ಪ್ರೇಕ್ಷಕರ ಅಚ್ಚುಮೆಚ್ಚಿನ ಬಿಗ್ ಬಾಸ್ ಶೋ ಕಾರ್ಯಕ್ರಮ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಇದೀಗ ಮನೆಯ ಹೈಲೈಟ್ ಆರ್ಯವರ್ಧನ್ ಎರಡನೇ ವಾರದ ಟಾಸ್ಕ್‌ನಿಂದ ಹೊರಗುಳಿಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಟಾಸ್ಕ್‌ನಿಂದ ಗುರೂಜಿ ಅವರನ್ನ ನಿಷೇಧ ಮಾಡಲಾಗಿದೆ.
ಬಿಗ್ ಬಾಸ್ ಕಾರ್ಯಕ್ರಮ ಓಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗುತ್ತಿದ್ದು, ಓಟಿಟಿನಲ್ಲಿ ಮಿಲಿಯನ್ ವಿವ್ಸ್ ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿದೆ. ದೊಡ್ಮನೆಯ ಕಾಳಗದಲ್ಲಿ ಸಾಕಷ್ಟು ವಿಚಾರಗಳಿಂದ ಆರ್ಯವರ್ಧನ್ ಹೈಲೈಟ್ ಆಗಿದ್ದವರು. ಇದೀಗ ಎರಡನೇ ವಾರದ ಟಾಸ್ಕ್‌ನಿಂದ ಗುರೂಜಿ ಅವರನ್ನ ಹೊರಗಿಡಲಾಗಿದೆ. ಎರಡು ತಂಡಗಳನ್ನಾಗಿ ಮಾಡಿ, ಪ್ರತಿ ತಂಡಕ್ಕೆ 6 ಜನ ಸ್ಪರ್ಧಿಗಳಾಗಿರುತ್ತಾರೆ. 2 ತಂಡದ ಕ್ಯಾಪ್ಟನ್ ಆಯ್ಕೆ ಮಾಡುವ ಜವಾಬ್ದಾರಿಯನ್ನ ಕ್ಯಾಪ್ಟನ್ ಅರ್ಜುನ್ ಅವರಿಗೆ ವಹಿಸಲಾಗಿತ್ತು. ಇದನ್ನೂ ಓದಿ:ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

Live Tv
[brid partner=56869869 player=32851 video=960834 autoplay=true]


