ಹಿಂದಿ ಕಿರುತೆರೆಯಲ್ಲಿ ಮನೆಮಾತಾದ ನಟಿ ಪಾಲಕ್ ಪುರಸ್ವಾನಿ (Palak Purswani) ಅವರು ಬಿಗ್ ಬಾಸ್ (Bigg Boss) ಮನೆಯಿಂದ ಔಟ್ ಆಗಿದ್ದಾರೆ. ಎಲಿಮಿನೇಟ್ ಆದ ಬೆನ್ನಲ್ಲೇ ಸಹ ಸ್ಪರ್ಧಿ- ಮಾಜಿ ಲವರ್ ಅವಿನಾಶ್ ಸಚ್‌ದೇವ್ (Avinash Sachdev) ಬಗ್ಗೆ ನಟಿ ಪಾಲಕ್ ಕಿಡಿಕಾರಿದ್ದಾರೆ. ತನ್ನ ಬ್ರೇಕಪ್ ಬಗ್ಗೆ ತಂದೆಗೆ ಹೇಳಿದ್ದಕ್ಕೆ ಹಾರ್ಟ್ ಅಟ್ಯಾಕ್ ಆಯ್ತು ಎಂದು ನಟಿ ಭಾವುಕರಾಗಿದ್ದಾರೆ.
ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಶೋನಿಂದ ಪುನೀತ್, ಆಲಿಯಾ ಸಿದ್ಧಿಕಿ ಎಲಿಮೀನೇಟ್ ಆಗುತ್ತಿದ್ದಂತೆ ನಟಿ ಪಾಲಕ್ ಆಟಕ್ಕೂ ಕೂಡ ಬ್ರೇಕ್ ಬಿದ್ದಿದೆ. ದೊಡ್ಮನೆಯ ಆಟಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ಮಾಜಿ ಲವರ್ ಬಗ್ಗೆ ನಟಿ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಇದನ್ನೂ ಓದಿ:ತಂದೆ ವಿರುದ್ಧವೇ ಕೊಲೆ ಬೆದರಿಕೆ ಆರೋಪ ಮಾಡಿದ ನಟಿ ಅರ್ಥನಾ ಬಿನು
ಅವಿನಾಶ್ ಸಚ್‌ದೇವ್ ಕಳೆದ 4 ವರ್ಷಗಳಿಂದ ನಟಿ ಪಾಲಕ್ ಡೇಟ್ ಮಾಡುತ್ತಿದ್ದರು. ಪಾಲಕ್ ಕುಟುಂಬದ ಜೊತೆ ಒಳ್ಳೆಯ ಒಡನಾಟವಿದ್ದ ಕಾರಣ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕೂಡ ಆಗಿತ್ತು. ಬಳಿಕ ಇಬ್ಬರ ನಡುವೆ ಹೊಂದಾಣಿಕೆ ಆಗದ ಕಾರಣ ಬ್ರೇಕಪ್ ಆಗಿತ್ತು. ಈ ಬಗ್ಗೆ ತಂದೆಗೆ(Father) ಹೇಳಿದ್ದಕ್ಕೆ ಬ್ರೇಕಪ್ ಸುದ್ದಿ ಕೇಳಿ, ಅವರಿಗೆ ಮೈನರ್ ಹಾರ್ಟ್ ಅಟ್ಯಾಕ್ (Heart Attack) ಆಗಿತ್ತು ಎಂದು ಶೋನಿಂದ ಎಲಿಮಿನೇಟ್ ಆಗ್ತಿದ್ದಂತೆ ಸಂದರ್ಶನವೊಂದರಲ್ಲಿ ನಟಿ ಭಾವುಕರಾಗಿದ್ದಾರೆ.
ನನ್ನ ತಂದೆ ನಮ್ಮ ಜೊತೆ ತುಂಬಾ ಬೆರೆಯುತ್ತಿದ್ದರು. ಅವಿನಾಶ್‌ನನ್ನು ಮಗನಂತೆ ನೋಡಿಕೊಳ್ತಿದ್ದರು. ನಮ್ಮಿಬ್ಬರ ಬ್ರೇಕಪ್ ಆದಾಗ ತಂದೆಗೆ ಹಾರ್ಟ್ ಅಟ್ಯಾಕ್ ಆಯಿತು. ಅಂದು ಅವರ ಕುಟುಂಬದಿಂದ ಯಾರೊಬ್ಬರೂ ಒಂದು ಕಾಲ್ ಕೂಡಾ ಮಾಡಲಿಲ್ಲ ನನ್ನ ತಂದೆಯ ಯೋಗ ಕ್ಷೇಮ ವಿಚಾರಿಸಲಿಲ್ಲ ಎಂದಿದ್ದಾರೆ. ಬ್ರೇಕಪ್ ನಂತರ ಡಿಪ್ರೆಷನ್‌ಗೆ ಹೋಗಿದ್ದಾಗಿಯೂ ಪಾಲಕ್ ರಿವೀಲ್ ಮಾಡಿದ್ದಾರೆ.
ಅವಿನಾಶ್ ನನಗೆ ಮೋಸ ಮಾಡಿದ ಸಂದರ್ಭ ನಾನು ‘ದುರ್ಗಾ-ಮಾತಾ ಕಿ ಛಾಯಾ’ ಶೂಟಿಂಗ್ ಸೆಟ್‌ನಲ್ಲಿದ್ದೆ. ನಟಿ ಸಿಮ್ರನ್ ನನ್ನ ಮುಂದೆ ಇದ್ದರು. ನಾನು ಕುಸಿದು ಕುಳಿತು ಜೋರಾಗಿ ಅಳಲಾರಂಭಿಸಿದೆ ಎಂದಿದ್ದಾರೆ. ಸಿಮ್ರಾನ್ ನನ್ನ ಬಳಿ ಏನಾಯಿತು ಎಂದು ಕಾಳಜಿಯಿಂದ ವಿಚಾರಿಸುತ್ತಿದ್ದಳು. ನಾನು ನಡೆದಿರುವ ಘಟನೆಯನ್ನು ಅವಳಿಗೆ ಹೇಳಿದೆ. ಅವಳು ನನ್ನೊಂದಿಗೆ ಸದಾ ಇದ್ದವಳು. ನಾನು ಡಿಪ್ರೆಷನ್‌ಗೆ ಒಳಗಾದೆ, ಅವಳೇ ನನ್ನನ್ನು ಡಿಪ್ರೆಷನ್‌ನಿಂದ ಹೊರಗೆ ತಂದಳು ಎಂದಿದ್ದಾರೆ. ನನ್ನ ಜೊತೆ ಡೇಟ್ ಮಾಡುವಾಗಲೇ ಅವಿನಾಶ್ ನನಗೆ ಮೋಸ ಮಾಡಿದ್ದ ಎಂದು ನಟಿ ಮಾತನಾಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]