ ಮಾಡಲಾಗಿದೆ.

ಬಿಗ್ ಬಾಸ್ ಕಾರ್ಯಕ್ರಮ ಓಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗುತ್ತಿದ್ದು, ಓಟಿಟಿನಲ್ಲಿ ಮಿಲಿಯನ್ ವಿವ್ಸ್ ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿದೆ. ದೊಡ್ಮನೆಯ ಕಾಳಗದಲ್ಲಿ ಸಾಕಷ್ಟು ವಿಚಾರಗಳಿಂದ ಆರ್ಯವರ್ಧನ್ ಹೈಲೈಟ್ ಆಗಿದ್ದವರು. ಇದೀಗ ಎರಡನೇ ವಾರದ ಟಾಸ್ಕ್‌ನಿಂದ ಗುರೂಜಿ ಅವರನ್ನ ಹೊರಗಿಡಲಾಗಿದೆ. ಎರಡು ತಂಡಗಳನ್ನಾಗಿ ಮಾಡಿ, ಪ್ರತಿ ತಂಡಕ್ಕೆ 6 ಜನ ಸ್ಪರ್ಧಿಗಳಾಗಿರುತ್ತಾರೆ. 2 ತಂಡದ ಕ್ಯಾಪ್ಟನ್ ಆಯ್ಕೆ ಮಾಡುವ ಜವಾಬ್ದಾರಿಯನ್ನ ಕ್ಯಾಪ್ಟನ್ ಅರ್ಜುನ್ ಅವರಿಗೆ ವಹಿಸಲಾಗಿತ್ತು. ಇದನ್ನೂ ಓದಿ:ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

ನಂದಿನಿ ಮತ್ತು ಸೋಮಣ್ಣ ಅವರನ್ನ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದರು. ಬಳಿಕ ಅವರವರ ತಂಡದ ಸ್ಪರ್ಧಿಗಳನ್ನ ನಂದಿನಿ ಮತ್ತು ಸೋಮಣ್ಣ ಅವರಿಗೆ ವಹಿಸಲಾಗಿತ್ತು. ತಮ್ಮ ತಂಡಕ್ಕೆ ಸದಸ್ಯರ ಆಯ್ಕೆ ಮಾಡಲು ನಂದಿನಿ ಮತ್ತು ಸೋಮಣ್ಣ ಅವರಿಗೆ ಅವಕಾಶವಿತ್ತು. ಸ್ಪರ್ಧಿ ಆಯ್ಕೆಯ ನಂತರ ಆರ್ಯವರ್ಧನ್ ಅವರನ್ನ ಕೈಬಿಡಲಾಗಿತ್ತು. ಪ್ರತಿ ತಂಡಕ್ಕೆ 6 ಜನ ಸ್ಪರ್ಧಿ ಆಗಿರುವ ಕಾರಣ ಗುರೂಜಿ ಟಾಸ್ಕ್‌ನಿಂದ ಹೊರಗುಳಿಯಬೇಕಾಯಿತು. ಟಾಸ್ಕ್ ನಿಭಾಯಿಸುವ ಅರ್ಹತೆ ಕಮ್ಮಿ ಎಂಬ ಕಾರಣಕ್ಕೆ ಗುರೂಜಿ ಅವರನ್ನ ಹೊರಗಿಡಲಾಗಿದೆ ಎನ್ನಲಾಗುತ್ತಿದೆ.

Live Tv

Leave a Reply

Your email address will not be published.

Back to top button