ಬಿಗ್ ಬಾಸ್ ಒಟಿಟಿ 2 (Bigg Boss Ott 2) ಆಟಕ್ಕೆ ತೆರೆ ಬಿದ್ದಿದೆ. ಯೂಟ್ಯೂಬರ್ ಎಲ್ವಿಷ್ ಯಾದವ್ (Elvish Yadav) ಈ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಇತರೆ ಸ್ಪರ್ಧಿಗಳಿಗೆ ಕಾಂಪಿಟೇಶನ್ ಕೊಟ್ಟು 25 ಲಕ್ಷ ರೂಪಾಯಿ ಬಹುಮಾನದ ಜೊತೆ ಬಿಗ್ ಬಾಸ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.
Advertisement
ಎಲ್ವಿಷ್ ಯಾದವ್ ಅವರು ಈ ಬಾರಿ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದವರು ಯಾರೂ ಇಲ್ಲ. ಎಲ್ವಿಷ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಟ್ರೋಫಿ ಎತ್ತಿದ್ದಾರೆ. ಅಭಿಷೇಕ್ ಮಲ್ಹಾನ್ ಅವರು ರನ್ನರ್ ಅಪ್ ಆಗಿದ್ದಾರೆ. ಇಬ್ಬರ ಮಧ್ಯೆ ಸಖತ್ ಕಾಂಪಿಟೇಷನ್ ಇತ್ತು. ಇದನ್ನೂ ಓದಿ:ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್- ಉಪೇಂದ್ರ
Advertisement
Advertisement
ವೈಲ್ಡ್ ಕಾರ್ಡ್ ಮೂಲಕ ಎಲ್ವಿಷ್ ಅವರು ದೊಡ್ಮನೆಗೆ ಬಂದರು. ಅವರು ಇತರ ಸ್ಪರ್ಧಿಗಳಿಗಿಂತ ಮನೆಯಲ್ಲಿ ಕಡಿಮೆ ಸಮಯ ಇದ್ದರು. ಹೀಗಾಗಿ, ಅವರನ್ನು ವಿನ್ನರ್ ಎಂದು ಘೋಷಿಸಿದ್ದು ಏಕೆ ಎಂಬ ಪ್ರಶ್ನೆ ಸಲ್ಮಾನ್‌ಗೆ ಎದುರಾಯಿತು. ಇದಕ್ಕೆ ಸಲ್ಮಾನ್ ಖಾನ್ (Salman Khan) ಸಮಜಾಯಿಶಿ ಕೊಟ್ಟರು. ಅವರು ಕಷ್ಟಪಟ್ಟು ಟಾಸ್ಕ್ ಮಾಡಿದ್ದಾರೆ. ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಹೀಗಾಗಿ ಅವರಿಗೆ ವಿನ್ನರ್ ಪಟ್ಟ ಸಿಕ್ಕಿದೆ ಎಂದರು. ಎಲ್ವಿಷ್ ಗೆಲುವು, ಆಲಿಯಾ ಭಟ್ ಸಹೋದರಿ ಪೂಜಾ ಭಟ್‌ಗೆ ಮುಖಭಂಗವಾಗಿದೆ.
Advertisement
ಎಲ್ವಿಷ್ಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಬೆಂಬಲ ನೀಡಿದ್ದರು. ಹೀಗಾಗಿ ಅವರು ವಿನ್ ಆಗಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ. ಬಿಗ್ ಬಾಸ್ ವಿನ್ನರ್ ಘೋಷಣೆ ಬಗ್ಗೆ ಅನೇಕರಿಗೆ ಅಸಮಾಧಾನ ಮೂಡಿದೆ.